ಹಾಸನ: ಪೋಷಕರೊಂದಿಗೆ ಮಲಗಿದ್ದ ಐದು ವರ್ಷದ ಅಪ್ರಾಪ್ತ ಬಾಲಕಿಯನ್ನು ಹೆಗಲ ಮೇಲೆ ಹೊತ್ತೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ದುಷ್ಕೃತ್ಯ ನಗರದ ಹೊಸ ಬಸ್ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದಿದೆ. ರಾಮನಗರಕ್ಕೆ ತೆರಳಲು ಬಂದ ಭಿಕ್ಷುಕ ದಂಪತಿಗಳು ರಾತ್ರಿಯಾದ್ದರಿಂದ ಬಸ್ ಸಿಗದೆ ಮಗುವನ್ನು ಮಲಗಿಸಿಕೊಂಡು ಮಲಗಿದ್ದರು. ಆ ವೇಳೆ ಆಗಮಿಸಿದ ಕಾಮುಕ ಮಗುವನ್ನು ಹೊತ್ತೊಯ್ದು ನೀಚಕೃತ್ಯ ಎಸಗಿದ್ದಾನೆ ಎಂದು ಎಎಸ್ಪಿ ನಂದಿನಿ ತಿಳಿಸಿದರು. ನಿದ್ರೆಯಿಂದ ಎಚ್ಚೆತ್ತ ಪೋಷಕರು ಮಗುವಿಗಾಗಿ ಹುಡುಕಾಡಿದ ವೇಳೆ ಅಳುತ್ತಿದ್ದ ಮಗು ಪತ್ತೆಯಾಗಿದೆ. ಹೆಗಲ ಮೇಲೆ ಹೊತ್ತೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಸನ: ಕಾಡಾನೆ ತಡೆಗೆ ರೈಲ್ವೆ ಕಂಬಿ ಅಳವಡಿಕೆ
ಹಾಸನ: ಕಾಡಾನೆ ತಡೆಗೆ ರೈಲ್ವೆ ಕಂಬಿ ಅಳವಡಿಕೆ