ಆ್ಯಪ್ನಗರ

ಪ್ರಗತಿಯಲ್ಲಿ ನೇಕಾರರ ಸಹಕಾರ ಸಂಘ

ಗದಗ: ಅಲ್ಪ ಠೇವಣಿಯೊಂದಿಗೆ ಆರಂಭವಾದ ನೇಕಾರರ ಪತ್ತಿನ ಸಹಕಾರ ಸಂಘವು ಪ್ರಗತಿಪಥದೊಂದಿಗೆ ಮುನ್ನಡೆದಿದೆ. ಆರ್ಥಿಕವಾಗಿ ಸಬಲತೆಯನ್ನೂ ಲಾಭವನ್ನೂ ಹೊಂದುತ್ತಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಹೇಳಿದರು. ಬೆಟಗೇರಿಯ ನೇಕಾರರ ಪತ್ತಿನ ಸಹಕಾರ ಸಂಘದ ಆವರಣದಲ್ಲಿನಡೆದ 8ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Vijaya Karnataka 26 Sep 2019, 5:00 am
ಗದಗ: ಅಲ್ಪ ಠೇವಣಿಯೊಂದಿಗೆ ಆರಂಭವಾದ ನೇಕಾರರ ಪತ್ತಿನ ಸಹಕಾರ ಸಂಘವು ಪ್ರಗತಿಪಥದೊಂದಿಗೆ ಮುನ್ನಡೆದಿದೆ. ಆರ್ಥಿಕವಾಗಿ ಸಬಲತೆಯನ್ನೂ ಲಾಭವನ್ನೂ ಹೊಂದುತ್ತಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಹೇಳಿದರು. ಬೆಟಗೇರಿಯ ನೇಕಾರರ ಪತ್ತಿನ ಸಹಕಾರ ಸಂಘದ ಆವರಣದಲ್ಲಿನಡೆದ 8ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Vijaya Karnataka Web 25RUDRAGOUD8_25


ಸಹಕಾರಿ ಸಂಘ ಸಂಸ್ಥೆಗಳು ಪ್ರಗತಿಯೊಂದಿಗೆ ಮುನ್ನಡೆಯಬೇಕಾದರೆ ಸರ್ವ ನಿರ್ದೆಶಕರ, ಸದಸ್ಯರ ಸಹಕಾರ ಮುಖ್ಯ ಎಂದರು.

ಸಹಕಾರಿ ಬ್ಯಾಂಕುಗಳಿಗೆ ಠೇವಣಿದಾರರು ಹಾಗೂ ಷೇರುದಾರರು ಜೀವಾಳವಾಗಿದ್ದು, ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಿದಲ್ಲಿಮಾತ್ರ ಸಹಕಾರಿ ಸಂಘ ಸಂಸ್ಥೆಗಳು ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಾಧ್ಯ. ಪ್ರಸಕ್ತ ಸಾಲಿನಲ್ಲಿಸಂಘವು 65 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದ್ದು ಈ ವರ್ಷ 6 ಲಕ್ಷ 95 ಸಾವಿರ ರೂ. ಲಾಭ ಪಡೆಯುವ ಮೂಲಕ ಷೇರುದಾರರಿಗೆ ಶೇ. 12 ರಷ್ಟು ಲಾಭಾಂಶ ಹಂಚಿಕೆ ಮಾಡಲು ಸರ್ವ ನಿರ್ದೆಶಕರು ನಿರ್ಧರಿಸಿದ್ದಾರೆ ಎಂದರು. ಸಾಲ ಪಡೆದವರು ಸರಿಯಾದ ಸಮಯಕ್ಕೆ ಮರುಪಾವತಿಸದಿದ್ದಲ್ಲಿಅಂತಹ ಸಾಲಿಗರ ವಿರುದ್ಧ ಸಾಲ ವಸೂಲಿಗೆ ಕಾನೂನಾತ್ಮಕ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ವಿ.ಕೆ.ಗುರುಮಠ, ನೇಕಾರರು ಸಂಘದ ಉದ್ದೇಶ ಅರಿತು ಸಂಘದ ಪ್ರಗತಿಗೆ ಶ್ರಮಿಸಬೇಕೆಂದರು.

ಜವಳಿ ಉತ್ಪಾದಕ ಸಂಘದ ಅಧ್ಯಕ್ಷ ಹಾಗೂ ಸಂಘದ ನಿರ್ದೆಶಕ ಅನಿಲ ಗಡ್ಡಿ ಮಾತನಾಡಿ, ಜಿಲ್ಲೆಯಲ್ಲಿಯೇ ಪ್ರಥಮವಾಗಿ ಸರಕಾರದ ಸೌಲಭ್ಯಗಳನ್ನು ನೇಕಾರರಿಗೆ ಪ್ರಾಮಾಣಿಕವಾಗಿ ಒದಗಿಸುವ ಮೂಲಕ ನೇಕಾರರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ವೀರಭದ್ರಪ್ಪ ಗಂಜಿ, ಸುರೇಶ ಉಂಕಿ, ವಿಜಯ ಕಬಾಡಿ, ಅಮರೇಶ ಚಾಗಿ, ಮೈಲಾರಪ್ಪ ಅರಣಿ, ವಿಷ್ಣು ಪಾಸ್ತೆ ಇದ್ದರು.ಸುಭಾಸ ಗಂಜಿ ಸ್ವಾಗತಿಸಿದರು. ಚನ್ನವೀರಪ್ಪ ಚನ್ನಪ್ಪನವರ ಪ್ರಾರ್ಥಿಸಿದರು. ಪ್ರಭು ನೀಲಗುಂದ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ