ಆ್ಯಪ್ನಗರ

ವಿವೇಕಾನಂದರ ಚಿಂತನೆ ಸದೃಢ ಸಮಾಜಕ್ಕೆ ಪ್ರೇರಣೆ

ಮುಂಡರಗಿ : ದೇಶ ಕಂಡ ಅಪರೂಪದ ದೇಶಪ್ರೇಮಿ ಸ್ವಾಮಿ ವಿವೇಕಾನಂದರ ಬದುಕು ಮತ್ತು ಚಿಂತನೆಗಳು ಸದೃಢ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಹೇಳಿದರು. ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ನಿಮಿತ್ತ ಸಸಿಗಳಿಗೆ ನೀರುಣಿಸುವ ಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Vijaya Karnataka 13 Jan 2019, 5:00 am
ಮುಂಡರಗಿ : ದೇಶ ಕಂಡ ಅಪರೂಪದ ದೇಶಪ್ರೇಮಿ ಸ್ವಾಮಿ ವಿವೇಕಾನಂದರ ಬದುಕು ಮತ್ತು ಚಿಂತನೆಗಳು ಸದೃಢ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಹೇಳಿದರು. ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ನಿಮಿತ್ತ ಸಸಿಗಳಿಗೆ ನೀರುಣಿಸುವ ಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Vijaya Karnataka Web vivekanandas thinking is motivated by a strong society
ವಿವೇಕಾನಂದರ ಚಿಂತನೆ ಸದೃಢ ಸಮಾಜಕ್ಕೆ ಪ್ರೇರಣೆ


ದೇಶದಲ್ಲಿ ಇಲ್ಲಿವರೆಗೆ ಈ ದೇಶವನ್ನು ಸ್ವಾಮಿ ವಿವೇಕಾನಂದರು ಪ್ರೀತಿಸಿದ, ಪ್ರೇರೇಪಿಸಿದ ಎಚ್ಚರಗೊಳಿಸಿದ ಮತ್ತು ಸ್ವತಃ ತಾವೇ ಭಾರತವಾಗಿ ಬದುಕಿದ ಮೊತ್ತೊಬ್ಬ ಸನ್ಯಾಸಿ ಇಲ್ಲ. ಅವರು ಶ್ರೇಷ್ಠ ಪರಂಪರೆ, ನೈಸರ್ಗಿಕ, ಮಾನವ ಸಂಪನ್ಮೂಲ, ಇದ್ದರೂ ಹಸಿವಿನಿಂದ, ದಾರಿದ್ರ್ಯದಿಂದ ನರಳುತ್ತಿರುವ ಭಾರತದ ಬಗ್ಗೆ ಸದಾ ವಿಚಾರ ಮಾಡುತ್ತಿದ್ದರು. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿದವರು. ಹಸಿವಿನಿಂದ ಮುಕ್ತಗೊಳಿಸುವ ಸಂಕಲ್ಪ ಹೊಂದಿದ್ದರು. ನಂತರವೇ ಅವರು ಚಿಕ್ಯಾಗೋಗೆ ಸರ್ವಧರ್ಮ ಸಮ್ಮೇಳನಕ್ಕೆ ಹೋಗಿ ದಿಗ್ವಿಜಯ ಸಾಧಿಸಿ ಬಂದರು. ಅವರು ಹೇಳಿದ್ದ ದರಿದ್ರೋದೇವೋಭವ ಮಾತಿಗೆ ಅನುಗುಣವಾಗಿ ಅನೇಕ ಸೇವಾ ಕಾರ್ಯ ಹಮ್ಮಿಕೊಂಡಿದ್ದರು, ಅವರ ದೇಶದ ಅಪಾರ ಪ್ರೇಮವೇ ಇಂದಿಗೂ ಅವರ ಹೆಸರು ಅಜರಾಮರವಾಗಿದೆ, ಆದರ್ಶ ಗುಣಗಳು ಯುವಕರ ಮೇಲೆ ಪರಿಣಾಮ ಬೀರುತ್ತಿವೆ ಎಂದರು.

ಜಯಣ್ಣ, ಸೇನೆ ಜಿಲ್ಲಾ ಅಧ್ಯಕ್ಷ ಮಂಜುನಾಥ ಮುಧೋಳ, ವಿಲಾಸ ಚಿನ್ನ, ಸೋಮಶೇಖರ ಹಿರೇಮಠ, ಕೃಷ್ಣ ಗಾರವಾಡ, ಹನುಮಂತ ಅರ್ಕಸಾಲಿ, ಶ್ರೀಕಾಂತ ಬಡಿಗೇರ, ನಾರಾಯಣ ಮಹೇಂದ್ರಕರ, ಯಲ್ಲಪ್ಪ ಅರ್ಕಸಾಲಿ, ಚಂದ್ರಶೇಖರ ಹಿರೇಮಠ, ಪ್ರವೀಣ ಅರ್ಕಸಾಲಿ, ಶಿವು ನವಲಗುಂದ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ