ಆ್ಯಪ್ನಗರ

370 ರದ್ದು ಯಾರ ಮೇಲಿನ ಸೇಡಿನದ್ದಲ್ಲ

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಯಾರ ಮೇಲಿನ ಸೇಡಿನ ಕ್ರಮವಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.

Vijaya Karnataka 29 Sep 2019, 8:43 pm
ಚನ್ನರಾಯಪಟ್ಟಣ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಯಾರ ಮೇಲಿನ ಸೇಡಿನ ಕ್ರಮವಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
Vijaya Karnataka Web HSN29CRP1_16


ಶ್ರವಣಬೆಳಗೊಳ ಮಂಡಲದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಅಭಿಯಾನದ ಜನಜಾಗರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘‘ಭಾರತದ ಹಲವು ಮಂದಿ ಸೇರಿದಂತೆ ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಈ ಬಗ್ಗೆ ದಾರಿ ತಪ್ಪಿಸುವ ಹೇಳಿಕೆ ನೀಡುವುದು ಬೇಕಿಲ್ಲ. ಈ ರಾಜ್ಯಗಳು ತಾತ್ಕಾಲಿಕವಾಗಿ ಕೇಂದ್ರಾಡಳಿತ ಪ್ರದೇಶವಾಗಿದ್ದು, ಅಲ್ಲಿನ ಪರಿಸ್ಥಿತಿ ತಹಬದಿಗೆ ಬಂದಾಗ ಪ್ರತ್ಯೇಕ ರಾಜ್ಯವಾಗಲಿವೆ. ದೇಶದ ನಾಗರಿಕರು ಬಿಜೆಪಿಗೆ ಸ್ಪಷ್ಟಬಹುಮತ ನೀಡಿದ್ದೇ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು,’’ ಎಂದರು.

‘‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಅಲ್ಲಿನ ಅಭಿವದ್ಧಿಯನ್ನು ಸಾಧಿಸಬೇಕು. ನಿರ್ಧಾರವನ್ನು ದೇಶದ ಜನತೆಗೆ ಸಾರಿ ಹೇಳಬೇಕಿತ್ತು. ಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರವಾಗಬೇಕಿದ್ದ ಕಾಶ್ಮೀರ ಭಯೋತ್ಪಾದಕರ ತಾಣವಾಗಿ ಪರಿಣಮಿಸಿತ್ತು. ಇದನ್ನು ಹೋಗಲಾಡಿಸಿ ಅಲ್ಲಿ ಅಭಿವದ್ಧಿಯನ್ನು ಸಾಧಿಸುವುದೇ ಮೋದಿಯವರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಆರಂಭದ ದಿನಗಳಲ್ಲೇ ಐತಿಹಾಸಿಕ ನಿರ್ಧಾರ ಕೈಗೊಂಡಿದೆ,’’ ಎಂದು ಪ್ರಶಂಸಿಸಿದರು.

‘‘ಜಮ್ಮು ಕಾಶ್ಮೀರ ಎಂದಿಗೂ ವಿವಾದಿತ ಪ್ರದೇಶವಾಗಿಲ್ಲ. ಅದು ಭಾರತದ ಒಕ್ಕೂಟಕ್ಕೆ ಸೇರಿದ್ದು ಆರಂಭದ ದಿನದಿಂದಲೇ ಮೂರ್ನಾಲ್ಕು ಕುಟುಂಬಗಳ ಕಪಿಮುಷ್ಠಿಯಲ್ಲಿ ಸಿಲುಕಿತ್ತು. ಅಲ್ಲಿನ ನಾಗರಿಕರನ್ನು ಪವಿತ್ರಯುದ್ಧ ಎನ್ನುವ ಭಾವನಾತ್ಮಕತೆಯಿಂದ ಕಟ್ಟಿಹಾಕಿ ಮಕ್ಕಳಲ್ಲಿ ದ್ವೇಷದ ಕಿಚ್ಚು ಹೊತ್ತಿಸಲಾಗಿತ್ತು. ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ ಮೊದಲ ದಿನದಿಂದಲೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶ್ಯಾಂಪ್ರಸಾದ್ ಮುಖರ್ಜಿ ಸೇರಿದಂತೆ ಹಲವು ಗಣ್ಯರು ವಿರೋಧ ವಿರೋಧ ವ್ಯಕ್ತಪಡಿಸಿದ್ದರು. ಜನಸಂಘದ ಮೂಲಕ ಅಂದಿನಿಂದಲೇ ಇದರ ವಿರುದ್ಧದ ಹೋರಾಟ ಆರಂಭಗೊಂಡಿದ್ದು ಇಂದು ಪ್ರಮುಖ ಘಟ್ಟ ಮುಟ್ಟಿದೆ,’’ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರೇಣುಕುಮಾರ್, ಕಾರ‌್ಯದರ್ಶಿ ವಿಜಯವಿಕ್ರಮ್, ವಕೀಲ ಜಿ.ವಿ.ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

ನಮ್ಮ ಪಕ್ಷದ ಕಾರ‌್ಯಕರ್ತರಿಗೂ ಸೈನಿಕರಿಗೂ ವ್ಯತ್ಯಾಸ ಇರಬಾರದು. ಯಾವ ಕ್ಷಣದಲ್ಲೂ ಮೈಮರೆತು ಕುಳಿತುಕೊಳ್ಳದೆ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಪಕ್ಷದ ನಾಯಕತ್ವದ ಮೇಲೆ ವಿಶ್ವಾಸ ಇರಿಸಿಕೊಳ್ಳಬೇಕು. ಪಕ್ಷದ ವಿಚಾರಗಳು ಬೀದಿಯಲ್ಲಿ, ಸಾರ್ವಜನಿಕವಾಗಿ ಚರ್ಚೆಯಾಗಬಾರದು. ಶೋಕಿಗಾಗಿ, ಹೆಗ್ಗಳಿಕೆಗಾಗಿ ರಾಜಕೀಯ ಮಾಡುವುದನ್ನು ಬಿಟ್ಟು ಮನಸ್ಸಿಟ್ಟು ಪಕ್ಷದ ಕೆಲಸ ಮಾಡಬೇಕು. ನಮ್ಮ ಪಕ್ಷದ ಕಾರ‌್ಯಕ್ರಮಗಳನ್ನು ಕಾರ‌್ಯಕರ್ತರು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು.
- ಜೆ.ಸಿ.ಮಾಧುಸ್ವಾಮಿ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ