ಆ್ಯಪ್ನಗರ

ಸಂಪುಟ ಪುನಾರಚನೆಯೋ ವಿಸ್ತರಣೆಯೋ ಕಾದು ನೋಡಿ

​​ನಾಯಕತ್ವ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ. ಬಿಜೆಪಿಯಲ್ಲಿ ನಾಯಕತ್ವ ಬದಲಾಗುತ್ತೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆ ರೀತಿ ಹೇಳಲು ಸಿದ್ದರಾಮಯ್ಯ ನಮ್ಮ ಪಕ್ಷದವರಾ? ​​ನಮ್ಮ ಪಕ್ಷದ ನಾಯಕತ್ವ ದ ಬಗ್ಗೆ ಮಾತನಾಡುವ ಬದಲು ಸಿದ್ದರಾಮಯ್ಯ ಅವರ ಸ್ಥಾನಮಾನ ಉಳಿಸಿಕೊಳ್ಳುವತ್ತ ಯೋಚಿಸಲಿ

Vijaya Karnataka Web 12 Jan 2021, 11:56 pm
ಹಾಸನ: ರಾಜ್ಯ ಸರಕಾರದ ಸಚಿವ ಸಂಪುಟ ಪುನಾರಚನೆಯೋ? ವಿಸ್ತರಣೆಯೋ? ಎಂಬುದನ್ನು ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.
Vijaya Karnataka Web ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌


ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಧಿಟಧಿಕ್ಕೆ ಹೊಸಬರು ಬರುತ್ತಾರೋ ಇಲ್ಲವೋ ಎನ್ನೋದು ಕೂಡ ಬುಧವಾರ ಗೊತ್ತಾಗಲಿದೆ. ಬಿಜೆಪಿಗೆ ಬಂದವರು, ಇಲ್ಲೇ ಇದ್ದವರು ಎಲ್ಲರೂ ಒಂದೇ. ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಿದಾಗಲೆಲ್ಲಾ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಅಸಮಾಧಾನ ಭುಗಿಲೆದ್ದಿಲ್ಲ. ಬೆಂಕಿಯೂ ಬಿದ್ದಿಲ್ಲ ಎಂದು ಊಹಾಪೋಹಕ್ಕೆ ತೆರೆ ಎಳೆದರು.

ನಾಯಕತ್ವ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ. ಬಿಜೆಪಿಯಲ್ಲಿ ನಾಯಕತ್ವ ಬದಲಾಗುತ್ತೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆ ರೀತಿ ಹೇಳಲು ಸಿದ್ದರಾಮಯ್ಯ ನಮ್ಮ ಪಕ್ಷದವರಾ? ನಮ್ಮ ಪಕ್ಷದ ನಾಯಕತ್ವ ದ ಬಗ್ಗೆ ಮಾತನಾಡುವ ಬದಲು ಸಿದ್ದರಾಮಯ್ಯ ಅವರ ಸ್ಥಾನಮಾನ ಉಳಿಸಿಕೊಳ್ಳುವತ್ತ ಯೋಚಿಸಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿಹಾಸನ-ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಳಿನ್‌ಕುಮಾರ್‌ ಕಟೀಲ್‌ ಹಾಗೂ ಸಂಸದ ಪ್ರತಾಪ್‌ಸಿಂಹ, ಸಚಿವ ಗೋಪಾಲಯ್ಯ ಹಾಗೂ ಶಾಸಕ ಪ್ರೀತಂ ಜೆ.ಗೌಡ ವೀಕ್ಷಿಸಿದರು. 2022ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ