ಆ್ಯಪ್ನಗರ

ಹಾಸನ: ಒಂದು ತಿಂಗಳಲ್ಲಿ ಕೊರೊನಾ ಅಬ್ಬರ ಜೋರು, ಎರಡೇ ದಿನದಲ್ಲಿ 20 ಜನರ ಸಾವು

ಆ.29ರಂದು 7,539ರಷ್ಟಿದ್ದ ಸೋಂಕಿತರ ಸಂಖ್ಯೆ ಇದ್ದರೆ , 183 ಜನ ಮೃತಪಟ್ಟಿದ್ದರು. ಪ್ರಸ್ತುತ ಸೆ.30ಕ್ಕೆ 16,799ರ ಗಡಿದಾಟಿದೆ. ಆ ಮೂಲಕ ಬರೋಬ್ಬರಿ ತಿಂಗಳ ಅಂತರದಲ್ಲಿ 8 ಸಾವಿರದಷ್ಟು ಏರಿಕೆ ಕಂಡಿದೆ. ಸಾವಿನ ಸಂಖ್ಯೆ 331ಕ್ಕೆ ಏರಿಕೆಯಾಗಿದೆ.

Vijaya Karnataka Web 30 Sep 2020, 8:49 pm
ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 331ಕ್ಕೆ ಏರಿಕೆಯಾಗಿದೆ. ಎರಡು ದಿನದಲ್ಲಿ 20 ಜನ ಮೃತಪಡುವ ಜತೆಗೆ 967 ಹೊಸ ಪ್ರಕರಣ ವರದಿಯಾಗಿರುವುದನ್ನು ಗಮನಿಸಿದರೆ ಸೋಂಕು ಎಷ್ಟರ ಮಟ್ಟಿಗೆ ಶರವೇಗದಲ್ಲಿ ಹರಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
Vijaya Karnataka Web ಕೊರೊನಾ
ಕೊರೊನಾ


ಈವರೆಗಿನ ಸೋಂಕಿತರ ಸಂಖ್ಯೆ 17 ಸಾವಿರಕ್ಕೆ ಸಮೀಪದಲ್ಲಿದೆ. ಪ್ರಕರಣ ಗಣನೀಯವಾಗಿ ಏರಿಕೆ ಕಾಣುತ್ತಿದ್ದರೂ, ಜಿಲ್ಲೆಯಲ್ಲಿ ಜನತೆ ಮಾತ್ರ ಡೋಂಟ್‌ಕೇರ್ ಎನ್ನುತ್ತಿದ್ದಾರೆಯೇ ಎಂಬ ಸಂಶಯ ವೈದ್ಯರನ್ನು ಕಾಡಲಾರಂಭಿಸಿದೆ.

ಪ್ರತಿಭಟನೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನ ಭಾಗವಹಿಸುವಿಕೆ ಗಮನಿಸಿದರೆ, ಮಾಸ್ಕ್ ಹಾಕಿಕೊಂಡಿದ್ದರೂ, ತುಟಿಮೇಲಿಂದ ಕೆಳಕ್ಕೆ ಸರಿಸಿ ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳದೆ ಇರುವುದೇ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬುದು ವೈದ್ಯರು ಅನಿಸಿಕೆಯಾಗಿದೆ.

ಆ.29ರಂದು 7,539ರಷ್ಟಿದ್ದ ಸೋಂಕಿತರ ಸಂಖ್ಯೆ ಇದ್ದರೆ , 183 ಜನ ಮೃತಪಟ್ಟಿದ್ದರು. ಪ್ರಸ್ತುತ ಸೆ.30ಕ್ಕೆ 16,799ರ ಗಡಿದಾಟಿದೆ. ಆ ಮೂಲಕ ಬರೋಬ್ಬರಿ ತಿಂಗಳ ಅಂತರದಲ್ಲಿ 8 ಸಾವಿರದಷ್ಟು ಏರಿಕೆ ಕಂಡಿದೆ. ಸಾವಿನ ಸಂಖ್ಯೆ 331ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದ ಸೆ.30 ರಂದು 9 ಮಂದಿ ಮೃತರಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 331ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೆ.29ಕ್ಕೆ 476 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದರೆ, ಸೆ.30ರಂದು 451 ಪ್ರಕರಣದ ಜತೆ ಎರಡು ದಿನದಲ್ಲಿ 20 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 3,424 ಮಂದಿ ಸಕ್ರಿಯ ಸೋಂಕಿತರು ಹಾಗೂ 55 ಜನ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 13,044 ಮಂದಿ ಗುಣಮುಖರಾಗಿದ್ದಾರೆ ಎಂಬುದು ನಿಟ್ಟುಸಿರು ಬಿಡುವ ಸಂಗತಿಯಾದರೂ, ಸೋಂಕು-ಸಾವಿನ ಪ್ರಮಾಣದಲ್ಲಿ ಇಳಿಕೆ ಕಾಣದಿರುವುದು ಆತಂಕದ ಸಂಗತಿ.

ಸೋಂಕಿನಿಂದ ದೂರವಿರಲು ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಎಂಬ ಎಚ್ಚರಿಕೆಯನ್ನು ಲೆಕ್ಕಿಸದೆ ಆಟೋ ಮತ್ತಿತರ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಮಾರುಕಟ್ಟೆ, ಜನದಟ್ಟಣೆ ಪ್ರದೇಶದಲ್ಲೂ ಬಹಳಷ್ಟು ಜನ ಭಯ- ಆತಂಕ ಮರೆದು ಓಡಾಡುತ್ತಿರುವುದರಿಂದ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ