ಆ್ಯಪ್ನಗರ

ಹನುಮ ಜಯಂತಿ: ಅದ್ಧೂರಿ ಶೋಭಾಯಾತ್ರೆ

ಬೇಲೂರು: ಪಟ್ಟಣದ ಲಕ್ಷ್ಮೀಪುರ ಬಡಾವಣೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಮತ್ತು ಹನುಮ ಜಯಂತಿ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ದೇಗುಲದ ವಾರ್ಷಿಕೋತ್ಸವ ಹಾಗೂ ಹನುಮ ಶೋಭಾಯಾತ್ರೆ ಬುಧವಾರ ಪಟ್ಟಣದಲ್ಲಿ ಅದ್ಧೂರಿ ಹಾಗೂ ಶಾಂತಿಯುತವಾಗಿ ನಡೆಯಿತು.

Vijaya Karnataka 27 Dec 2018, 5:00 am
ಬೇಲೂರು: ಪಟ್ಟಣದ ಲಕ್ಷ್ಮೀಪುರ ಬಡಾವಣೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಮತ್ತು ಹನುಮ ಜಯಂತಿ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ದೇಗುಲದ ವಾರ್ಷಿಕೋತ್ಸವ ಹಾಗೂ ಹನುಮ ಶೋಭಾಯಾತ್ರೆ ಬುಧವಾರ ಪಟ್ಟಣದಲ್ಲಿ ಅದ್ಧೂರಿ ಹಾಗೂ ಶಾಂತಿಯುತವಾಗಿ ನಡೆಯಿತು.
Vijaya Karnataka Web beluru hanumajayanthi sobayatare celebartaion
ಹನುಮ ಜಯಂತಿ: ಅದ್ಧೂರಿ ಶೋಭಾಯಾತ್ರೆ


ಪಟ್ಟಣದಲ್ಲಿ ಎಲ್ಲೆಡೆ, ಬಹುತೇಕ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಮೇಲೆ ಹನುಮ ಧ್ವಜ ರಾರಾಜಿಸಿತು. ಯುವ ಜನಾಂಗದ ಬಿರುಸಿನ ಓಡಾಟವು ಎಲ್ಲರನ್ನೂ ಗಮನ ಸೆಳೆಯುತ್ತಿತ್ತು.

ಬೆಳಗ್ಗೆ ದೇವಾಲಯದಲ್ಲಿ ಈ ಉತ್ಸವಾಚಾರಣೆಯ ಅಂಗವಾಗಿ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ತೇರಾ ಕೋಟಿ ರಾಮನಾಮ ಜಪದ ಸಂಕಲ್ಪ ನಡೆಯಿತು. ಲಕ್ಷೀನಾರಾಯಣ ಹೃದಯ ಹೋಮ ಮತ್ತು ಆಂಜನೇಯ ಮೂಲ ಮಂತ್ರದ ಹೋಮವನ್ನು ನಡೆಸಲಾಯಿತು. ಗುಡಿಯ ಆಂಜನೇಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವೀಳ್ಯದೆಲೆಯ ಶೃಂಗಾರವು ನೋಡುಗರನ್ನು ಸೆಳೆಯುತ್ತಿತ್ತು.

ಅವಧೂತರ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿದಾಗ ಪಟ್ಟಣದ ವಿಪ್ರ ವೃಂದ ವೇದವಾಚನ ಸಹಿತ ಸ್ವಾಗತ ನೀಡಿ ಬರ ಮಾಡಿಕೊಂಡಿತು. ದೇಗುಲದಲ್ಲಿ ಅವರನ್ನು ವಿಶೇಷವಾಗಿ ನಮಿಸಿ, ಆಶೀರ್ವಚನವನ್ನು ಪಡೆದುಕೊಂಡ ನಂತರದಲ್ಲಿ ಸಂಕಲ್ಪದ ಕಾರ್ಯಕ್ರಮವು ನಡೆಯಿತು.

ನಂತರ ಮಹಾಮಂಗಳಾರುತಿ ಹಾಗೂ ಅನ್ನ ಸಂತರ್ಪಣೆಯ ಪ್ರಸಾದ ವಿನಿಯೋಗ ಮಾಡಿಲಾಯಿತು. ಅನಂತರ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಉದ್ದೇಶಿತ ರಥಕ್ಕೆ ಬಿಜಯ ಮಾಡಿಸಿ, ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಪರವೂರಿನಿಂದಲೂ ಆಗಮಿಸಿದ್ದ ಕಲಾ ತಂಡಗಳು ವೀರಗಾಸೆ, ಡೊಳ್ಳುಕುಣಿತ, ನಾಸಕ್‌ ಡ್ರಮ್‌ ಬೀಟ್‌, ಮೈಸೂರು ನಗಾರಿಯನ್ನು ಮೊಳಗಿಸಿ ವಿಶೇಷ ಕಳೆಯನ್ನು ಶೋಭಾ ಯಾತ್ರೆಗೆ ನೀಡಿದವು.

ಸಹಸ್ರಾರು ಭಕ್ತರ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಜೆಯವರೆಗೂ ಸಂಚರಿಸಿತು. ಮೆರವಣಿಗೆಯಲ್ಲಿ ಭಕ್ತಾದಿಗಳ ಜಯಘೋಷಗಳು, ಮಂಗಳವಾದ್ಯಗಳು ಮೊಳಗಿ ಪಟ್ಟಣದಲ್ಲಿ ವಿಶೇಷ ಧಾರ್ಮಿಕ ವಾತಾವರಣವು ಕಂಗೊಳಿಸಿತು.

ಪ್ರಮುಖ ಬೀದಿಯಲ್ಲಿ ಶೋಭಾ ಯಾತ್ರೆಯ ಸಂಚಾರದಿಂದಾಗಿ, ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯವಸ್ಥೆಗೆ ಸುಮಾರು 4ಗಂಟೆಗಳ ಕಾಲ ಅಡಚಣೆ ಉಂಟಾಗಿ, ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿತು.

ಪಟ್ಟಣದಲ್ಲಿ ಕಾನೂನು ಹಾಗೂ ಶಾಂತಿ ವ್ಯವಸ್ಥೆಯನ್ನು ಕಾಪಾಡಲು ಆರಕ್ಷ ಕ ಇಲಾಖೆಯ ವ್ಯವಸ್ಥಿತ ಕ್ರಮವನ್ನು ಕೈಗೊಂಡಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಆರಕ್ಷ ಕ ಸಿಬ್ಬಂದಿಗಳನ್ನು ಪಟ್ಟಣದಾದ್ಯಂತ ನಿಯೋಜನೆ ಮಾಡಲಾಗಿತ್ತು.

ವಜ್ರಾಂಜನೇಯ ಸ್ವಾಮಿ: ಪಟ್ಟಣದ ಕೋಟೆಯಲ್ಲಿನ ಶ್ರೀ ವಜ್ರಾಂಜನೇಯ ಸ್ವಾಮಿ ದೇವಸ್ಥಾನದ ಸನ್ನಿದಾನದಲ್ಲಿ ಬೆಳಗ್ಗೆ ಸ್ವಾಮಿಯವರಿಗೆ ವಿಶೇಷ ಅಭಿಷೇಕ ಮತ್ತು ಮಂಗಳಾರತಿ ನಡೆಸಿದ ನಂತರ ಶೋಭಾ ಯಾತ್ರೆಗಾಗಿ ವಿಶೇಷ ಬೃಹತ್‌ ಹೂವಿನ ಹಾರಗಳನ್ನು, ವಿವಿಧ ಭಕ್ತ ಮಂಡಳಿಯವರೂ ತಂದಿದ್ದ ಬೃಹತ್‌ ಹಾರಗಳನ್ನು ಮೆರವಣಿಗೆ ಮೂಲಕ ಲಕ್ಷೀಪುರ ಬಡಾವಣೆಯ ಸನ್ನಿಧಾನಕ್ಕೆ ಕೊಂಡೊಯ್ಯಲಾಯಿತು. ಈ ಮೆರವಣಿಗೆಗಳಲ್ಲೂ ಸಹಸ್ರಾರು ಸಂಖ್ಯೆ ಭಕ್ತಾದಿಗಳು ಪಾಲ್ಗೊಂಡು ಜನಮನ ಸೂರೆಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ