ಆ್ಯಪ್ನಗರ

ವಾರ್ಡ್‌ ಹಬ್ಬದಲ್ಲಿ ಮೋಜು ಮಜಾ ಮಸ್ತಿ

ಇಳಿ ಸಂಜೆಯ ಹೊತ್ತಲ್ಲಿ ಬಣ್ಣ ಬಣ್ಣದ ಡಬ್ಬಿಗಿಳಿದ ಮಹಿಳೆಯರು, ರಸ್ತೆಯ ಮೇಲೆಲ್ಲಾ ರಂಗು ರಂಗಿನ ಚಿತ್ತಾರ ಬಿಡಿಸಿದೆರೆ, ಅವರಿಗಿಂತ ನಾವೇನು ಕಮ್ಮಿ ಎಂಬಂತೆ ಪುಟಾಣಿ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಎಲ್ಲರ ಮನಸೂರೆಗೊಂಡರು.

Vijaya Karnataka Web 28 Jan 2018, 5:00 am

ಹಾಸನ: ಇಳಿ ಸಂಜೆಯ ಹೊತ್ತಲ್ಲಿ ಬಣ್ಣ ಬಣ್ಣದ ಡಬ್ಬಿಗಿಳಿದ ಮಹಿಳೆಯರು, ರಸ್ತೆಯ ಮೇಲೆಲ್ಲಾ ರಂಗು ರಂಗಿನ ಚಿತ್ತಾರ ಬಿಡಿಸಿದೆರೆ, ಅವರಿಗಿಂತ ನಾವೇನು ಕಮ್ಮಿ ಎಂಬಂತೆ ಪುಟಾಣಿ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಎಲ್ಲರ ಮನಸೂರೆಗೊಂಡರು.

ಇದೇನಿದು ಅಂತೀರಾ, ನಗರದ 3ನೇ ವಾರ್ಡ್‌ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿರುವ ಸಾಂಸ್ಕೃತಿಕ ಹಬ್ಬ ಕಾರ‍್ಯಕ್ರಮದಲ್ಲಿ ಶನಿವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಹಾಗೂ ವೇಶ ಭೂಷಣ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. ಪ್ರತಿ ವರ್ಷದಂತೆ ಈ ಬಾರಿಯು ನಡೆದ ವಾರ್ಡ್‌ ಹಬ್ಬದ ಪೂರ್ವಭಾವಿ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದ ವಾರ್ಡಿನ ಮಹಿಳೆಯರು ತಾನು ಮುಂದು ಎಂಬಂತೆ ಎಲ್ಲರೂ ರಂಗೋಲಿ ಸ್ಪರ್ಧೆಗೆ ಭಾಗವಹಿಸಿ ಕ್ಯೂ ನಿಂತಿದ್ದರು. ಸೂರ್ಯಾಸ್ತಮನ ವೇಳೆಯಲ್ಲಿ ಇಳಿ ಬಿಸಿಲಿನಲ್ಲಿ ವಾರ್ಡಿನ ಸಚಿನ್‌ ತೆಂಡೆಲ್ಕೂರ್‌ ಉದ್ಯಾನವನದ ಸುತ್ತಲ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆಗಾಗಿ ಮೀಸಲಿರಿಸಿದ್ದ ಜಾಗದಲ್ಲಿ ಕುಳಿತು ರಂಗೋಲಿಯ ಚುಕ್ಕಿಗಳನ್ನು ಇಡುತ್ತ, ತಮ್ಮ ಮನಸ್ಸಿನಲ್ಲಿ ಮೂಡಿ ಬಂದ ಚಿತ್ರಗಳನ್ನು ನೆನಪಿಸಿಕೊಂಡು ತಮ್ಮ ಕೈ ಚಳಕ ತೋರಿದ್ದ ಮಹಿಳೆಯರು ನಿಗದಿತ ಸಮಯದೊಳಗೆ ರಂಗೋಲಿ ಬಿಡಿಸಿದರು. ವಿವಿಧ ಆಕಾರದ ರಂಗೋಲಿ ಬಿಡಿಸಿದ ನಂತರ ಅವುಗಳಲ್ಲಿ ಉತ್ತಮವಾದುದ್ದನ್ನು ಆಯ್ಕೆ ಮಾಡಲು ತೀರ್ಪುಗಾರರು ಬಂದ ವೇಳೆ ಎಲ್ಲರಲ್ಲೂ ಆತಂಕ ಮುಖಃದಲ್ಲಿ ಮನೆ ಮಾಡಿತ್ತು. ಏನೇ ಆದರೂ ಫಲಿತಾಂಶ ಮಾತ್ರ ಭಾನುವಾರ ಸಂಜೆ ನಡೆಯುವ ವಾರ್ಡ್‌ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಿವುದರಿಂದ ತಮ್ಮ ರಂಗೋಲಿ ಚಿತ್ರಗಳನ್ನು ನೋಡಿ ಸಮಧಾನಗೊಂಡರು.

ಇನ್ನೂ ರಂಗೋಲಿ ಸ್ಪರ್ಧೆ ಬಳಿಕ ಹಮ್ಮಿಕೊಂಡಿದ್ದ ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ವಿವಿಧ ಮಾದರಿಯ ವೇಷಭೋಷಣಗಳನ್ನು ತೊಟ್ಟ ಮಕ್ಕಳು ವೇದಿಕೆಯ ಮೇಲೆ ಮುಗ್ದತೆಯಿಂದ ನಟಿಸುತ್ತಿದ್ದರೆ ಎಂತಹ ಮನಸ್ಸಿಗೂ ಸಂತಸ ನೀಡದೆ ಇರದು. ಪ್ರಧಾನಿ ಮೋದಿ ವೇಷಧಾರಿ, ಗ್ರಾಮೀಣ ಸೊಗಡಿನ ಕಣಿ ಹೇಳುವ ಮಹಿಳೆ ವೇಷ, ಪ್ಲಾಸ್ಟಿಕ್‌ ನಿಷೇಧದ ಸಂದೇಶ ಸಾರುವ ವೇಷ, ಕಾಡು ಜನಗಳ ವೇಷಧಾರಿ ಸೇರಿದಂತೆ ವಿವಿಧ ಮಾದರಿಯ ವೇಷಗಳನ್ನು ಮಕ್ಕಳು ಧರಿಸಿ ವೇದಿಕೆಯ ಮೇಲೆ ಪ್ರದರ್ಶಿಸಿದರು.

...

ಪ್ರತಿ ವರ್ಷದಂತೆ ಈ ವರ್ಷವು ವಾರ್ಡ್‌ ಹಬ್ಬ ಹಮ್ಮಿಕೊಳ್ಳಲಾಗಿದ್ದು, ಇದರಿಂದ ವರ್ಷಕ್ಕೊಮ್ಮೆಯಾದರೂ ವಾರ್ಡಿನ ಎಲ್ಲ ಜನರು ಒಂದೇಡೆ ಸೇರಿ ಸಮಯ ಕಳೆದು ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು. ಇಂತಹ ಕಾರ‍್ಯಕ್ರಮದಲ್ಲಿ ವಾರ್ಡಿನಲ್ಲಿರುವ ಜನರು ಪರಸ್ಪರ ಆತ್ಮೀಯತೆ ಇಂದು ಇರಲು ಸಾಧ್ಯವಾಗುತ್ತದೆ. ಎಚ್‌.ಎಂ. ಸುರೇಶ್‌ ಕುಮಾರ್‌, 3ನೇ ವಾರ್ಡ್‌ ಸದಸ್ಯ, ನಗರಸಭೆ, ಹಾಸನ

....

ವಾರ್ಡಿನಲ್ಲಿ ಈ ರೀತಿ ಸಾಂಸ್ಕೃತಿಕ ಕಾರ‍್ಯಕ್ರಮ ಮಾಡುವುದರಿಂದ ನಮಗಳಿಗೆ ಹೆಚ್ಚು ಅನುಕೂಲವಾಗಲಿದೆ. ದಿನ ನಿತ್ಯ ಶಾಲೆ, ಓದಿನಲ್ಲೇ ಕಾಲ ಕಳೆಯುವುದರಿಂದ ನಮ್ಮ ವಾರ್ಡಿನ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಇಲ್ಲಿನ ಸ್ನೇಹಿತರೊಂದಿಗೆ ಸ್ನೇಹ ಬೆಳೆಸಿಕೊಳ್ಳಬಹುದು. ನಮ್ಮ ವಾರ್ಡಿನಲ್ಲಿ ಪ್ರತಿ ವರ್ಷ ಈ ರೀತಿ ಸಾಂಸ್ಕೃತಿಕ ಕಾರ‍್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ.

ಸಿಂಚನ, ಶಾಲಾ ಬಾಲಕಿ, 3ನೇ ವಾರ್ಡ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ