ಆ್ಯಪ್ನಗರ

ಟ್ರಾಫಿಕ್‌ ಪೊಲೀಸರು, ಸಾರ್ವಜನಿಕರ ವಾಗ್ವಾದ

ನೋ ಪಾರ್ಕಿಂಗ್‌ ಮತ್ತು ಮನಸ್ಸಿಗೆ ಬಂದೆಡೆ ನಿಲುಗಡೆ ಮಾಡಿದ ವಾಹನಗಳನ್ನು ಪೊಲೀಸರು ವಶಪಡಿಸಿಕೊಳ್ಳುವ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆಯಿತು.

Vijaya Karnataka 12 Jul 2019, 5:00 am
ಹಾಸನ: ನೋ ಪಾರ್ಕಿಂಗ್‌ ಮತ್ತು ಮನಸ್ಸಿಗೆ ಬಂದೆಡೆ ನಿಲುಗಡೆ ಮಾಡಿದ ವಾಹನಗಳನ್ನು ಪೊಲೀಸರು ವಶಪಡಿಸಿಕೊಳ್ಳುವ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆಯಿತು.
Vijaya Karnataka Web conflicts between police and citizens
ಟ್ರಾಫಿಕ್‌ ಪೊಲೀಸರು, ಸಾರ್ವಜನಿಕರ ವಾಗ್ವಾದ


ನಗರದ ಶಂಕರಮಠ ರಸ್ತೆಯಲ್ಲಿ ಬ್ಯಾಟರಿ ಅಂಗಡಿ ಮಾಲೀಕ ಬೈಕ್‌ ನಿಲ್ಲಿಸಿ ಒಳಪ್ರವೇಶಿಸಿದ್ದೇ ತಡ ಸಮವಸ್ತ್ರದಲ್ಲಿ ಇಲ್ಲವ ವ್ಯಕ್ತಿ ದಿಢೀರ್‌ ಬಂದು ಬೈಕ್‌ ಎತ್ತಿಕೊಂಡು ಹೋಗಲು ಮುಂದಾದ. ಯಾರಪ್ಪ ನೀನು ಎಂದು ಕೇಳುವಷ್ಟರಲ್ಲಿ ಅತ್ತಲಿಂದ ಬಂದ ಪೊಲೀಸ್‌ ವಾಹನ ತೋರಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಇದೇ ವೇಳೆ ವಾಹನವನ್ನು ವಶಪಡಿಸಿಕೊಳ್ಳಲು ಖಾಸಗಿಯಾಗಿ ಯುವಕರನ್ನು ನೇಮಿಸಿಕೊಂಡಿದ್ದು, ಅವರ ಗುರುತು ಪರಿಚಯ ಇಲ್ಲದೆ ನಮ್ಮ ವಾಹನಗಳನ್ನು ಹೇಗೆ ಮುಟ್ಟುತ್ತಾರೆ ಎಂಬ ವಿಷಯವಾಗಿ ವಾಗ್ವಾದ ಶುರುವಾಯಿತು.

ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ಸಂದರ್ಭ ಪೊಲೀಸ್‌ ಇಲಾಖೆಯ ಸಿಬ್ಬಂದಿಯೂ ಅಲ್ಲದ ಆ ವ್ಯಕ್ತಿ ಬಳಿ ಟ್ರಾಫಿಕ್‌ ಪೊಲೀಸ್‌ವೊಬ್ಬರು ''ಏಯ್‌ ಏನ್‌ ನೋಡ್ತಿದ್ದೀಯಾ, ಎತ್ತಿಹಾಕು ಬೈಕ್‌'' ಎಂದು ಧ್ವನಿವರ್ಧಕದಲ್ಲಿ ಅಬ್ಬರಿಸುತ್ತಿದ್ದರು. ಇದರಿಂದ ಅಂಗಡಿ ಮಾಲೀಕನೂ ಕೋಪಗೊಂಡು ''ಏಕೆ ಹೀಗೆ ಆಡ್ತಿರಾ? ಹೇಳಿದ್ರೆ ನಾವೇ ತೆಗೆದುಕೊಳ್ತೀವಿ'' ಎಂದು ಹೇಳಿದರು. ಈ ವೇಳೆ ಟ್ರಾಫಿಕ್‌ ಪೊಲೀಸರೊಂದಿಗೆ ಮತ್ತೊಬ್ಬ ಸಿವಿಲ್‌ ಪೊಲೀಸ್‌ ಪೇದೆಯೂ ಸೇರಿ ವಾಗ್ವಾದ ನಡೆಸಲು ಆರಂಭಿಸಿದರು. ಅಷ್ಟರಲ್ಲಿ ಅಲ್ಲಿ ಹತ್ತಾರು ಜನರ ಗುಂಪು ಸೇರಿತು. ಒಂದಿಬ್ಬರು ಪೊಲೀಸ್‌ ಪರ ವಕಾಲತ್ತು ವಹಿಸಿದರೆ, ಮತ್ತೆ ಕೆಲವರು ಪೊಲೀಸ್‌ ವರ್ತನೆ ವಿರುದ್ಧ, ಇನ್ನು ಕೆಲವರು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತರು.

ಅಷ್ಟರಲ್ಲಿ ವೃದ್ಧರೊಬ್ಬರು ಮಧ್ಯೆ ಪ್ರವೇಶಿಸಿ ಪೊಲೀಸರ ವಿರುದ್ಧ ''ತೊಂದರೆ ಕೊಡುವವರೂ ನೀವೇ, ಸಾವಿರ, ಸಾವಿರ ದಂಡ ಹಾಕುವವರೂ ನೀವೇ. ಆದರೆ ತೊಂದರೆ ಅನುಭವಿಸುವವರು ನಾವು. ಅಯ್ಯೋ ಮಾತಾಡ್ತಾ ಹೋದ್ರೆ ಬಿಪಿ ಜಾಸ್ತಿ ಆಗುತ್ತದೆ'' ಎಂದು ಅಸಹನೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ