ಆ್ಯಪ್ನಗರ

ರಾಜ್ಯ ಸರಕಾರ ವಿಸರ್ಜನೆಗೆ ಬಿಎಸ್ಪಿ ಆಗ್ರಹ

ವಿಕ ಸುದ್ದಿಲೋಕ ಹಾಸನ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ ನೆರವು ಕೊಡಿಸಲು ಅಸಮರ್ಥರಾದ ರಾಜ್ಯ ಬಿಜೆಪಿ ಸಂಸದರು ರಾಜೀನಾಮೆ ನೀಡಬೇಕು ಮತ್ತು ರಾಜ್ಯದ ಅಸಹಾಯಕ ...

Vijaya Karnataka 5 Oct 2019, 5:00 am
ವಿಕ ಸುದ್ದಿಲೋಕ ಹಾಸನ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ ನೆರವು ಕೊಡಿಸಲು ಅಸಮರ್ಥರಾದ ರಾಜ್ಯ ಬಿಜೆಪಿ ಸಂಸದರು ರಾಜೀನಾಮೆ ನೀಡಬೇಕು ಮತ್ತು ರಾಜ್ಯದ ಅಸಹಾಯಕ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ವಿಸರ್ಜಿಸುವಂತೆ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್‌ ಬಹುಜನ್‌ ಆಗ್ರಹಿಸಿದರು.
Vijaya Karnataka Web bsp demands dissolution of state government
ರಾಜ್ಯ ಸರಕಾರ ವಿಸರ್ಜನೆಗೆ ಬಿಎಸ್ಪಿ ಆಗ್ರಹ


''ರಾಜ್ಯದಲ್ಲಿಸುರಿದ ಭಾರಿ ಮಳೆಯಿಂದಾಗಿ ಮತ್ತು ನೆರೆಯ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿನೀರು ಬಿಟ್ಟ ಪರಿಣಾಮ ನಮ್ಮ ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿಪ್ರವಾಹ ಪರಿಸ್ಥಿತಿ ಉಂಟಾಯಿತು, ಪ್ರವಾಹದ ಭೀಕರತೆಗೆ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ,'' ಎಂದು ಸುದ್ದಿಗೋಷ್ಠಿಯಲ್ಲಿತಿಳಿಸಿದರು.

''ಪ್ರವಾಹದಿಂದ ಸುಮಾರು 2 ಲಕ್ಷದ 30 ಸಾವಿರ ಮನೆಗಳ ಹಾನಿ, 87 ಜನರ ಸಾವು, 7 ಲಕ್ಷ 82 ಸಾವಿರ ಹೆಕ್ಟೇರ್‌ ಬೆಳೆ ನಾಶ, 35 ಸಾವಿರ ಕಿ.ಮೀ. ರಸ್ತೆ ನಾಶ, ಲೆಕ್ಕವಿಲ್ಲದಷ್ಟು ಜಾನುವಾರುಗಳು ಕಣ್ಮರೆಯಾಗಿದೆ. ಶಾಲೆ, ಆಸ್ಪತ್ರೆಗಳು ಸೇರಿದಂತೆ ಸರಕಾರದ ಅಂದಾಜಿನ ಪ್ರಕಾರವೇ 38451 ಕೋಟಿ ನಷ್ಟವಾಗಿದೆ,'' ಎಂದು ಹೇಳಿದರು.

''ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಜೊತೆ ನೆರೆಪೀಡಿತ ಪ್ರದೇಶ ಗಳಿಗೆ ತೆರಳಿ ಪರಿಸ್ಥಿತಿಯ ಗಂಭೀರತೆಯನ್ನು ವೀಕ್ಷಣೆ ಮಾಡಿದ್ದಾರೆ. ಹಾಗೆಯೇ ಕೇಂದ್ರ ಸರಕಾರದ ಅಧಿಕಾರಿಗಳ ತಂಡವು ಸಹ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಿರುತ್ತಾರೆ. ಆದರೆ ಇದುವರೆಗೂ ಕೇಂದ್ರದಿಂದ ಪ್ರವಾಹ ಪೀಡಿತರ ನೆರವಿಗೆ ಯಾವುದೇ ಪರಿಹಾರವಾಗಲೀ ಅಥವಾ ಆರ್ಥಿಕ ನೆರವಿನ ಪರಿಹಾರ ಕೂಡ ಘೋಷಿಸಿಲ್ಲ,'' ಎಂದು ಆರೋಪಿಸಿದರು.

ಬಿಎಸ್‌ಪಿ ಜಿಲ್ಲಾಮುಖಂಡ ಹರೀಶ್‌ ಅತ್ನಿ, ಬಿಎಸ್‌ಪಿ ರಾಜ್ಯ ಸಮಿತಿ ಸದಸ್ಯೆ ಶಿವಮ್ಮ, ಬಿಎಸ್‌ಪಿ ಜಿಲ್ಲಾಮುಖಂಡ ಎ.ಪಿ.ಅಹಮ್ಮದ್‌ ಹಾಗೂ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ