ಆ್ಯಪ್ನಗರ

ವರ್ಷಧಾರೆ :ರೈತರ ಮೊಗದಲ್ಲಿ ಮಂದಹಾಸ

ಶಿರಹಟ್ಟಿ : ಸತತ ಬರಗಾಲದಿಂದ ಆವರಿಸಿದ್ದಂತಹ ಶಿರಹಟ್ಟಿ ತಾಲೂಕಿನಲ್ಲಿ ಕೊನೆಗೂ ವರುಣ ತನ್ನ ಮುನಿಸನ್ನು ಸ್ಪಲ್ಪ ಕಡಿಮೆ ಮಾಡಿದ್ದರ ಫಲವಾಗಿ ಭಾನುವಾರ ಶಿರಹಟ್ಟಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸುವುದರ ಮೂಲಕ ರೈತರನ್ನು ವರ್ಷಧಾರೆ ಹರ್ಷಚಿತ್ತರನ್ನಾಗಿಸಿತು.

Vijaya Karnataka 24 Jun 2019, 5:00 am
ಶಿರಹಟ್ಟಿ : ಸತತ ಬರಗಾಲದಿಂದ ಆವರಿಸಿದ್ದಂತಹ ಶಿರಹಟ್ಟಿ ತಾಲೂಕಿನಲ್ಲಿ ಕೊನೆಗೂ ವರುಣ ತನ್ನ ಮುನಿಸನ್ನು ಸ್ಪಲ್ಪ ಕಡಿಮೆ ಮಾಡಿದ್ದರ ಫಲವಾಗಿ ಭಾನುವಾರ ಶಿರಹಟ್ಟಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸುವುದರ ಮೂಲಕ ರೈತರನ್ನು ವರ್ಷಧಾರೆ ಹರ್ಷಚಿತ್ತರನ್ನಾಗಿಸಿತು.
Vijaya Karnataka Web GDG-23SHT1
ಶಿರಹಟ್ಟಿಯಲ್ಲಿ ಭಾನುವಾರ ಮಳೆ ಸುರಿಯಿತು.


ಅಹೋರಾತ್ರಿ ಶಿವನಾಮಸ್ಮರಣೆ :
ಪಟ್ಟಣದ ಬಡಿಗೇರ ಓಣಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ 5 ದಿನಗಳಿಂದ ಅಹೋರಾತ್ರಿ ಶಿವನಾಮಸ್ಮರಣೆ ಮಾಡಲಾಗುತ್ತಿತ್ತು. ಓಣಿಯ ಹಿರಿಯರು ಮುಖಂಡರು ಸೇರಿದಂತೆ ಯುವಕರು ಶಿವನಾಮಸ್ಮರಣೆಯಲ್ಲಿ ತೊಡಗಿ ಮಳೆಗಾಗಿ ಶಿವಧ್ಯಾನ ಮಾಡುತ್ತಿದ್ದರು. ಭಾನುವಾರ ಸುರಿದ ಮಳೆಗೆ ಎಲ್ಲರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಕೆಲವು ದಿನಗಳಿಂದಲೂ ಸಹ ಗ್ರಾಮೀಣ ಪ್ರದೇಶಗಳಲ್ಲೂ ಸಹ ಮಳೆಗಾಗಿ ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಗುರ್ಜಿ ಆಟ ಗ್ರಾಮಗಳ ಆರಾಧ್ಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ಹೀಗೆ ವರುಣದೇವನನ್ನು ಓಲೈಸುವುದಕ್ಕಾಗಿ ಹಲವು ಕೈಂಕರ‍್ಯಗಳು ನಡೆಯುತ್ತಿದ್ದವು.

ಕನಿಷ್ಠ ಮಳೆಗೆ ಕಂಗಾಲಾಗಿದ್ದ ರೈತ ಸಮೂಹ :

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲೂ ಎಂಬ ನಾಣ್ಣುಡಿಯು ಸಧ್ಯದ ಪರಿಸ್ಥಿತಿಯಲ್ಲಿ ರೈತಾಪಿ ವರ್ಗವನ್ನು ಒಂದಿಲ್ಲೊಂದು ಸಂಕಷ್ಟದ ಸುಳಿಗೆ ಸಿಲುಕುವಂತೆ ಮಾಡಿತ್ತು. ಶಿರಹಟ್ಟಿ ತಾಲೂಕಿನಲ್ಲಿ ಮುಂಗಾರು ಪ್ರವೇಶವಾಗಿ ಬೇರೆ ಕಡೆಗಳಲ್ಲಿ ಮಳೆಯಾಗುತ್ತಿದ್ದರೂ ಸಹ ಶಿರಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಇಲ್ಲಿಯವರೆಗೂ ಮಳೆಯಾಗಿರಲಿಲ್ಲ. ನಿತ್ಯವೂ ಮೋಡ ಮುಸುಕಿದ ವಾತಾವರಣ ಇರುತ್ತಿತ್ತು, ಆದರೆ ಮಳೆ ಆಗಮನ ಮಾತ್ರವಾಗುತ್ತಿರಲಿಲ್ಲ. ಇದರಿಂದ ಈ ಭಾಗದ ರೈತರು ಬಿತ್ತನೆಗೆ ತಮ್ಮ ಜಮೀನುಗಳನ್ನು ಸಿದ್ದಗೊಳಿಸಿ ಮಳೆಯ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಇದೀಗ ಎರಡು ತಾಸಿಗೂ ಹೆಚ್ಚು ಸುರಿದ ಅಧಿಕ ಮಳೆಯಿಂದ ರೈತ ಸಮೂಹದಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ರಸ್ತೆಯಲ್ಲಿ ಹರಿದ ನೀರು:
ಪ್ರತಿ ಭಾನುವಾರ ದಿವಸ ಶಿರಹಟ್ಟಿಯಲ್ಲಿ ಸಂತೆ ಇರುತ್ತಿದ್ದು, ಇಂದು ಸುರಿದಂತಹ ಮಳೆಯಿಂದ ಗ್ರಾಮೀಣ ಪ್ರದೇಶಗಳಿಂದ ಸಂತೆಗೆಂದು ಬಂದಂತಹವರು ಅಂಗಡಿಗಳಲ್ಲಿ ಆಶ್ರಯ ಪಡೆದರು. ಮಳೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿದು ಹೋಗುತ್ತಿರುವಾಗ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವಂತಹ ವ್ಯಾಪಾರಸ್ಥರ ಸಾಮಾಗ್ರಿಗಳು ನೀರಿನಲ್ಲಿ ಹರಿದು ಹೋದವು. ಇನ್ನೂ ಕೆಲವರು ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ