ಆ್ಯಪ್ನಗರ

ಕೊರೊನಾ ಎಫೆಕ್ಟ್‌: 900 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬೇಲೂರು ರಥೋತ್ಸವ ರದ್ದು

ಬೇಲೂರು ರಥೋತ್ಸವದ ಸಂಬಂಧ ಧಾರ್ಮಿಕ ಉತ್ಸವಗಳು ಸೇವಾ ಉತ್ಸವಗಳನ್ನು ಯಾವುದೇ ಅಡಚಣೆ ಇಲ್ಲದೇ, ದೇವಾಲಯದ ಪ್ರಾಂಗಣದಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ನಡೆಸುವಂತೆ ಆದೇಶಿಸಲಾಗಿದೆ

Vijaya Karnataka Web 17 Mar 2020, 8:40 pm
ಬೇಲೂರು: 900 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮವಾಗಿ ಕೊರಾನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಶ್ರೀ ಚನ್ನಕೇಶವ ರಥೋತ್ಸವ ರದ್ದು ಮಾಡಲಾಗಿದೆ.
Vijaya Karnataka Web ಬೇಲೂರು ರಥ (ಸಂಗ್ರಹ ಚಿತ್ರ)
ಬೇಲೂರು ರಥ (ಸಂಗ್ರಹ ಚಿತ್ರ)


ದೇಗುಲದ ಕಾರ್ಯನಿರ್ವಹಣಾಕಾರಿ ಆರ್. ವಿದ್ಯುಲತಾ ಮಾತನಾಡಿ, ದೇಶವ್ಯಾಪ್ತಿ ಕೊರಾನಾ ವೈರಸ್ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶದಂತೆ ಮಾ 28 ರಿಂದ ಏ 10 ರವರೆಗೆ ನಡೆಯಬೇಕಿದ್ದ ಪ್ರತಿಷ್ಠಿತ ಶ್ರೀ ಬೇಲೂರು ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ರಥೋತ್ಸವದ ಸಂಬಂಧ ಧಾರ್ಮಿಕ ಉತ್ಸವಗಳು ಸೇವಾ ಉತ್ಸವಗಳನ್ನು ಯಾವುದೇ ಅಡಚಣೆ ಇಲ್ಲದೇ, ದೇವಾಲಯದ ಪ್ರಾಂಗಣದಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ನಡೆಸುವಂತೆ ಆದೇಶಿಸಲಾಗಿದೆ ಎಂದರು.

ದಾಸೋಹ ರದ್ದು


ಜಿಲ್ಲಾಕಾರಿ ಕಚೇರಿಯಲ್ಲಿ ದೇಗುಲದ ಪ್ರಧಾನ ಅರ್ಚಕರು, ಹಾಗೂ ನಾಲ್ಕು ಮೂಲೆ ಅಡ್ಡೆಗಾರರು ಮತ್ತು ಸ್ಥಳೀಯರನ್ನು ಕರೆಸಿ ತೀರ್ಮಾನಿಸಲಾಯಿತು. ಅದರಂತೆ ಮಾ.17ರಿಂದ
ಮಾ.31 ರವರೆಗೂ ದಾಸೋಹದ ವ್ಯವಸ್ಥೆ ಸಂಪೂರ್ಣ ನಿಷೇಸಲಾಗಿದ್ದು, ಜಾತ್ರೋತ್ಸವದಂದು ನೀಡಲಾಗುತ್ತಿದ್ದ ಪ್ರಸಾದವನ್ನು ಸಹ ರದ್ದು ಪಡಿಸಲಾಗಿದೆ. ರಥೋತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೆಚ್ಚುವರಿ ವಾದ್ಯ, ವಿದ್ಯುತ್ ಅಲಂಕಾರ, ಹೂವಿನ ಅಲಂಕಾರ ಸೇರಿದಂತೆ ಇನ್ನು ಕೆಲವು ಟೆಂಡರ್ ಗಳನ್ನು ರದ್ದುಪಡಿಸಲಾಗಿದೆ.

ರಥೋತ್ಸವದ ದಿನದಂದು ದೇಗುಲದ ಪ್ರಾಂಗಣದಲ್ಲಿಯೇ ಚಿಕ್ಕ ರಥವನ್ನು ಎಳೆಯುವಂತೆ ಸೂಚನೆ ನೀಡಿದ್ದಾರೆ. ಭಕ್ತಾಧಿಗಳು ಸಾರ್ವಜನಿಕರು , ನಾಡಪಟೇಲರು, ಚನ್ನಕೇಶವ ಕುಲ ಭಕ್ತರು ನಮ್ಮೊಡನೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ಭಟ್ ಹಾಗೂ ಶ್ರೀನಿವಾಸ ಭಟ್ ಮಾತನಾಡಿ, ನಮ್ಮ ಪೂರ್ವಿಕರಿಂದಲೂ ಸಹ ತಲಾತಲಾಂತರದಿಂದ ರಥೋತ್ಸವವು ರದ್ದುಗೊಂಡಿದ್ದ ಇತಿಹಾಸವೇ ಇಲ್ಲ, ಆದರೆ ಇಂತಹ ಮಹಾಮಾರಿ ವೈರಸ್ ನಿಂದಾಗಿ ಅಡ್ಡಿಯಾಗಿದ್ದು, ಆದರೂ ಸಹ ನಮಗೆ ನಂಬಿಕೆ ಇದ್ದು, ಶ್ರೀ ಚನ್ನಕೇಶವ ಸ್ವಾಮಿ ಭಕ್ತರ ಕೈಯಲ್ಲಿ ಅವನ ಸೇವೆಯನ್ನು ಮಾಡಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದರು.

ಲೋಕಕ್ಕೆ ಕಂಟಕವಾಗಿರುವ ಈ ವೈರಸ್ ಬೇಗನೆ ಮುಕ್ತಿ ಹೊಂದಬೇಕು ಎಂದು ಆಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ