ಆ್ಯಪ್ನಗರ

ವಿಶ್ವ ಔಷಧ ತಜ್ಞರ ದಿನ,ಜಾಗೃತಿ ಜಾಥಾ

ಗದಗ: ಜಿಲ್ಲಾಔಷಧ ವ್ಯಾಪಾರಸ್ಥರ ಸಂಘ, ಕೆಎಲ್‌ಇ ಔಷಧ ವಿಜ್ಞಾನ ಮಹಾವಿದ್ಯಾಲಯ ಹಾಗೂ ಬಸವೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ಬುಧವಾರ ನಗರದ ಮಹಾತ್ಮಾಗಾಂಧಿ ಸರ್ಕಲ್‌ನಲ್ಲಿವಿಶ್ವ ಔಷಧ ತಜ್ಞರ ದಿನ ಆಚರಿಸಲಾಯಿತು.

Vijaya Karnataka 26 Sep 2019, 5:00 am
ಗದಗ: ಜಿಲ್ಲಾಔಷಧ ವ್ಯಾಪಾರಸ್ಥರ ಸಂಘ, ಕೆಎಲ್‌ಇ ಔಷಧ ವಿಜ್ಞಾನ ಮಹಾವಿದ್ಯಾಲಯ ಹಾಗೂ ಬಸವೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ಬುಧವಾರ ನಗರದ ಮಹಾತ್ಮಾಗಾಂಧಿ ಸರ್ಕಲ್‌ನಲ್ಲಿವಿಶ್ವ ಔಷಧ ತಜ್ಞರ ದಿನ ಆಚರಿಸಲಾಯಿತು.
Vijaya Karnataka Web 25RUDRAGOUD19_25
ಗದಗ ಗಾಂಧಿವೃತ್ತದಲ್ಲಿಜಿಲ್ಲಾಔಷಧ ವ್ಯಾಪಾರಸ್ಥರ ಸಂಘದಿಂದ ವಿಶ್ವ ಔಷಧ ತಜ್ಞರ ದಿನ ಆಚರಿಸಲಾಯಿತು.


ಔಷಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಥಾವನ್ನು ಜಿಲ್ಲಾಔಷಧ ಸಹಾಯಕ ನಿಯಂತ್ರಕ ಸಂಗಣ್ಣ ಶಿಳ್ಳಿ ಉದ್ಘಾಟಿಸಿದರು. ಗಾಂಧಿ ವೃತ್ತದಿಂದ ಆರಂಭವಾದ ರಾರ‍ಯಲಿಯು ಮಹೇಂದ್ರಕರ ಸರ್ಕಲ್‌, ಟಾಂಗಾಕೂಟ, ಮಾರುಕಟ್ಟೆ ಮೂಲಕ ಹಳೇ ಬಸ್‌ ನಿಲ್ದಾಣ, ರೋಟರಿ ಸರ್ಕಲ್‌ ಮಾರ್ಗವಾಗಿ ಗಾಂಧಿ ವೃತ್ತದವರಿಗೆ ಜಾಗೃತಿ ಜಾಥಾ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿಔಷಧಗಳ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿ ಬಳಸಿ ಎಂದು ತಿಳಿವಳಿಕೆ ನೀಡಿದರು.

ಪ್ರಾಚಾರ್ಯ ಡಾ.ಡಿ.ಎನ್‌. ಪಾಟೀಲ ಮಾತನಾಡಿ, ಪ್ರತಿಯೊಬ್ಬರು ಔಷಧಗಳ ಉಪಯೋಗ ಹಾಗೂ ಅದರ ಮಹತ್ವ ತಿಳಿದುಕೊಳ್ಳಬೇಕು ಎಂದರು.
ಮಹೇಶ ಪಾಲಕರ ಮಾತನಾಡಿದರು. ಪ್ರೊ.ಡಿ.ಬಿ. ಪಾಟೀಲ, ಎಂ.ಬಿ. ರಮಣೆ, ಆರ್‌. ಐ. ನದಾಫ, ನಿಂಗಪ್ಪ ದೇಸಾಯಿ, ಎಂ.ಬಿ. ಕಾಬಾಳಿ, ಭಾಸ್ಕರ ರೆಡ್ಡಿ, ಶಿವು ಆನೆಗುಂದಿ, ಜಗನ್ನಾಥ ಅಳವಂಡಿ, ಮಹಾವೀರ ಜೈನ, ರಾಜೇಂದ್ರ ಮೆಡಿಕಲ್‌ ಮುಂಡರಗಿ, ಲಿಂಗನಗೌಡರ, ಸಂಜೀವ ರೆಡ್ಡೆರ ರೋಣ, ನಾಗರಾಜ ಗಂಗಾವತಿ, ಹಾಲೇಶ, ಉಮೇಶ ಜೀಗರೆಡ್ಡಿ, ಪರಶುರಾಮ ಬೇಲಿ, ಪಾರ್ವತಿ ಮೆಡಿಕಲ್‌ ಹುಲಕೋಟಿ, ಬಿ. ಪವಿತ್ರಾ ರೆಡ್ಡಿ, ಸ್ನೇಹಾ ನೀಲಗುಂದಮಠ ಇದ್ದರು. ಬಿ. ಮಂಜುನಾಥÜ ರೆಡ್ಡಿ ನಿರೂಪಿಸಿದರು. ವಿಶ್ವನಾಥ ವಣಕಿಯವರು ಸ್ವಾಗತಿಸಿದರು. ಜ್ಞಾನೇಶ ಖೋಕಲೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ