ಆ್ಯಪ್ನಗರ

ಸಹಕಾರ ಸಂಘದಲ್ಲಿ ಗೋಲ್‌ಮಾಲ್‌: ಕಾರ‍್ಯದರ್ಶಿ ಅಮಾನತಿಗೆ ನಿರ್ಧಾರ

ತಾಲೂಕಿನ ಗೌಡಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ರೈತರ ಹಣದ ದುರುಪಯೋಗದ ಹಿನ್ನೆಲೆಯಲ್ಲಿ ಸಂಘದ ಕಾರ‍್ಯದರ್ಶಿ ಮಂಜೇಗೌಡ ಅವರನ್ನು ಅಮಾನತಿನಲ್ಲಿಟ್ಟು ವಿಚಾರಣೆಗೆ ಒಳಪಡಿಸುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ.

Vijaya Karnataka 13 Jul 2019, 5:00 am
ಚನ್ನರಾಯಪಟ್ಟಣ: ತಾಲೂಕಿನ ಗೌಡಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ರೈತರ ಹಣದ ದುರುಪಯೋಗದ ಹಿನ್ನೆಲೆಯಲ್ಲಿ ಸಂಘದ ಕಾರ‍್ಯದರ್ಶಿ ಮಂಜೇಗೌಡ ಅವರನ್ನು ಅಮಾನತಿನಲ್ಲಿಟ್ಟು ವಿಚಾರಣೆಗೆ ಒಳಪಡಿಸುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ.
Vijaya Karnataka Web corruption in crop loan action against secretary
ಸಹಕಾರ ಸಂಘದಲ್ಲಿ ಗೋಲ್‌ಮಾಲ್‌: ಕಾರ‍್ಯದರ್ಶಿ ಅಮಾನತಿಗೆ ನಿರ್ಧಾರ


ಸಂಘದ ಕಚೇರಿಯಲ್ಲಿ ಅಧ್ಯಕ್ಷ ಜಿ.ಎಂ.ರಮೇಶ್‌ ಅಧ್ಯಕ್ಷ ತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಎಲ್ಲ ನಿರ್ದೇಶಕರು ಹಾಜರಿದ್ದು, ರೈತರ ಹೆಸರಿನಲ್ಲಿ ಸಾಲ ಮಂಜೂರು ಮಾಡುವ ವೇಳೆ ಹಾಗೂ ಸಾಲ ಮನ್ನಾ ಸಮಯದಲ್ಲೂ ಹಣ ದುರುಪಯೋಗ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾರ‍್ಯದರ್ಶಿ ವಿರುದ್ಧ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಹಕಾರ ಸಂಘಗಳ ಮೇಲ್ವಿಚಾರಕ ಅಭಿಲಾಷ್‌ ತಿಳಿಸಿದ್ದಾರೆ.

ವಂಚನೆಗೊಳಗಾಗಿರುವವರಿಗೆ ಹಣ ಮರುಪಾವತಿ ಮಾಡುವುದಾಗಿ ಮಾತುಕೊಟ್ಟಿದ್ದ ಕಾರ‍್ಯದರ್ಶಿ ಇಂದಿನಿಂದಲೇ ಈ ನಿಟ್ಟಿನಲ್ಲಿ ಕಾರ‍್ಯಪ್ರವೃತ್ತರಾಗಿದ್ದು, ಅವರನ್ನು ವಿಚಾರಣೆಗೊಳಪಡಿಸುವಂತೆಯೂ ನಿರ್ದೇಶಕ ಮಂಡಳಿ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದೆ.

ಗೌಡಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರವಾಗಿದೆ ಎಂದು ಗುರುವಾರ ಹಳೇಬೆಳಗೊಳ ಹಾಗೂ ಗೌಡಗೆರೆ ಗ್ರಾಮದ ಫಲಾನುಭವಿಗಳು ಸಂಘದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕಿನಾದ್ಯಂತ ಇಂತಹ ಪ್ರಕರಣಗಳು ನಡೆದಿರುವ ಸಾಧ್ಯತೆಗಳಿದ್ದು, ಉನ್ನತಮಟ್ಟದ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ