ಆ್ಯಪ್ನಗರ

ದಿಕ್ಕು ತೋಚದ ಎಚ್‌ಡಿಕೆಯಿಂದ ಸಿಡಿ ಗೊಂದಲ: ಸದಾನಂದಗೌಡ ವ್ಯಂಗ್ಯ

"ಸಿಡಿ ಬಿಡುಗಡೆ ಮಾಡುವುದು ಎಂದರೆ, ಹಲವು ಜನರಿಗೆ ರಾಜಕೀಯ ಸ್ವತ್ತುಗಳಾಗಿ ಪರಿಣಮಿಸಿದೆ. ಇದೆಲ್ಲದಕ್ಕೂ ಉತ್ತರ ಸಿಗುತ್ತದೆ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿಗಳನ್ನು ನೋಡಿದರೆ ಸಾಕಷ್ಟು ಮಂದಿ ಜೈಲಿಗೆ ಹೋಗಬೇಕಿತ್ತು," ಎಂದು ಸದಾನಂದ ಗೌಡ ಹೇಳಿದ್ದಾರೆ.

Vijaya Karnataka 10 Jan 2020, 7:44 pm

ಹಾಸನ/ಮಂಡ್ಯ: "ನಿರಾಶೆಗೊಂಡಿರುವ ಎಚ್‌ಡಿ ಕುಮಾರಸ್ವಾಮಿಗೆ ರಾಜಕೀಯದಲ್ಲಿ ದಿಕ್ಕೇ ತೋಚದಂತಾಗಿದೆ. ಜತೆಗೆ ಅವರ ರಾಜಕೀಯ ಮೆಟ್ಟಿಲುಗಳೂ ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿಅದನ್ನು ಭದ್ರಪಡಿಸಿಕೊಳ್ಳಲು ಮಂಗಳೂರಿನ ಗಲಭೆಯ ‘ಸಿಡಿ’ ಬಿಡುಗಡೆ ಮಾಡಿ ಜನರಿಗೆ ಗೊಂದಲ ಮೂಡಿಸುತ್ತಿದ್ದಾರೆ’’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವ್ಯಂಗ್ಯವಾಡಿದರು.
Vijaya Karnataka Web Sadananda Gowda


ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, "ಮಂಗಳೂರು ಗಲಭೆ ನಡೆದು ಹಲವು ದಿನಗಳು ಕಳೆದಿವೆ. ಈಗ ಸಿಡಿ ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ನಿಸ್ಸೀಮರಂತೆ ಜನರ ಬಳಿ ಹೋಗಲು ತವಕಿಸುತ್ತಿದ್ದಾರೆ. ಅದರ ಸತ್ಯಾಸತ್ಯತೆ ಬಗ್ಗೆ ನಾನೇನು ಮಾತನಾಡುವುದಿಲ್ಲ. ಮಂಗಳೂರು ಗಲಭೆ ನಡೆದು ಸಾಕಷ್ಟು ದಿನ ಆಗಿದೆ. ಸಿಡಿ ತಯಾರಿಸಲು ಇಷ್ಟು ದಿನಗಳು ಬೇಕಾಯಿತಾ ಕುಮಾರಸ್ವಾಮಿಯವರೇ’’ ಎಂದು ಪಶ್ನಿಸಿದರು.

"ಈ ಗಲಭೆಯಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ಇದು ಸಹ ಪೊಲೀಸರ ತನಿಖೆಯಿಂದ ಹೊರ ಬರುತ್ತದೆ," ಎಂದರು. ಪೊಲೀಸರೇ ಕಲ್ಲುತೂರಾಟ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ, "ಅವರದ್ದೇ ಜನರನ್ನು ಕಳುಹಿಸಿ ಪೊಲೀಸ್‌ ಡ್ರೆಸ್‌ ಹಾಕಿಸಿ ಯಾಕೆ ಮಾಡಿರಬಾರದು. ಇದರ ಹಿಂದೆ ದೊಡ್ಡ ಹುನ್ನಾರವಿದೆ ಎಂಬುದು ಜನತೆಗೆ ತಿಳಿದಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ವಿಡಿಯೋ ಸರಿಯಿಲ್ಲ, ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ: ಬೊಮ್ಮಾಯಿ

"ಸಿಡಿ ಬಿಡುಗಡೆ ಮಾಡುವುದು ಎಂದರೆ, ಹಲವು ಜನರಿಗೆ ರಾಜಕೀಯ ಸ್ವತ್ತುಗಳಾಗಿ ಪರಿಣಮಿಸಿದೆ. ಇದೆಲ್ಲದಕ್ಕೂ ಉತ್ತರ ಸಿಗುತ್ತದೆ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿಗಳನ್ನು ನೋಡಿದರೆ ಸಾಕಷ್ಟು ಮಂದಿ ಜೈಲಿಗೆ ಹೋಗಬೇಕಿತ್ತು. ಇವರುಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿ ಜನರನ್ನು ತಪ್ಪು ದಾರಿಗೆ ಎಳೆಯಲು ಹೀಗೆ ಮಾಡುತ್ತಿದ್ದಾರೆ. ಇದಕ್ಕೆ ಜನರು ತಲೆಕೆಡಿಸಿಕೊಳ್ಳುವುದಿಲ್ಲ,’’ ಎಂದು ಭವಿಷ್ಯ ನುಡಿದರು. ಅವರ ಸಿಡಿ ಏನಿದ್ದರೂ, ಒಂದೆರಡು ದಿನ ಮಾತ್ರ ಚಲಾವಣೆಯಲ್ಲಿಇರುತ್ತದೆ. ಬಳಿಕ ಠುಸ್‌ ಆಗುತ್ತದೆ ಎಂದು ಲೇವಡಿ ಮಾಡಿದರು.

ಗೂಟದ ಕಾರು ಕಳೆದುಕೊಂಡ ಮೇಲೆ ಖಿನ್ನತೆ

ದೇಶ ಆರ್ಥಿಕ ದಿವಾಳಿ ಅಂಚಿಗೆ ಬಂದಿದೆ ಎಂಬ ಸಿದ್ದರಾಮಯ್ಯ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಗೂಟದ ಕಾರು ಬಿಟ್ಟ ನಂತರ ಇಂತಹ ಮಾತುಗಳು ಸಾಮಾನ್ಯವಾಗಿ ಬರುತ್ತದೆ. ಇದು ಖಿನ್ನತೆಗೆ ಒಳಗಾಗಿ ಆಡುವ ಮಾತುಗಳು. ಕೆಲವರಿಗೆ ಸ್ವಂತ ಕಾರಿನಲ್ಲಿ ಹೋದರೆ ನಿರಾಶೆ ಉಂಟಾಗುತ್ತದೆ. ಆರ್ಥಿಕ ದಿವಾಳಿ ಎಂಬುದು ಒಂದೇ ಬಾರಿ ಬರುವುದಿಲ್ಲ ಸಿದ್ದರಾಮಯ್ಯನರೇ, ಇದಕ್ಕೆ ಹಿಂದಿನ ಸರಕಾರಗಳ ಆಡಳಿತವೂ ಕಾರಣ ಎಂಬುದನ್ನು ಮರೆತಂತಿದೆ,’’ ಎಂದು ವಿವರಿಸಿದರು.

ಮಂಗಳೂರು ಗೋಲಿಬಾರ್ : ಎಚ್‌ಡಿಕೆ ಸಿಡಿಸಿದ್ರು ಸಿ ಡಿ ಬಾಂಬ್

"ರಾಜ್ಯದಲ್ಲಿಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಹಬ್ಬಾಸ್‌ ಹೇಳಬೇಕು. ಏಕೆಂದರೆ, 70 ವರ್ಷ ದಾಟಿದ್ದರೂ ಸಮರ್ಥವಾಗಿ ನೆರೆಯನ್ನು ನಿಭಾಯಿಸಿದ್ದಾರೆ. ಜತೆಗೆ ಅಭಿವೃದ್ಧಿ ಆಡಳಿತ ನಡೆಸುತ್ತಿದ್ದಾರೆ. ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ," ಎಂದು ಮಾಹಿತಿ ನೀಡಿದರು.

ನಮಸ್ಕಾರ ಅಂದರೆ ಬೆಂಬಲ ಅಲ್ಲ

ಬಿಜೆಪಿ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, "ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಎದುರು ಸಿಕ್ಕಿದ ಬಿಜೆಪಿ ಶಾಸಕರು ನಮಸ್ಕಾರ ಸಾರ್‌ ಎಂದು ಗೌರವ ನೀಡುತ್ತಾರೆ. ಕುಮಾರಸ್ವಾಮಿಯವರು ಇದನ್ನೇ ನಮಸ್ಕಾರ ಮಾಡಿದ ಬ್ರದರ್‌ಗಳೆಲ್ಲ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದುಕೊಂಡರೆ ಯಾರ ತಪ್ಪು ," ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯ 104 ಶಾಸಕರು, ಉಪಚುನಾವಣೆಯಲ್ಲಿ ಗೆದ್ದ 12 ಜನ ಎಲ್ಲರೂ ಎಚ್‌ಡಿಕೆ ಸಂಪರ್ಕದಲ್ಲೇ ಇದ್ದಾರೆ. ಅವರನ್ನೆಲ್ಲ ಕುಮಾರಣ್ಣ ಬ್ರದರ್‌ ಎಂದು ಮಾತನಾಡಿಸುತ್ತಾರೆ. ಆದರೆ ಅವರು ಯಾರು ಎಚ್‌ಡಿಕೆ ಸಂಪರ್ಕದಲ್ಲಿ ಇಲ್ಲ. ಇದೆಲ್ಲ ಊಹಾಪೋಹವಷ್ಟೇ," ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ