ಆ್ಯಪ್ನಗರ

ಆಲೂರು ಪಟ್ಟಣ ಪಂಚಾಯಿತಿ ಅತಂತ್ರ

ಆಲೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷ ಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

Vijaya Karnataka 1 Jun 2019, 5:00 am
ಆಲೂರು : ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷ ಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web aluru town panchayat no one get majority
ಆಲೂರು ಪಟ್ಟಣ ಪಂಚಾಯಿತಿ ಅತಂತ್ರ


ಒಟ್ಟು 11 ಸ್ಥಾನ ಹೊಂದಿರುವ ಪಂಚಾಯಿತಿಯಲ್ಲಿ ಜೆಡಿಎಸ್‌ 5, ಕಾಂಗ್ರೆಸ್‌ 1, ಬಿಜೆಪಿ 2 ಮತ್ತು ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲಾಗಿದ್ದು, ಜೆಡಿಎಸ್‌ ಒಬ್ಬರನ್ನು ಪಕ್ಷ ಕ್ಕೆ ಸೆಳೆದು ಗದ್ದುಗೆ ಏರುವ ನಿರೀಕ್ಷೆ ಹೊಂದಿದೆ.

1ನೇ ವಾರ್ಡ್‌: ಎಂ.ಬಿ.ಧರ್ಮ(ಬಿಜೆಪಿ) 185 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಎಂ.ಬಿ.ಕುಮಾರ್‌ 159, ಎಂ.ಎಲ್‌.ಸಿದ್ದೇಶ್‌ 106 ಮತ್ತು ಬಿ.ಜೆ.ಉಮೇಶ್‌ 9 ಮತಗಳನ್ನು ಪಡೆದರು. ನೋಟಾ 1.

2ನೇ ವಾರ್ಡ್‌: ಎಂ.ಎ.ನಿಂಗರಾಜು (ಜೆಡಿಎಸ್‌) 240 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಎಂ.ಕೆ.ರಾಜಶೇಖರ್‌ 172 ಮತಗಳನ್ನು ಪಡೆದರು. ನೋಟಾ 5.

3ನೇ ವಾರ್ಡ್‌: ಜಯಮ್ಮ (ಜೆಡಿಎಸ್‌) 248 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಬಿ.ಜೆ.ರೇಖಾ 56, ಶೀಲಾವತಿ 20 ಮತ್ತು ಗೌರಮ್ಮ 20 ಮತಗಳನ್ನು ಪಡೆದರು.

4ನೇ ವಾರ್ಡ್‌: ತಾಹಿರಾಬೇಗಂ(ಕಾಂಗ್ರೆಸ್‌) 208 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಎಚ್‌.ಟಿ.ಆಶಾ 85, ನೂರುನ್ನಿಸಾ 10, ತರನುಮ್‌ ಸುಲ್ತಾನ 64, ಎ.ಎನ್‌.ರೇಖಾ 30 ಮತ ಪಡೆದರು. ನೋಟಾ 1.

5ನೇ ವಾರ್ಡು: ತೌಫಿಕ್‌(ಪಕ್ಷೇತರ) 301, ಕಬೀರ್‌ ಅಹಮದ್‌ 107, ಎಚ್‌.ಬಿ.ಧರ್ಮರಾಜ್‌ 52, ಎ.ಕೆ.ಶಿವಣ್ಣ 126 ಮತಗಳನ್ನು ಪಡೆದರು. ನೋಟಾ 4.

6ನೇ ವಾರ್ಡ್‌: ಎ.ವಿ.ಸಂತೋಶ್‌(ಬಿಜೆಪಿ) 203 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ತಿಮ್ಮಯ್ಯ, 17, ಎ.ಎಸ್‌. ಶ್ರೀಧರ 158 ಮತಗಳನ್ನು ಪಡೆದರು. ನೋಟಾ 2.

7ನೇ ವಾರ್ಡ್‌: ಅಬ್ದುಲ್‌ ಖುದ್ದೂಸ್‌ ಉ.ಸ್ನೇಕ್‌ ಬಾಬು (ಪಕ್ಷೇತರ) 117 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಎ.ಎಸ್‌.ಗೋಪಾಲಕೃಷ್ಣ 45, ಕೆ.ತಿಮ್ಮಶೆಟ್ಟಿ 11, ಎಂ.ಎಸ್‌.ದಿನೇಶ್‌ 24 ಮತಗಳನ್ನು ಪಡೆದರು. ನೋಟಾ 1.

8ನೇ ವಾರ್ಡ್‌: ಕೆ.ಹರೀಶ್‌(ಪಕ್ಷೇತರ) 112 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಖಾಲಿದ್‌ ಪಾಷ 32, ಎ.ಎಸ್‌.ಲೋಹಿತ್‌ 68, ಸೈಯದ್‌ ಜುಬೇರ್‌ 71, ಶಹಬಾಸ್‌ ಶರೀಫ್‌ 6, ಎ.ಜೆ.ಸಂತೋಷ್‌ 51 ಮತಗಳನ್ನು ಪಡೆದರು.

9ನೇ ವಾರ್ಡ್‌: ಎಚ್‌.ಸಿ.ವೇದಾ (ಜೆಡಿಎಸ್‌) 198 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿ ಎಂ.ಕೆ.ವನಜಾಕ್ಷಿ 59 ಮತಗಳನ್ನು ಪಡೆದರು. ನೋಟಾ 2.

10ನೇ ವಾರ್ಡ್‌: ಬಿ.ಪಿ.ರಾಣಿ (ಜೆಡಿಎಸ್‌) 294 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ವರಲಕ್ಷ್ಮಿ 143, ಶೋಭ 35 ಮತಗಳನ್ನು ಪಡೆದರು. ನೋಟಾ 5.

11ನೇ ವಾರ್ಡ್‌: ಟಿ.ಎಸ್‌.ಅರುಣನಾಯಕ (ಜೆಡಿಎಸ್‌) 291 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಗಂಗಾನಾಯಕ 97, ಲಾವಣ್ಯ 71 ಮತಗಳನ್ನು ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ