ಆ್ಯಪ್ನಗರ

ಅರಸೀಕೆರೆ: ಸಡಗರದ ಕರಿಯಮ್ಮ, ಮಲ್ಲಿಗೆಮ್ಮ ದೇವಿ ರಥೋತ್ಸವ

ಅರಸೀಕೆರೆ: ನಗರದ ಗ್ರಾಮದೇವತೆ ಕರಿಯಮ್ಮ, ಮಲ್ಲಿಗೆಮ್ಮ ದೇವಿ 50ನೇ ವರ್ಷದ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

Vijaya Karnataka 4 May 2019, 5:00 am
ಅರಸೀಕೆರೆ: ನಗರದ ಗ್ರಾಮದೇವತೆ ಕರಿಯಮ್ಮ, ಮಲ್ಲಿಗೆಮ್ಮ ದೇವಿ 50ನೇ ವರ್ಷದ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Vijaya Karnataka Web arasikere kariyamma malligemma gari festival
ಅರಸೀಕೆರೆ: ಸಡಗರದ ಕರಿಯಮ್ಮ, ಮಲ್ಲಿಗೆಮ್ಮ ದೇವಿ ರಥೋತ್ಸವ


ಬೆಔಗ್ಗೆ ಕರಿಯಮ್ಮ ದೇವಿಯ ಮೂಲ ಸನ್ನಿಧಾನದಲ್ಲಿ ಪಂಚಮಾತೃಕೆಯರಾದ ಕರಿಯಮ್ಮ, ದಂಡಿಗಮಾರಮ್ಮ, ಪ್ಲೇಗಮ್ಮ, ದೊಡ್ಡಮ್ಮ, ಚಿಕ್ಕಮ್ಮ ದೇವಿಯವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ದೂತರಾಯ ಸ್ವಾಮಿ, ಚಲುವರಾಯಸ್ವಾಮಿ ಮತ್ತು ಕೆಂಚರಾಯ ಸ್ವಾಮಿ ನೇತೃತ್ವದಲ್ಲಿ ಕರಿಯಮ್ಮ ಮತ್ತು ಮಲ್ಲಿಗೆಮ್ಮನವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥವನ್ನು ಎಳೆದರು.

ಸಂಜೆ 6 ಗಂಟೆಗೆ ಉಯ್ಯಾಲೆ ಉತ್ಸವ, ರಾತ್ರಿ 8 ಗಂಟೆಗೆ ಮಣೆ ಹಾಕುವುದು ಹಾಗೂ ಓಕುಳಿ ಸೇವೆ ನಡೆಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜಾತ್ರಾ ವಿಶೇಷವಾಗಿ ಕರಿಯಮ್ಮ ದೇವಿಗೆ ಬಂಗಾರದ ಆನೆ, ನರಿಗೆ ಹಾಗೂ ಇತರೆ ಒಡವೆಗಳನ್ನು, ಮಲ್ಲಿಗೆಮ್ಮ ದೇವಿಗೆ ಬೆಳ್ಳಿ, ಬಂಗಾರದ ಕವಚ ತೊಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ