ಆ್ಯಪ್ನಗರ

ಆಸ್ಪ್ರೇಲಿಯಾ ಮಾದರಿ ರಸ್ತೆ ನಿರ್ಮಾಣಕ್ಕೆ ಕ್ರಮ: ಸಚಿವ

ಮೈಸೂರು-ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ರಸ್ತೆಗಳನ್ನು ಆಸ್ಪ್ರೇಲಿಯಾ ಮಾದರಿಯಲ್ಲಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡು ಸರಕಾರದಿಂದ ಮಂಜೂರು ಪಡೆಯಲಾಗುವುದು ಎಂದು ಪಿಡಬ್ಲ್ಯೂಡಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Vijaya Karnataka 29 Jan 2019, 5:00 am
ಹಾಸನ: ಮೈಸೂರು-ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ರಸ್ತೆಗಳನ್ನು ಆಸ್ಪ್ರೇಲಿಯಾ ಮಾದರಿಯಲ್ಲಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡು ಸರಕಾರದಿಂದ ಮಂಜೂರು ಪಡೆಯಲಾಗುವುದು ಎಂದು ಪಿಡಬ್ಲ್ಯೂಡಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.
Vijaya Karnataka Web action for astrelia model road minister
ಆಸ್ಪ್ರೇಲಿಯಾ ಮಾದರಿ ರಸ್ತೆ ನಿರ್ಮಾಣಕ್ಕೆ ಕ್ರಮ: ಸಚಿವ


ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ''ಆಸ್ಪ್ರೇಲಿಯಾದಲ್ಲಿ 80 ಕಿ.ಮೀ. ವೇಗದಲ್ಲಿ 20 ಚಕ್ರದ ಲಾರಿ, ವಾಹನಗಳು ಸಂಚರಿಸುತ್ತವೆ. ಒಂದ್‌ ಚೂರು ಮೈ, ಕೈ ನೋವೇ ಬರಲ್ಲ. ಸಮುದ್ರ ಪಕ್ಕದಲ್ಲೇ 250 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. 70ರಿಂದ 80 ಟನ್‌ ಭಾರ ಹೊತ್‌ಕಂಡು ಶರವೇಗದಲ್ಲಿ ಲಾರಿಗಳು ಸಂಚರಿಸುತ್ತವೆ. ಒಂದಕ್ಕಿಂತ ಮತ್ತೊಂದು ಅತ್ಯುತ್ತಮ ರಸ್ತೆಗಳಿದ್ದು, ಸಾರ್ವಜನಿಕ ವಾಹನಕ್ಕೆ ಬೇರೆ, ಸರಕು ಸಾಗಣೆಗೆ ಬೇರೆ ಮಾರ್ಗಗಳಿವೆ. ಹೀಗೆ ಆರರಿಂದ ಎಂಟು ಪಥದ ರಸ್ತೆಗಳಿವೆ. ನಮ್ಮಲ್ಲೂ ಅಂತಹ ರಸ್ತೆಗಾಗಿ ಶೀಘ್ರದಲ್ಲೇ ಸರಕಾರಕ್ಕೆ ವರದಿ ಸಲ್ಲಿಸುವುದಕ್ಕಾಗಿ ಸೂಪರಿಟೆಂಡೆಂಟ್‌ ಎಂಜಿನಿಯರ್‌, ಎಂಜಿನಿಯರ್‌ಗಳೊಂದಿಗೆ ಆಸ್ಪ್ರೇಲಿಯಾಕ್ಕೆ ತೆರಳಿ ಅಧ್ಯಯನ ನಡೆಸಿದ್ದೇನೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ