ಆ್ಯಪ್ನಗರ

ಸಬ್ ರಿಜಿಸ್ಟರ್ ಕಚೇರಿ ಮೇಲೆ ಎಸಿಬಿ ದಾಳಿ

ಪಟ್ಟಣದ ಸಬ್ ರಿಜಿಸ್ಟರ್ ಕಚೇರಿಯ ಎಸಿಬಿ ದಾಳಿ ನಡೆಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

Vijaya Karnataka Web 27 May 2019, 10:27 pm
ಪಾಂಡವಪುರ: ಪಟ್ಟಣದ ಸಬ್ ರಿಜಿಸ್ಟರ್ ಕಚೇರಿಯ ಎಸಿಬಿ ದಾಳಿ ನಡೆಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
Vijaya Karnataka Web acb


ಪಟ್ಟಣದ ಸಬ್ ರೆಜಿಸ್ಟರ್ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕಚೇರಿ ಸಬ್ ರಿಜಿಸ್ಟರ್ ಸೇರಿದಂತೆ ಮೂರು ಮಂದಿ ಸಿಬ್ಬಂದಿಗಳು ಹಾಗೂ ವೆಂಡರ್ ಗಳನ್ನು ಎಸಿಬಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ದಾಳಿ ನಡೆಸಿದ ಹತ್ತು ಮಂದಿ ಎಸಿಬಿ ಅಧಿಕಾರಿಗಳು ಉಪನೊಂದಾಣಾಧಿಕಾರಿ ರೂಪದೇವಿ ಸಿಬ್ಬಂದಿಗಳಾದ ರೂಪ, ಕುಮಾರ್, ವೆಂಟರ್ ಗಳಾದ ಬಾಬು, ಸತ್ಯ ನಾರಾಯಣ, ಮಹದೇವ ಸೇರಿದಂತೆ ಹಲವನ್ನು ತನಿಖೆಗೆ ಒಳಪಡಿಸಿದ್ದಾರೆ. ಸಂಜೆಯಿಂದಲೂ ಅಧಿಕಾರಿಗಳು ಕಚೇರಿ ಒಳಗೆಯೇ ವಿವಿಧ ದಾಖಲಾತಿಗಳು, ಕಂಪ್ಯೂಟರ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಪಟ್ಟಣದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಸಬ್ ರಿಜಿಸ್ಟರ್ ರೂಪದೇವಿ ಭ್ರಷ್ಟ ಅಧಿಕಾರಿ ಎಂಬ ದೂರುಗಳು ಸಹ ಕೇಳಿಬಂದಿದ್ದವು. ಸಬ್ ರಿಜಿಸ್ಟರ್ ರೂಪಾದೇವಿ ಪ್ರಭಾರ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸಹ ಸಬ್ ರಿಜಿಸ್ಟರ್ ರೂಪಾದೇವಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರೂಪಾದೇವಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆಯೂ ಸಹ ಮೇಲಾಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ ಮೇಲಾಧಿಕಾರಿಗಳು ಈ ಬಗ್ಗೆ ಗಮನವಹಿಸಿರಲಿಲ್ಲ. ಇದೀಗ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸಬ್ ರಿಜಿಸ್ಟರ್ ರೂಪಾದೇವಿ ಎಸಿಬಿ ಬಲೆಗೆ ಬಿದ್ದಾರೆ. ರಾತ್ರಿ 9.45 ಆದರೂ ಸಹ ಎಸಿಬಿ ಅಧಿಕಾರಿಗಳು ಕಚೇರಿಯಲ್ಲಿ ತನಿಖೆ ಮುಂದುವರೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ