ಆ್ಯಪ್ನಗರ

ಜಲಶಕ್ತಿ ಅಭಿಯಾನ ಜಾಗೃತಿ ಕಾರ್ಯಕ್ರಮ

ಶಿರಹಟ್ಟಿ: ಪಪಂನಿಂದ ಸ್ಥಳೀಯ ಡಬಾಲಿ ಕಾಲೇಜಿನಲ್ಲಿಹಮ್ಮಿಕೊಂಡಿದ್ದ ಸಮಗ್ರ ಜಲನೀತಿ ಮತ್ತು ಜಲಶಕ್ತಿ ಅಭಿಯಾನ ಕಾರ‍್ಯಕ್ರಮ ನಡೆಯಿತು. ಪ್ರಾ. ಎಂ.ಸಿ.ಭಜಂತ್ರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿಪರಿಸರ ಮಾಲಿನ್ಯದಿಂದ ಆಗುತ್ತಿರುವಂತಹ ದುಷ್ಪರಿಣಾಮ ತಡೆಗಟ್ಟುವುದಕ್ಕೆ ಶಾಲಾ-ಕಾಲೇಜುಗಳ

Vijaya Karnataka 19 Sep 2019, 5:00 am
ಶಿರಹಟ್ಟಿ: ಪಪಂನಿಂದ ಸ್ಥಳೀಯ ಡಬಾಲಿ ಕಾಲೇಜಿನಲ್ಲಿಹಮ್ಮಿಕೊಂಡಿದ್ದ ಸಮಗ್ರ ಜಲನೀತಿ ಮತ್ತು ಜಲಶಕ್ತಿ ಅಭಿಯಾನ ಕಾರ‍್ಯಕ್ರಮ ನಡೆಯಿತು.
Vijaya Karnataka Web water shakti abhiyan awareness program
ಜಲಶಕ್ತಿ ಅಭಿಯಾನ ಜಾಗೃತಿ ಕಾರ್ಯಕ್ರಮ

ಪ್ರಾ. ಎಂ.ಸಿ.ಭಜಂತ್ರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿಪರಿಸರ ಮಾಲಿನ್ಯದಿಂದ ಆಗುತ್ತಿರುವಂತಹ ದುಷ್ಪರಿಣಾಮ ತಡೆಗಟ್ಟುವುದಕ್ಕೆ ಶಾಲಾ-ಕಾಲೇಜುಗಳ ಹಂತದಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದಕ್ಕಾಗಿ ಜಲಶಕ್ತಿ ಅಭಿಯಾನ ಕಾರ‍್ಯಕ್ರಮ ಅನುಷ್ಠಾನಗೊಳಿಸಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಪಪಂ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಮಾತನಾಡಿ, ಅಭಿಯಾನದ ಮೂಲ ಉದ್ದೇಶವಾದಂತಹ ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಜಲಮೂಲಗಳ ನವೀಕರಣ, ನೀರಿನ ಪುನರ್‌ ಬಳಕೆ ಮತ್ತು ಕೊಳವೆ ಭಾವಿ ಜಲ ಮರುಪೂರಣ, ಕೆರೆ-ಕೊಳ್ಳಗಳ ಪುನರ್‌ಭರ್ತಿ, ಜಲಾನಯನ ಅಭಿವೃದ್ಧಿ ಮತ್ತು ತೀವ್ರವಾದ ಅರಣ್ಯೀಕರಣಗಳ ಕುರಿತು ಏರ್ಪಡಿದ್ದ ಈ ಜಾಗೃತಿಯಲ್ಲಿಕಾಲೇಜಿನ ಉಪನ್ಯಾಸಕ ಪರಶುರಾಮ್‌ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿವಿದ್ಯಾರ್ಥಿಗಳಾದ ಎ.ಎಂ.ಲೋಹಾರ, ಸುಧಾ ಬಾರಕೇರ, ಎಂ.ಬಿ.ಬಾರಕೇರ ಪ್ರಬಂಧ ಮಂಡಿಸಿದ್ದು ಪಪಂ ಕೊಡ ಮಾಡುವಂತಹ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ