ಆ್ಯಪ್ನಗರ

ಮಲೆನಾಡಿನಲ್ಲಿ ಮಳೆ: ಮೈದುಂಬಿವೆ ನದಿತೊರೆ

ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ವಿಕ ಸುದ್ದಿಲೋಕ 24 Jun 2016, 9:00 am

ಅರಕಲಗೂಡು: ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಭರ್ಜರಿ ಮಳೆ ಬೀಳುತ್ತಿರುವುದರಿಂದ ಕಾವೇರಿ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ, ಇದರ ಜತೆಗೆ ಹಾರಂಗಿ ಜಲಾಶದಿಂದಲೂ ನೀರನ್ನು ಹೊರಬಿಟ್ಟಿರುವ ಕಾರಣ ತಾಲೂಕಿನ ರಾಮನಾಥಪುರ ರಾಮೇಶ್ವರ ದೇವಾಲಯದ ಬಳಿ ಹರಿಯುವ ನದಿಯಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿದೆ. ಕಳೆದ ಮೂರು ತಿಂಗಳಿಂದ ನೀರಿಲ್ಲದೆ ನದಿಯಲ್ಲಿನ ಕಲ್ಲುಬಂಡೆಗಳು ಬಿಸಿಲಿನ ತಾಪಕ್ಕೆ ಸೊರಗಿದ್ದವು. ಆದರೆ, ರಾಮೇಶ್ವರ ದೇವಾಲಯದ ಬಳಿಯಲ್ಲಿನ ಮೀನುಗಳು ವಾಸ್ತವ್ಯದ ಪುಷ್ಕರಿಣಿ ಕೂಡ ನೀರಿನಿಂದ ಕಂಗೊಳಿಸುತ್ತಿದೆ.

ನದಿ ಪಾತ್ರದಲ್ಲಿ ಬರುವ ರೈತರಿಗೆ ಸಂತಸ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಅಧಿಕಗೊಂಡರೇ ನದಿಗಳಲ್ಲಿನ ನೀರಿನ ಹರಿಯುವಿಕೆ ಮತ್ತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ