ಆ್ಯಪ್ನಗರ

ಕೊನೆವಾರದವರೆಗೆ ಕಾಲುವೆಗೆ ನೀರು: ರೈತರ ಹರ್ಷ

ನರಗುಂದ: ಮಲಪ್ರಭಾ ಕಾಲುವೆ ನೀರು ಸ್ಥಗಿತಗೊಳಿಸುತ್ತಿರುವುದನ್ನು ವಿರೋಧಿಸಿ ರೈತ ಹೋರಾಟಗಾರರು ಜಿಲ್ಲಾಧಿಕಾರಿಗಳು ಮತ್ತು ನೀರಾವರಿ ಮಹಾಮಂಡಳಕ್ಕೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ್ದು ಡಿ.20ರ ವರೆಗೆ ಕಾಲುವೆಗೆ ನೀರು ಹರಿಸುವ ಭರವಸೆ ನೀಡಿರುವುದು ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.

Vijaya Karnataka 7 Dec 2018, 5:00 am
ನರಗುಂದ: ಮಲಪ್ರಭಾ ಕಾಲುವೆ ನೀರು ಸ್ಥಗಿತಗೊಳಿಸುತ್ತಿರುವುದನ್ನು ವಿರೋಧಿಸಿ ರೈತ ಹೋರಾಟಗಾರರು ಜಿಲ್ಲಾಧಿಕಾರಿಗಳು ಮತ್ತು ನೀರಾವರಿ ಮಹಾಮಂಡಳಕ್ಕೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ್ದು ಡಿ.20ರ ವರೆಗೆ ಕಾಲುವೆಗೆ ನೀರು ಹರಿಸುವ ಭರವಸೆ ನೀಡಿರುವುದು ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.
Vijaya Karnataka Web water to the canal till last year farmers are happy
ಕೊನೆವಾರದವರೆಗೆ ಕಾಲುವೆಗೆ ನೀರು: ರೈತರ ಹರ್ಷ


ಮುಂಗಾರು ಮಳೆ ಕೊರತೆ ನಡುವೆ ಹಿಂಗಾರು ಮಳೆ ಮಾಯವಾಗಿದೆ. ಇಂತಹ ಸಂದರ್ಭದಲ್ಲಿ ಮಲಪ್ರಭಾ ಕಾಲುವೆ ನೀರನ್ನು ಡಿಸೆಂಬರ್‌ ಮೊದಲ ವಾರದಲ್ಲಿ ಸ್ಥಗಿತಗೊಳಿಸುತ್ತಿರುವುದಕ್ಕೆ ರೈತರು, ರೈತ ಹೋರಾಟಗಾರರು ಮತ್ತು ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಡಿಸೆಂಬರ್‌ ಕೊನೆವರೆಗೂ ಕಾಲುವೆಗೆ ನೀರು ಹರಿಸಬೇಕು. ಸ್ಥಗಿತಗೊಳಿಸಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದವು. ರೈತರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಕೊನೆ ವಾರದವರೆಗೆ ನೀರು ಬಿಡುವ ಭರವಸೆ ನೀಡಿದ್ದಾರೆ ಎಂದು ರೈತ ಹೋರಾಟಗಾರ ಎಸ್‌.ಬಿ.ಜೋಗಣ್ಣವರ ಪತ್ರಿಕೆಗೆ ತಿಳಿಸಿದರು.

1239ನೇ ದಿನಕ್ಕೆ ಹೋರಾಟ:

ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಬುಧವಾರ ನಡೆದ 1239ನೇ ದಿನದ ಧರಣಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ನ್ಯಾಯಾಧೀಕರಣ ತೀರ್ಪಿನಂತೆ ರಾಜ್ಯ ಸರಕಾರ ನೀರು ಪಡೆಯುವುದು ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಕುರಿತು ಡಿ.6 ರಂದು ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಸ್ಪಷ್ಟ ತೀರ್ಮಾಣ ಕೈಗೊಂಡು ಕೂಡಲೆ ರಾಜ್ಯದ ಪಾಲಿನ ನೀರು ಪಡೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕರೆವ್ವ ಹೂಲಿ ಮಾತನಾಡಿ, ನ್ಯಾಯಾಧೀಕರಣ ತೀರ್ಪು ನೀಡಿದರೂ ರಾಜ್ಯ ಸರಕಾರ ನೀರು ತಂದುಕೊಡುವಲ್ಲಿ ವಿಳಂಭ ಮಾಡುತ್ತಿದೆ. ಕೂಡಲೆ ಸರ್ವ ಪಕ್ಷ ದ ಸಭೆಯಲ್ಲಿ ಚರ್ಚಿಸಿ 13 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಮುಂದಾಗಬೇಕು. ಈ ಭಾಗದ ಬರದಿಂದ ತತ್ತರಿಸಿರುವ ರೈತರ ಜಮೀನಿಗೆ ವರ್ಷ ಪೂರ್ತಿ ನೀರುಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಾಗರತ್ನ ಸೌಳಬಾವಿ, ಮಂಜವ್ವ, ಚನ್ನವ್ವ ಆಯಟ್ಟಿ, ಮಾಲಾ ದೇಸಾಯಿ,ಜನ್ನತ್ಬಿ ಮುಲ್ಲಾನವರ, ಯಂಕಪ್ಪ ಹುಜರತ್ತಿ, ಎಚ್‌.ಎನ್‌.ಕೋರಿ, ಚನ್ನಪ್ಪಗೌಡ ಪಾಟೀಲ, ಮೃತ್ಯುಂಜಯ ಹಿರೇಮಠ, ಈರಪ್ಪ ಗಡಿಗಿಶೆಟ್ರ, ಎಸ್‌.ಕೆ. ಗಿರಿಯಣ್ಣವರ,ಕಲ್ಲಪ್ಪ ಚಲವಣ್ಣವರ, ರಾಮಪ್ಪ ಸಾಬಳೆ, ವಾಸು ಚವ್ಹಾಣ, ಹನಮಂತ ಸರನಾಯ್ಕರ, ಬಸಪ್ಪ ತೆಗ್ಗಿನಮನಿ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ