ಆ್ಯಪ್ನಗರ

ಚಾಕು ಇರಿತ: ವ್ಯಕ್ತಿಗೆ 7 ವರ್ಷ ಜೈಲು

ಹಣಕ್ಕಾಗಿ ಅಪರಿಚಿತ ಯುವಕನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದ ವ್ಯಕ್ತಿಗೆ ಪಟ್ಟಣದ ನಾಲ್ಕನೇ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್‌ ನ್ಯಾಯಾಲಯ 7 ವರ್ಷ ಕಠಿಣ ಸೆರೆವಾಸ ಶಿಕ್ಷೆ ಹಾಗೂ 32 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Vijaya Karnataka Web 5 Sep 2019, 5:00 am
ಚನ್ನರಾಯಪಟ್ಟಣ: ಹಣಕ್ಕಾಗಿ ಅಪರಿಚಿತ ಯುವಕನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದ ವ್ಯಕ್ತಿಗೆ ಪಟ್ಟಣದ ನಾಲ್ಕನೇ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್‌ ನ್ಯಾಯಾಲಯ 7 ವರ್ಷ ಕಠಿಣ ಸೆರೆವಾಸ ಶಿಕ್ಷೆ ಹಾಗೂ 32 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
Vijaya Karnataka Web caku irita vyaktige 7 varsa jailu
ಚಾಕು ಇರಿತ: ವ್ಯಕ್ತಿಗೆ 7 ವರ್ಷ ಜೈಲು


2014ರ ಏಪ್ರಿಲ್‌ 22 ರಂದು ಪಟ್ಟಣದ ಮಾರಿಗುಡಿ ಬೀದಿ ವಾಸಿಯಾದ ಯೋಗೇಶ ತನ್ನ ತಮ್ಮ ಹರೀಶನೊಂದಿಗೆ ಆನೆಕೆರೆ ಗ್ರಾಮದೇವತೆಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅಲ್ಲಿಗೆ ಬಂದ ನುಗ್ಗೇಹಳ್ಳಿ ಹೋಬಳಿ ಮುದ್ದನಹಳ್ಳಿಯ ಜಯರಾಮ ವಿನಾಕಾರಣ ಜಗಳ ತೆಗೆದು ಏಕಾಏಕಿ ಹರೀಶನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ವೇಳೆ ಯೋಗೇಶ, ರಂಗಸ್ವಾಮಿ, ಸ್ವಾಮಿ ಮತ್ತು ತೀರ್ಥರಾಜು ಜಗಳ ಬಿಡಿಸಿ ಹರೀಶನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಬಳಿಕ ಹರೀಶ ಚೇತರಿಸಿಕೊಂಡಿದ್ದ. ಅಂದಿನ ಗ್ರಾಮಾಂತರ ಠಾಣೆ ಎಸ್‌ಐ ಪಿ.ಸುರೇಶ್‌ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧಿಧೀಶರು ವಿಚಾರಣೆ ನಡೆಸಿ ಅಪರಾಧಿ ಜಯರಾಮಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

32 ಸಾವಿರ ರೂ. ದಂಡದಲ್ಲಿ 20 ಸಾವಿರ ರೂ. ಗಳನ್ನು ಪರಿಹಾರವಾಗಿ ಗಾಯಾಳು ಹರೀಶನಿಗೆ ನೀಡುವಂತೆ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಬಿ.ನಾಗಸಂದ್ರಮ್ಮ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ