ಆ್ಯಪ್ನಗರ

ಕೊಳಲು ಗೋಪಾಲಕಷ್ಣಸ್ವಾಮಿ ರಥೋತ್ಸವ ಇಂದು

ಕೊಣನೂರಿನ ಇತಿಹಾಸ ಪ್ರಸಿದ್ಧ ಕೊಳಲು ಗೋಪಾಲಕಷ್ಣ ಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ನಡೆಯಲಿದೆ.

ವಿಕ ಸುದ್ದಿಲೋಕ 13 Mar 2016, 5:31 am
ಕೊಣನೂರು : ಕೊಣನೂರಿನ ಇತಿಹಾಸ ಪ್ರಸಿದ್ಧ ಕೊಳಲು ಗೋಪಾಲಕಷ್ಣ ಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ನಡೆಯಲಿದೆ.
Vijaya Karnataka Web
ಕೊಳಲು ಗೋಪಾಲಕಷ್ಣಸ್ವಾಮಿ ರಥೋತ್ಸವ ಇಂದು


ರಥೋತ್ಸವ ಮತ್ತು ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರಿಗೆ ಸುವ್ಯವಸ್ಥೆ ಕಲ್ಪಿಸುವ ದಷ್ಟಿಯಿಂದ ಭರದ ಸಿದ್ಧತೆ ಮತ್ತು ಜಾತ್ರೆಗೆ ಅಗತ್ಯ ವ್ಯವಸ್ಥೆ ಕೈಗೊಂಡು ಸಕಲ ರೀತಿಯಲ್ಲೂ ದೇವಸ್ಥಾನ ಹಾಗೂ ಗ್ರಾಮ ಸಜ್ಜಾಗಿದೆ.

ಈ ದೇವಸ್ಥಾನವು ಈಗ 10 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಭಾಗ್ಯ ಕಂಡಿದ್ದು, ದೇಗುಲದಲ್ಲಿರುವ ಸುಂದರ ಮೂರ್ತಿಗೆ ಇಂದು ಬ್ರಹ್ಮರಥೋತ್ಸವ ನಡೆಯಲಿದೆ.

ಶ್ರೀ ಕಷ್ಣನ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರ ಮಾಡ ಲಾಗಿದೆ. ದೇವಾಲಯಕ್ಕೆ ಹೊಂದಿಕೊಂಡಂತಿರುವ ಹಾಸನ - ಮಡಿಕೇರಿ ಮುಖ್ಯ ರಸ್ತೆಯ ಉದ್ದಕ್ಕೂ ಹಾಗೂ ಎರಡೂ ಕಡೆಗಳಲ್ಲಿ ಮರಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಜಾತ್ರೆಯ ಸೊಬಗನ್ನು ಹೆಚ್ಚಿಸಿದ್ದಾರೆ. ಗ್ರಾಮದ ತುಂಬಾ ವಿವಿಧ ರಾಜಕೀಯ ಮುಖಂಡರು ಜಾತ್ರೆಗೆ ಶುಭಾಶಯಗಳನ್ನು ಕೋರಿರುವ ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಇಂದು ನಡೆಯುವ ಬ್ರಹ್ಮ ರಥೋತ್ಸವದೊಂದಿಗೆ 101 ಕಳಸ, ನಾದಸ್ವರ, ವೀರಗಾಸೆ, ಪೂಜಾ ಕುಣಿತ, ನಂದಿ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಚಂಡಿ ಕುಣಿತ, ಗೊರವಿನ ಕುಣಿತ, ಹುಲಿ ವೇಷಧಾರಿ, ಗಾಡಿಗೊಂಬೆ, ಕೋಲಾಟ, ಲಗೋರಿ ಕುಣಿತ ಮುಂತಾದ ಜಾನಪದ ಕಾರ‌್ಯಕ್ರಮಗಳು ನಡೆಯಲಿವೆ. ಇದೇ ದಿನ ರಾತ್ರಿ ವಿಶೇಷವಾದ ವಿದ್ಯುತ್ ದೀಪಾಲಂಕಾರ ಹಾಗೂ ಆಕರ್ಷಕ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿದೆ. ಇದೇ ರಾತ್ರಿ 7 ಗಂಟೆಗೆ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನೂ ಆಯೋಜಿಸಲಾಗಿದೆ.

ರಥೋತ್ಸವದಲ್ಲಿ ಸಚಿವ ಎ. ಮಂಜು, ಉಪವಿಭಾಗಾಧಿಕಾರಿ ಮಧುಕೇಶ್ವರ್, ತಾಲೂಕು ದಂಡಾಧಿಕಾರಿ ಆರ್. ಮೋಹನ್ ಹಾಜರಿರುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ