ಆ್ಯಪ್ನಗರ

ಹೆಚ್ಚಿದ ಬೆಲೆಗೆ ಕಡಿವಾಣ ಎಂದು?

ರೋಣ : ಲಾಕ್‌ಡೌನ್‌ ಮಾಡಿರುವುದು ಜನರಿಗೆ ಸಂಕಷ್ಟ ತಂದರೆ ವರ್ತಕರಿಗೆ ಮಾತ್ರ ಶುಕ್ರದೆಸೆ ತಿರುಗಿಸಿದೆ. ಮದ್ಯ ಮಾರಾಟ ನಿಷೇಧವಿದ್ದರೂ ಕೆಲಕಡೆ ಕಳ್ಳಬಟ್ಟಿ ಸಾರಾಯಿ ಎಗ್ಗಿಲ್ಲದೆ ನಡೆಯುತ್ತಿದೆ. ದಿನಸಿ ವಸ್ತುಗಳನ್ನು ಕೂಡ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದು, ಗುಟ್ಕಾ ಬೆಲೆಯಂತೂ ಡಬ್ಬಲ್‌, ತ್ರಿಬಲ್‌ ಆಗಿದೆ.

Vijaya Karnataka 10 Apr 2020, 5:00 am
ರೋಣ : ಲಾಕ್‌ಡೌನ್‌ ಮಾಡಿರುವುದು ಜನರಿಗೆ ಸಂಕಷ್ಟ ತಂದರೆ ವರ್ತಕರಿಗೆ ಮಾತ್ರ ಶುಕ್ರದೆಸೆ ತಿರುಗಿಸಿದೆ. ಮದ್ಯ ಮಾರಾಟ ನಿಷೇಧವಿದ್ದರೂ ಕೆಲಕಡೆ ಕಳ್ಳಬಟ್ಟಿ ಸಾರಾಯಿ ಎಗ್ಗಿಲ್ಲದೆ ನಡೆಯುತ್ತಿದೆ. ದಿನಸಿ ವಸ್ತುಗಳನ್ನು ಕೂಡ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದು, ಗುಟ್ಕಾ ಬೆಲೆಯಂತೂ ಡಬ್ಬಲ್‌, ತ್ರಿಬಲ್‌ ಆಗಿದೆ.
Vijaya Karnataka Web would the increased price cut
ಹೆಚ್ಚಿದ ಬೆಲೆಗೆ ಕಡಿವಾಣ ಎಂದು?

ತಾಲೂಕಿನಲ್ಲಿಏ.14ರವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ ತೆರೆಮರೆಯಲ್ಲಿಕಳ್ಳಬಟ್ಟಿ ಹಾಗೂ ಹಲವೆಡೆ ಸಂಗ್ರಹಿಸಿದ್ದ ಮದ್ಯ ಮಾರಾಟಕ್ಕೆ ಕಿಂಚಿತ್ತೂ ಕಡಿವಾಣ ಬಿದ್ದಂತೆ ಕಾಣುತ್ತಿಲ್ಲ. ಗಜೇಂದ್ರಗಡ, ನರೇಗಲ್ಲಭಾಗದಲ್ಲಿಸಾಕಷ್ಟು ಅಕ್ರಮ ಮದ್ಯ ಮತ್ತು ಕಳ್ಳಬಟ್ಟಿ ಸಾರಾಯಿ ಮಾರಾಟ ನಡೆಯುತ್ತಿದೆ ಎಂಬುದು ಸಾರ್ವಜನಿಕರ ದೂರು.

ಇನ್ನೂ ಗುಟ್ಕಾ, ಸಿಗರೇಟ್‌ ಕೂಡ ತ್ರಿಬಲ್‌ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ತರಕಾರಿ, ದಿನಸಿ ಕೂಡ ಎಂದಿಗಿಂತ ತುಸು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಎಂದು ಗ್ರಾಹಕರ ಆರೋಪ.

ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಹೆಚ್ಚಿದ ವಸ್ತುಗಳ ಬೆಲೆ ಹಾಗೂ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ