ಆ್ಯಪ್ನಗರ

ಹಾಸನ: ಗುಂಡಿಟ್ಟು ಸೆಸ್ಕ್ ಕಿರಿಯ ಸಹಾಯಕನ ಹತ್ಯೆ

ಮೃತ ಸಂತೋಷ್‌ಕುಮಾರ್ 16 ವರ್ಷದ ಹಿಂದೆ ಜಯಶ್ರೀ ಎಂಬಾಕೆಯನ್ನು ಪ್ರೇಮಿಸಿ ಯುವತಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದ. ಮದುವೆ ಬಳಿಕ ಆತನ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಸೆಸ್ಕ್‌ನ ಕಿರಿಯ ಸಹಾಯಕನಾಗಿ ಉದ್ಯೋಗ ದೊರೆತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka Web 16 Jan 2021, 9:03 pm
ಹಾಸನ: ಚಾಮುಂಡೇಶ್ವರಿ ವಿದ್ಯುತ್ ಕಂಪನಿ ಕಿರಿಯ ಸಹಾಯಕನನ್ನು ನಗರಕ್ಕೆ ಸಮೀಪದ ಹೂವಿನ ಹಳ್ಳಿ ಕಾವಲಿನ ಹೊಲದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
Vijaya Karnataka Web ಗುಂಡೇಟು
ಗುಂಡೇಟು


ಶನಿವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂತೋಷ್‌ಕುಮಾರ್ (36) ಮೃತ ವ್ಯಕ್ತಿ. ಮೂಲತಃ ಅರೇಕಲ್ಲು ಹೊಸಳ್ಳಿಯ ಈತ ವಿಶ್ವೇಶ್ವರಯ್ಯ ಬಡಾವಣೆಯ ತನ್ನ ಮನೆಯಿಂದ ಶುಕ್ರವಾರ ಮಧ್ಯಾಹ್ನ 3ಕ್ಕೆ ತೆರಳಿದ್ದು, ಪರಿಚಯಸ್ಥರೊಂದಿಗೆ ರಾತ್ರಿ ಮದ್ಯ ಸೇವಿಸಿ, ಊಟ ಮಾಡುವ ಹಂತದಲ್ಲಿ ವಾಗ್ವಾದ ನಡೆದು ತಲೆ ಮತ್ತಿತರ ಭಾಗಕ್ಕೆ ಮೂರರಿಂದ ನಾಲ್ಕು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಸಿಪಿಐ ಸುರೇಶ್ ತಿಳಿಸಿದರು.

ಮೃತ ಸಂತೋಷ್‌ಕುಮಾರ್ 16 ವರ್ಷದ ಹಿಂದೆ ಜಯಶ್ರೀ ಎಂಬಾಕೆಯನ್ನು ಪ್ರೇಮಿಸಿ ಯುವತಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದ. ಮದುವೆ ಬಳಿಕ ಆತನ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಸೆಸ್ಕ್‌ನ ಕಿರಿಯ ಸಹಾಯಕನಾಗಿ ಉದ್ಯೋಗ ದೊರೆತಿತ್ತು ಎಂದು ಹಾಸನ ಪೊಲೀಸರು ತಿಳಿಸಿದ್ದಾರೆ.

ಎರಡು ವರ್ಷದಿಂದ ಕರ್ತವ್ಯಕ್ಕೆ ಗೈರು

ಕಳೆದ ಎರಡು ವರ್ಷದಿಂದ ಸೆಸ್ಕ್‌ನ ಕರ್ತವ್ಯಕ್ಕೆ ಗೈರು ಹಾಜರಿಯಾಗುತ್ತಿದ್ದ ಹಿನ್ನೆಲೆಯಲ್ಲಿ ನೋಟಿಸ್‌ ಕೂಡ ನೀಡಲಾಗಿತ್ತು ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತನಿಗೆ ಪತ್ನಿ, 13 ವರ್ಷದ ಹೆಣ್ಣು ಹಾಗೂ ನಾಲ್ಕು ವರ್ಷದ ಮಗನಿದ್ದು, ಯಾವ ಉದ್ದೇಶಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ನಿಗೂಢವಾಗಿದೆ.

ತಂಡ ರಚನೆ


ಮೂರರಿಂದ ನಾಲ್ಕು ಜನ ಸೇರಿ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಬಂಧನ ಕಾರ್ಯಾಚರಣೆಗೆ ಸಿಪಿಐ ಸುರೇಶ್ ಮತ್ತು ಇನ್ಸ್‌ಪೆಕ್ಟರ್ ನೇತೃತ್ವದ ಎರಡು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ