ಆ್ಯಪ್ನಗರ

ಪೆನ್ಸಿಲ್‌ ಲೆಡ್‌ನಲ್ಲಿ ಮೂಡಿದ ಬಾಹುಬಲಿ !

ಪೆನ್ಸಿಲ್‌ ಲೆಡ್‌ ಮತ್ತು ಸೀಮೆ ಸುಣ್ಣದಲ್ಲಿ ಮೂಡಿದ 1008 ಮಹಾವೀರರು, 24 ತೀರ್ಥಂಕರರು !ವಸ್ತುಪ್ರದರ್ಶನದಲ್ಲಿ ಕಲಾವಿದ ಬೆಳಗಾವಿಯ ವಿನೋದ್‌ ಜೈನ್‌ ಕೈಚಳಕದಲ್ಲಿ ಮೂಡಿರುವ ಈ ಕಲೆ ನೋಡುಗರ ಮನಸೂರೆಗೊಳ್ಳುತ್ತಿದೆ.

Vijaya Karnataka 21 Feb 2018, 5:00 am

ಸೀಮೆಸುಣ್ಣದಲ್ಲಿ ಪ್ರಧಾನಿ ಮೋದಿ, ಡಾ.ವೀರೇಂದ್ರ ಹೆಗ್ಗಡೆ ಕಲಾಕೃತಿ

ಪ್ರಕಾಶ್‌ ಜಿ. ಹಾಸನ

ಪೆನ್ಸಿಲ್‌ ಲೆಡ್‌ ಮತ್ತು ಸೀಮೆ ಸುಣ್ಣದಲ್ಲಿ ಮೂಡಿದ 1008 ಮಹಾವೀರರು, 24 ತೀರ್ಥಂಕರರು !

ವಸ್ತುಪ್ರದರ್ಶನದಲ್ಲಿ ಕಲಾವಿದ ಬೆಳಗಾವಿಯ ವಿನೋದ್‌ ಜೈನ್‌ ಕೈಚಳಕದಲ್ಲಿ ಮೂಡಿರುವ ಈ ಕಲೆ ನೋಡುಗರ ಮನಸೂರೆಗೊಳ್ಳುತ್ತಿದೆ.

ಮನೆಯ ನೆಲದ ಮೇಲೆ ಬಿದ್ದಿದ್ದ ಅಕ್ಕಿ ಕಾಳಿಂದಲೇ ಸ್ಫೂರ್ತಿಗೊಂಡ ಕಲಾವಿದ ಅದರಲ್ಲಿ ಬಾಹುಬಲಿ, ಪಾಶ್ರ್ವನಾಥ ತೀರ್ಥಂಕರರು, ಶಿವಲಿಂಗ, ಗಣೇಶ, ಶಿಲಾಬಾಲಿಕೆಯರನ್ನು ಮೂಡಿಸಿದ್ದು, ಇದನ್ನು ಭೂತಗನ್ನಡಿಯಲ್ಲಿ ವೀಕ್ಷಿಸಬಹುದಾಗಿದೆ.

ಬಡತನದ ಕಾರಣ ಓದಿಗೆ ಪ್ರೋತ್ಸಾಹ ದೊರೆಯದ ಕೊರಗಿನಿಂದ ಹೊರಬರಲು ಪ್ರಯತ್ನಿಸಿದ ಫಲವೇ ಕಲಾವಿದನಾಗಿ ಬೆಳೆಯಲು ಕಾರಣವಾಯಿತು ಎನ್ನುತ್ತಾರೆ ವಿನೋದ್‌ಜೈನ್‌. ಪೆನ್ಸಿಲ್‌ಲೆಡ್‌ನಲ್ಲಿ ಸುಂದರವಾದ ಬಾಹುಬಲಿ, ತೀರ್ಥಂಕರರು, ವರ್ಧಮಾನ್‌ ಸಾಗರ್‌ ಮಹಾರಾಜ್‌, ಭಗತ್‌ಸಿಂಗ್‌, ರವೀಂದ್ರನಾಥ ಠಾಕೂರ್‌, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಚಿತ್ರಗಳನ್ನು ಮೂಡಿಸಿದ್ದು, ನೋಡುಗರನ್ನು ನಿಬ್ಬೆರಗಾಗಿಸುತ್ತಿದೆ.

ಚಾಕ್‌ಪೀಸ್‌ (ಸೀಮೆ ಸುಣ್ಣ )ನಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಗಾಂಧೀಜಿ, ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ, ಪ್ರಧಾನಿ ನರೇಂದ್ರ ಮೋದಿ, ಜೈನಧರ್ಮದ ಮಾನಸಸ್ತಂಭ, ಜಂಬುದ್ವೀಪ ಹೀಗೆ ವಿನೋದ್‌ ಕೈಚಳಕದಲ್ಲಿ ಹಲವು ಕಲಾಕೃತಿಗಳು ಮೂಡಿವೆ.

ಕಲಾವಿದ ಮನಸ್ಸು ಮಾಡಿದರೆ, ಬುದ್ಧಿಶಕ್ತಿ ಪ್ರದರ್ಶಿಸಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಗಸಗಸೆಯಲ್ಲಿ 27 ಕೂದಲು ನುಸುಳುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಗುಂಡ್‌ಪಿನ್‌ನಲ್ಲಿ ರಾಷ್ಟ್ರಧ್ವಜ ಹೀಗೆ ಅತ್ಯಾಕರ್ಷಕ ಹಾಗೂ ಮನಮೋಹಕ ಕೆತ್ತನೆಯನ್ನು ಮಾಡಿದ್ದಾರೆ. ವಸ್ತುಪ್ರದರ್ಶನದ ಮಳಿಗೆಯಲ್ಲಿ ಈ ಕಲಾ ಪ್ರದರ್ಶನವನ್ನು ಏರ್ಪಡಿಸಿದ್ದು, ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

Vijaya Karnataka Web bahubali art in pencil led
ಪೆನ್ಸಿಲ್‌ ಲೆಡ್‌ನಲ್ಲಿ ಮೂಡಿದ ಬಾಹುಬಲಿ !


-----------------------

ಗಿನ್ನಿಸ್‌ ದಾಖಲೆ ಆಸೆ

ಬಡತನದಲ್ಲಿ ಹುಟ್ಟಿದ ನಾನು ಕಲಾವಿದನಾಗಿ ಈ ಕಲಾಕೃತಿಗಳನ್ನು ರಚಿಸಿದ್ದು, ಗಿನ್ನಿಸ್‌ ದಾಖಲೆ ಮಾಡಬೇಕೆಂಬ ಹಂಬಲವಿದೆ. ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಬಾಹುಬಲಿ, ತೀರ್ಥಂಕರರ ಆಕೃತಿಗಳನ್ನು ಪೆನ್ಸಿಲ್‌ ಹಾಗೂ ಚಾಕ್‌ಪೀಸ್‌ನಲ್ಲಿ ಮೂಡಿಸಿದ್ದೇನೆ. ಇದಕ್ಕಾಗಿ ಮೂರು ತಿಂಗಳು ಶ್ರಮಿಸಿದ್ದೇನೆ.

-ವಿನೋದ್‌ಜೈನ್‌, ಕಲಾವಿದ.

------------------------

ಬಾಹುಬಲಿ ಮಹಾಮಸ್ತಕಾಭಿಷೇಕ ವೀಕ್ಷಿಸಲು ಪಾಸ್‌ ಸಿಗಲಿಲ್ಲ, ಆ ನೋವು ತನ್ನನ್ನು ಕಾಡುತ್ತಿತ್ತು. ಪೆನ್ಸಿಲ್‌ನಲ್ಲಿ ಬಾಹುಬಲಿ, ತೀರ್ಥಂಕರರನ್ನು ಕಂಡು ಖುಷಿಯಾಯಿತು. ಬಾಹುಬಲಿಯನ್ನು ವಿಭಿನ್ನವಾಗಿ ತೋರಿಸಿದ್ದಕ್ಕೆ ಧನ್ಯವಾದ.

-ಶ್ರೀನಿವಾಸ್‌ ಗೋಳಮಾರನಹಳ್ಳಿ, ಮಂಡ್ಯಜಿಲ್ಲೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ