ಆ್ಯಪ್ನಗರ

ಮಹಿಳೆಯರಿಗೆ ಕಾನೂನು ಅರಿವು ಅವಶ್ಯ

ಗದಗ: ಬದಲಾಗುತ್ತಿರುವ ಸಮಾಜದಲ್ಲಿಮಹಿಳೆಯರು ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿಜಾಗೃತರಾಗುವುದರೊಂದಿಗೆ ಸರಕಾರ ಜಾರಿಗೆ ತಂದಿರುವ ಕಾನೂನು ಅರಿತು ಜೀವನ ನಡೆಸಬೇಕು ಎಂದು ನ್ಯಾಯವಾದಿ ಸುಮಿತ್ರ ಶ್ರೀಗಿರಿ ಹೇಳಿದರು.

Vijaya Karnataka 25 Sep 2019, 5:00 am
ಗದಗ: ಬದಲಾಗುತ್ತಿರುವ ಸಮಾಜದಲ್ಲಿಮಹಿಳೆಯರು ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿಜಾಗೃತರಾಗುವುದರೊಂದಿಗೆ ಸರಕಾರ ಜಾರಿಗೆ ತಂದಿರುವ ಕಾನೂನು ಅರಿತು ಜೀವನ ನಡೆಸಬೇಕು ಎಂದು ನ್ಯಾಯವಾದಿ ಸುಮಿತ್ರ ಶ್ರೀಗಿರಿ ಹೇಳಿದರು.
Vijaya Karnataka Web women need legal knowledge
ಮಹಿಳೆಯರಿಗೆ ಕಾನೂನು ಅರಿವು ಅವಶ್ಯ


ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿಏರ್ಪಡಿಸಿದ್ದ ಶ್ರೀಮತಿ ಪಾರ್ವತಮ್ಮ ಮಲ್ಲಪ್ಪ ಗೌಡರ ಸ್ಮರಣಾರ್ಥ ಜಾಗೃತ ಮಹಿಳೆ ಸಮಸ್ಯೆ ಮತ್ತು ಪರಿಹಾರ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ, ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳನ್ನು ಸಮರ್ಥವಾಗಿ ಎದುರಿಸಿ ಸಬಲ ಮಹಿಳೆಯೆಂಬ ಸಂದೇಶವನ್ನು ಸಮಾಜಕ್ಕೆ ನೀಡುವುದರ ಮೂಲಕ ಮಹಿಳೆಯರು ಜಾಗೃತರಾಗಬೇಕು. ಅಲ್ಲದೆ ಪ್ರಸ್ತುತ ಸನ್ನಿವೇಶದಲ್ಲಿಜಾರಿಯಲ್ಲಿರುವ ಕಾನೂನು ತಿಳಿದುಕೊಂಡು ಕಾನೂನಿನ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಜಿಲ್ಲಾಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ವೀರೇಂದ್ರ ಹುಯಿಲಗೋಳ ಮಾತನಾಡಿ, ಇಂದಿನ ಸಮಾಜದಲ್ಲಿಮಹಿಳೆಯರು ಜಾಗೃತರಾಗುವ ಜತೆಗೆ ಎಲ್ಲಕಾನೂನು ಅರ್ಥ ಮಾಡಿಕೊಂಡಿರಬೇಕು. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಇಂತಹ ಅನೇಕ ವಿಷಯಗಳ ಮೂಲಕ ಉಪನ್ಯಾಸ ಏರ್ಪಡಿಸಿ ಎಲ್ಲಸ್ತರದ ಜನರಲ್ಲಿಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ವಿಶಾಂತ ಪ್ರಾಚಾರ್ಯೆ ಹಾಗೂ ಹಾಸ್ಯ ಕಲಾವಿದರಾದ ಕವಿತಾ ಕಾಶಪ್ಪನವರ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಶರಣು ಗೋಗೇರಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಗಂಗೂಬಾಯಿ ಪವಾರ, ದತ್ತಿ ದಾನಿಗಳಾದ ಶಾಂತಾದೇವಿ ಅಂದಾನಪ್ಪ ಗೌಡರ, ಸಾಹಿತಿಗಳಾದ ಅಂದಾನೆಪ್ಪ ವಿಭೂತಿ, ಅ.ಓ. ಪಾಟೀಲ, ಬಿ.ಎಫ್‌. ಪೂಜಾರ, ರವಿರಾಜ ಪವಾರ, ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ