ಆ್ಯಪ್ನಗರ

ಹಾಸನಕ್ಕೆ ಬಂದ್ವು 24 ಟಿಪ್ಪರ್‌

ವಿಕ ಸುದ್ದಿಲೋಕ ಹಾಸನ ನಗರ ವ್ಯಾಪ್ತಿಯಲ್ಲಿಘನ ತ್ಯಾಜ್ಯ ವಿಲೇವಾರಿ ಮಧಿತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡಲು ನಗರಸಭೆಯಿಂದ 24 ಹೊಸ ಆಟೋ ಟಿಪ್ಪರ್‌ಗಳನ್ನು ಸೇವೆಗೆ ...

Vijaya Karnataka 22 Nov 2019, 5:00 am
ಹಾಸನ: ನಗರ ವ್ಯಾಪ್ತಿಯಲ್ಲಿಘನ ತ್ಯಾಜ್ಯ ವಿಲೇವಾರಿ ಮಧಿತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡಲು ನಗರಸಭೆಯಿಂದ 24 ಹೊಸ ಆಟೋ ಟಿಪ್ಪರ್‌ಗಳನ್ನು ಸೇವೆಗೆ
Vijaya Karnataka Web 24 new auto tipper for hassan municipal corporation
ಹಾಸನಕ್ಕೆ ಬಂದ್ವು 24 ಟಿಪ್ಪರ್‌


ಸಮರ್ಪಿಸಲಾಗಿದೆ. ಶಾಸಕರಾದ ಪ್ರೀತಂ.ಜೆ ಗೌಡ ಗುರುವಾರ ಆಟೋ ಟಿಪ್ಪರ್‌ಗಳನ್ನು ಸೇವೆಗೆ ಸಮರ್ಪಿಸಿದರು. ನಗರದ ಹಾಸನಾಂಬ ದೇವಾಲಯದ ಆವರಣದಲ್ಲಿನಡೆದ ಕಾರ್ಯಕ್ರಮದಲ್ಲಿಆಟೋ ಟಿಪ್ಪರ್‌ಗಳನ್ನು ಶಾಸಕರು ಸೇವೆಗೆ ಮುಕ್ತ ಮಾಡಿದರು.

ಈ ಸಂದರ್ಭದಲ್ಲಿಮಾತನಾಡಿದ ಶಾಸಕರು, ನಗರವನ್ನು ಮತ್ತಷ್ಟು ಸ್ವಚ್ಛ ನಗರವನ್ನಾಗಿಸುವುದು ತಮ್ಮ ಗುರಿ. ಕಸ ವಿಲೇವಾರಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಲುವಾಗಿ 24 ಆಟೋಗಳನ್ನು ಖರೀದಿಸಿ ಎಲ್ಲವಾರ್ಡ್‌ಗಳಿಗೆ ನಿಯೋಜಿಸಲಾಗಿದೆ ಎಂದರು.
ಕಸ ವಿಲೇವಾರಿ ಹಾಗೂ ವಿಂಗಡಣೆಗೆ ಹೊಸ ಯಂತ್ರೋಪಕರಣಗಳನ್ನು ಖರೀದಿಸಲು ಯೋಜನೆಯೋಂದು ಸಿದ್ಧವಾಗಿದೆ ಮುಂದಿನ ದಿನಗಳಲ್ಲಿಹಾಸನವನ್ನು ಸಂಪೂರ್ಣ ಸ್ವಚ್ಛ ಸುಂದರ ನಗರವನ್ನಾಗಿಸಲು ತಾವು ಶ್ರಮಿಸುತ್ತಿದ್ದು, ಎಲ್ಲನಾಗರಿಕರು ಸಂಘ-ಸಂಸ್ಥೆಗಳು ಇದಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಪೌರಾಯುಕ್ತ ಆರ್‌.ಕೃಷ್ಣಮೂರ್ತಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ