ಆ್ಯಪ್ನಗರ

ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯದೇ ಇರಲಿ

ಡಂಬಳ : ಹರಿಯುವ ನೀರನ್ನು ಸಂಗ್ರಹ ಮಾಡಿಕೊಳ್ಳಲು ಮತ್ತು ಮಳೆ ಕೈಕೊಟ್ಟಾಗ ಬೆಳೆ ಒಣಗುವ ಪರಿಸ್ಥಿಯಲ್ಲಿ ಚೆಕ್‌ ಡ್ಯಾಂ ರೈತರಿಗೆ ವರದಾನವಾಗಲಿದ್ದು ಬರಗಾಲದ ಸಂದರ್ಭದಲ್ಲಿಯು ಚೆಕ್‌ ಡ್ಯಾಂ ಭರ್ತಿಯಾಗಿ ಹರಿಯುತ್ತಿರುವದು ಖುಷಿ ವಿಚಾರವಾಗಿದ್ದು, ಸರಕಾರದ ಯೋಜನೆ ಯಾವುದೇ ಕಾಮಗಾರಿಗಳು ಕಳಪೆ

Vijaya Karnataka 23 Dec 2018, 5:00 am
ಡಂಬಳ : ಹರಿಯುವ ನೀರನ್ನು ಸಂಗ್ರಹ ಮಾಡಿಕೊಳ್ಳಲು ಮತ್ತು ಮಳೆ ಕೈಕೊಟ್ಟಾಗ ಬೆಳೆ ಒಣಗುವ ಪರಿಸ್ಥಿಯಲ್ಲಿ ಚೆಕ್‌ ಡ್ಯಾಂ ರೈತರಿಗೆ ವರದಾನವಾಗಲಿದ್ದು ಬರಗಾಲದ ಸಂದರ್ಭದಲ್ಲಿಯು ಚೆಕ್‌ ಡ್ಯಾಂ ಭರ್ತಿಯಾಗಿ ಹರಿಯುತ್ತಿರುವದು ಖುಷಿ ವಿಚಾರವಾಗಿದ್ದು, ಸರಕಾರದ ಯೋಜನೆ ಯಾವುದೇ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಡೆಯದಂತೆ ಎಲ್ಲಾ ಅಧಿಕಾರಿಗಳು ಜಾಗೃತೆ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಅಭಿಪ್ರಾಯಪಟ್ಟರು.
Vijaya Karnataka Web work should not be done at a poor level
ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯದೇ ಇರಲಿ


ಡಂಬಳ ಗ್ರಾಮದ ಶಿವಪ್ಪ ಮಂಗೋಜಿ ಅವರ ಹೊಲದ ಹತ್ತಿರ ಇತ್ತೀಚಿಗೆ ನಿರ್ಮಾಣಗೊಂಡ ಚೆಕ್‌ ಡ್ಯಾಂ ಮಳೆ ಮತ್ತು ಕೆರೆ ನೀರಿನಿಂದ ಭರ್ತಿಯಾಗಿದ್ದರಿಂದ ಭೇಟಿ ನೀಡಿ ಮಾತನಾಡಿ, ಚೆಕ್‌ ಡ್ಯಾಂ ನಿರ್ಮಾಣದಂತಹ ಕಾರ್ಯ ಒಳ್ಳೆಯ ಯೋಜನೆಯಾಗಿದ್ದು ಇದರಿಂದ ಅಂತರ್ಜಲ ಹೆಚ್ಚಳವಾಗುತ್ತದೆ ಬರಗಾಲದಲ್ಲಿ ಮಳೆಕೈಕೊಟ್ಟ ಸಂದರ್ಭದಲ್ಲಿ ರೈತರಿಗೆ ಜಾನುವಾರುಗಳಿಗೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಹರಿಯುವ ನೀರು ವ್ಯರ್ಥವಾಗಿ ನದಿಗೆ ಸೇರುವದರಿಂದ ಇಂತಹ ಯೋಜನೆ ಮೂಲಕ ಸರಕಾರ ನೀರಿನ ಸಮರ್ಪಕ ಸದ್ಬಳಕೆಗೆ ಆದ್ಯತೆ ನೀಡಿದ್ದು, ಅಧಿಕಾರಿಗಳು ಇದೇ ರೀತಿ ಗುಣಮಟ್ಟದ ಕಡೆ ಗಮನ ಹರಿಸಬೇಕು. ಚೆಕ್‌ ಡ್ಯಾಂ ಭರ್ತಿಯಾಗಿ ಹರಿಯುತ್ತಿರುವುದನ್ನು ಕಂಡು ಖುಷಿ ಆಯ್ತು ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ರಮೇಶ ನರೇಗಾಯೋಜನೆಯಡಿ ತಾಲೂಕಿನಲ್ಲಿ ಹಂತ ಹಂತವಾಗಿ 200ಕ್ಕೂ ಅಧಿಕ ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದ್ದು, ಕೆಲವು ಕಡೆ ಪ್ರಗತಿಯಲ್ಲಿವೆ ರೈತರಿಂದಲು ಉತ್ತಮ ಸ್ಪಂದನೆ ದೊರೆತಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಸ್‌.ಸಿ.ಮಹೇಶ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಸ್‌. ಕಲ್ಮನಿ, ಸಹಾಯಕ ಎಂಜಿನಿಯರ್‌ ಎಸ್‌.ಎಸ್‌.ಗಾಳಿ, ಲೊಕೇಶ ತಾಲೂಕು ತೋಟಗಾರಿಕ ಅಧಿಕಾರಿ ಸುರೇಶ ಕುಂಬಾರ, ಸಹಾಯಕ ಕೃಷಿ ಅಧಿಕಾರಿ ಎಸ್‌.ಬಿ.ಸೂಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಎಂ. ಗಂಗಾವತಿ, ಹುಸೇನಸಾಬ ಮೂಲಿಮನಿ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಮಠದ, ಪಿಡಿಓ ಎಸ್‌.ಕೆ.ಕವಡಲೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ