ಆ್ಯಪ್ನಗರ

ಸ್ವಾತಂತ್ರ್ಯ, ಸಮಾನತೆಗೆ ನಿಲ್ಲದ ಮಹಿಳೆಯರ ಹೋರಾಟ

ಅರಸೀಕೆರೆ: ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವನ ನಿರ್ವಹಣೆ ಮಾಡುತ್ತಿದ್ದ ಹೆಣ್ಣು ಇಂದು ಸಮಾಜದ ಎಲ್ಲ ರಂಗಗಳಲ್ಲೂ ಛಾಪು ಮೂಡಿಸುತ್ತ ತನ್ನದೇ ಆದ ಪ್ರಬುದ್ಧತೆ ಮೆರೆದಿದ್ದಾಳೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಕೆ.ನಿರ್ಮಲಾ ಅಭಿಪ್ರಾಯಪಟ್ಟರು.

Vijaya Karnataka 14 Mar 2019, 5:00 am
ಅರಸೀಕೆರೆ: ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವನ ನಿರ್ವಹಣೆ ಮಾಡುತ್ತಿದ್ದ ಹೆಣ್ಣು ಇಂದು ಸಮಾಜದ ಎಲ್ಲ ರಂಗಗಳಲ್ಲೂ ಛಾಪು ಮೂಡಿಸುತ್ತ ತನ್ನದೇ ಆದ ಪ್ರಬುದ್ಧತೆ ಮೆರೆದಿದ್ದಾಳೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಕೆ.ನಿರ್ಮಲಾ ಅಭಿಪ್ರಾಯಪಟ್ಟರು.
Vijaya Karnataka Web arasikere world womans day taluk advocates association
ಸ್ವಾತಂತ್ರ್ಯ, ಸಮಾನತೆಗೆ ನಿಲ್ಲದ ಮಹಿಳೆಯರ ಹೋರಾಟ


ನಗರದ ವಕೀಲರ ಭವನದಲ್ಲಿ ಮಹಿಳಾ ವಕೀಲರು, ತಾಲೂಕು ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಬದಲಾವಣೆಯಾಗುತ್ತಾ ಇಂದು ಪ್ರತಿ ಕ್ಷೇತ್ರದಲ್ಲಿ ಹೆಣ್ಣು ಗುರುತಿಸಿಕೊಳ್ಳುತ್ತಿರುವ ಜೊತೆಯಲ್ಲಿ ಸ್ವಾತಂತ್ರ್ಯ ಹಾಗೂ ಸಮಾನತೆ ಹಕ್ಕುಗಳ ಸಂರಕ್ಷ ಣೆಗಾಗಿ ಹೋರಾಟ ಮಾಡುವ ಅನಿವಾರ್ಯವೂ ಉದ್ಭವಿಸುತ್ತಿದೆ ಎಂದು ಹೇಳಿದರು.

ಕುಟುಂಬಗಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸುಂದರ ಜೀವನ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಮೂಲ್ಯವಾಗಿದೆ. ಜೀವನದಲ್ಲಿ ಎಲ್ಲವನ್ನು ಸಕಾರಾತ್ಮವಾಗಿ ತೆಗೆದುಕೊಳ್ಳುವುದರಿಂದ ಪುರುಷರಿಗೆ ಆಗುವ ಅನೇಕ ಸಮಸ್ಯೆಗಳಿಂದ ಪಾರು ಮಾಡುವ ಸದೃಢತೆಯನ್ನು ಹೆಣ್ಣು ತೋರುತ್ತಿದ್ದಾಳೆ. ಆದರೆ ಕೆಲವೊಂದು ಸಮಯಗಳಲ್ಲಿ ಪುರುಷರಿಂದ ಮಾತ್ರ ಹೆಣ್ಣು ವಂಚಿತಳಾಗುತ್ತಾಳೆ ಎಂಬುದರ ವಿರುದ್ಧವಾಗಿ ಹೆಣ್ಣು ಹೆಣ್ಣಿನಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಾಳೆ ಎಂಬುದನ್ನು ಎಲ್ಲ ಮಹಿಳೆಯರು ಅರಿಯಬೇಕಿದೆ ಎಂದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಂತೋಷ್‌ ಶ್ರೀವಾಸ್ತವ್‌ ಮಾತನಾಡಿ, ಗಂಡಿನ ಯಶಸ್ಸಿನ ಹಿಂದೆ ಹೆಣ್ಣಿನ ಪಾತ್ರ ಹೆಚ್ಚಿರುತ್ತದೆ ಎಂಬಂತೆ ಇಂದು ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಗಂಡನ ಜೊತೆಯಲ್ಲಿ ಕೈಜೋಡಿಸುವ ಮೂಲಕ ಆರ್ಥಿಕವಾಗಿ ಕುಟುಂಬದ ನಿರ್ವಹಣೆಯಲ್ಲಿ ಸಹಕಾರಿಯಾಗಿದ್ದಾಳೆ ಎಂದರು.

ಅಪರ ಸಿವಿಲ್‌ ಹೆಚ್ಚುವರಿ ನ್ಯಾಯಾಧೀಶೆ ದೀಪಾ ಮಾತನಾಡಿ, ಶೋಷಿತ ಮಹಿಳೆಯರ ರಕ್ಷ ಣೆಗಾಗಿ ಸರಕಾರ ಕಾನೂನು ರಚಿಸಿದ್ದು ಇದರ ಉಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬಹುದು. ಹೆಣ್ಣು ಎಂಬುಂದು ಒಂದು ಸಹನಾಭೂತಿಯ ಸಂಕೇತ. ಕಷ್ಟ ಕಾರ್ಪಣ್ಯಗಳಲ್ಲಿ ಸಮನಾಗಿ ನಿಲ್ಲುವ ಪ್ರತಿ ಹೆಣ್ಣನ್ನು ಆಯಾ ಸಂದರ್ಭಗಳಲ್ಲಿ ಸರಿ ಸಮಾನವಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಉಪನ್ಯಾಸಕಿ ಡಾ.ಮಾಲಿನಿ ಹೆಬ್ಬಾರ್‌ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎಸ್‌.ಲೋಕೆಶ್‌, ಕಾರ್ಯದರ್ಶಿ ಗೀತಾ, ವಕೀಲರಾದ ಲಲಿತಾ ವಿಜಯಕುಮಾರ್‌, ಲಾವಣ್ಯ, ಮಮತಾ, ಶ್ವೇತಾ, ಸವಿತಾ, ತನುಜಾ, ಉಮಾದೇವಿ, ವಿನುತಾ, ಸರ್ಕಾರಿ ಅಭಿಯೋಜಕಿ ಶಿವಮ್ಮ, ಹಿರಿಯ ವಕೀಲರಾದ ರವಿಶಂಕರ್‌, ಬಿ.ಎನ್‌.ರವಿ, ವಾಸುದೇವ್‌, ವಿವೇಕ್‌, ಕಲ್ಗುಂಡಿ ಹಿರಿಯಣ್ಣ, ಜಗದೀಶ್‌, ರಾಘವೇಂದ್ರ, ವಿಜಯಕುಮಾರ್‌, ಯತೀಶ್‌, ರವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ