ಆ್ಯಪ್ನಗರ

ಹೊಸ ಬಡಾವಣೆಗೆ ಹೆಚ್ಚಿದ ಬೇಡಿಕೆ: ಸರಕಾರಕ್ಕೆ ಪ್ರಸ್ತಾವ

ಸುಸಜ್ಜಿತ ಕೃಷ್ಣಾನಗರ ಬಡಾವಣೆ ಅಭಿವೃದ್ಧಿ ಆದ ನಂತರ ಜನರು ಇಂತಹ ಹೊಸ ಹೊಸ ಯೋಜನೆಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಅದರ ಅನುಗುಣವಾಗಿ ಗ್ರಾಮಗಳ ರೈತರ ಸ್ವಯಂ ಪ್ರೇರಿತ ಒಪ್ಪಿಗೆ ಮೇರೆಗೆ ಮತ್ತೊಂದು ಹೊಸ ಬಡಾವಣೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ್ಷರಾದ ಕೆ.ಎಂ ರಾಜೇಗೌಡ ತಿಳಿಸಿದ್ದಾರೆ.

Vijaya Karnataka 10 Jul 2019, 5:00 am
ಹಾಸನ: ಸುಸಜ್ಜಿತ ಕೃಷ್ಣಾನಗರ ಬಡಾವಣೆ ಅಭಿವೃದ್ಧಿ ಆದ ನಂತರ ಜನರು ಇಂತಹ ಹೊಸ ಹೊಸ ಯೋಜನೆಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಅದರ ಅನುಗುಣವಾಗಿ ಗ್ರಾಮಗಳ ರೈತರ ಸ್ವಯಂ ಪ್ರೇರಿತ ಒಪ್ಪಿಗೆ ಮೇರೆಗೆ ಮತ್ತೊಂದು ಹೊಸ ಬಡಾವಣೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ್ಷರಾದ ಕೆ.ಎಂ ರಾಜೇಗೌಡ ತಿಳಿಸಿದ್ದಾರೆ.
Vijaya Karnataka Web HSN-HSN9M6


ನಗರಾಭಿವರದ್ದಿ ಪ್ರಾಧಿಕಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಹೊರವಲಯದ ಭುವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ, ಕೆಂಚಟ್ಟಳ್ಳಿ ಸೇರಿದಂತೆ ಸುಮಾರು 1200 ಎಕರೆ ಜಮೀನನ್ನು ಅಭಿವೃದ್ಧಿ ಪಡಿಸಿ ಹೊಸ ಬಡಾವಣೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರಕಾರದ ಅನುಮತಿ ದೊರೆತ ಕೂಡಲೇ ಶೀರ್ಘದಲ್ಲಿ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಭುವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ, ಕೆಂಚಟ್ಟಳ್ಳಿ ಗ್ರಾಮಗಳ ರೈತರನ್ನು ನೇರವಾಗಿ ಸಂಪರ್ಕಿಸಿ ಅವರ ಒಪ್ಪಿಗೆ ಪಡೆದಿದ್ದು , ಕೆಲವರು ಒಪ್ಪಲು ಹಿಂಜರಿಯುತ್ತಿದ್ದು ಮುಂಬರುವ ದಿನಗಳಲ್ಲಿ ಅವರ ಮನವೊಲಿಸಿ ಎಲ್ಲರ ಸಹಭಾಗಿತ್ವದೊಂದಿಗೆ ಶೇ 50:50 ಅನುಪಾತದಲ್ಲಿ ನಿವೇಶನಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.

1200 ಎಕರೆ ಜಮೀನಿನಲ್ಲಿ ಸುಮಾರು 15 ಸಾವಿರ ವಸತಿಗೆ ಉಪಯೋಗವಾದ ನಿವೇಶನಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಇನ್ನುಳಿದಂತೆ ಪಾರ್ಕ್‌, ಸೂಪರ್‌ ಬಜಾರಾ (ಹೈಟೆಕ್‌ ಮಾರ್ಕೆಟ್‌), ಮಕ್ಕಳಿಗೆ ಆಟವಾಡಲು ಸೈನ್ಸ್‌ ಎಕ್ಷ್ಯೂಮಿಷನ್‌ ಒಳಗೊಂಡಂತೆ ಸರಕಾರಿ ನಿಯಮಗಳ ಅನ್ವಯ ಸಾರ್ವಜನಿಕ ಬಳಕೆಗೆ ಸ್ಥಳಗಳಿಗಾಗಿ ಮೀಸಲಿಡಲಾಗುವುದು ಎಂದು ಹೇಳಿದರು.

ಮೂಲಭೂತ ಸೌಕರ್ಯಗಳು ಸೇರಿದಂತೆ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಬಡಾವಣೆ ನಿರ್ಮಾಣಕ್ಕೆ ಗುರಿ ಹೊಂದಲಾಗಿದ್ದು, ಮನೆ ನಿರ್ಮಾಣ ಮಾಡುವವರಿಗೆ ಜಲಸಂರಕ್ಷ ಣೆ ಸೇರಿದಂತೆ ಪರಿಸರಕ್ಕೆ ಪೂರಕ ನಿಯಮಗಳನ್ನು ಅನುಸರಿಸುವ ಷರತ್ತು ನಿಬಂಧನೆಗಳನ್ನು ಹಾಕಲಾಗುವುದು ಎಂದರು.

2 ವರ್ಷದೊಳಗೆ ರೈತರಿಗೆ ನಿವೇಶನ

ಸರಕಾರ ಸಂಪೂರ್ಣವಾಗಿ ನಿವೇಶನ ಮಾಡಲು ಒಪ್ಪಿಗೆ ನೀಡಿದ ದಿನದಿಂದ 2 ವರ್ಷದೊಳಗೆ ಅಂದರೆ 2021 ರ ವೇಳೆಗೆ ಜಮೀನು ನೀಡಿರುವ ರೈತರಿಗೆ ನಿವೇಶನ ತಲುಪಿಸುವ ನಿರೀಕ್ಷೆ ಹೊಂದಿರುವುದಲ್ಲದೇ ರೈತರು ತಮ್ಮ ಸರ್ವೆ ನಂ ಇರುವ ಜಾಗದಲ್ಲಿಯೇ ಶೇ. 90 ಭಾಗ ನಿವೇಶನ ಪಡೆಯ ಬಹುದಾಗಿದೆ, ಕೆಲವು ಸಂದರ್ಭದಲ್ಲಿ ಅವರಿಗೆ ಸೇರಿದ ಜಾಗದಲ್ಲಿ ಉದ್ಯಾನವನ , ರಸ್ತೆ ಬಂದ ಪಕ್ಷದಲ್ಲಿ ಅದರ ಪಕ್ಕದಲ್ಲೇ ನಿವೇಶನ ನೀಡುಲಿ ತಿರ್ಮಾನಿಸಲಾಗಿದೆ.

ಶೇ 50 ರಷ್ಟು ಅನುಪಾತದಲ್ಲಿ ಬಡವರಿಗೆ ನಿವೇಶನ

ಕೃಷ್ಣಾನಗರ ಬಡಾವಣೆಯಲ್ಲಿ ರೈತರಿಗೆ ಕೊಡಬೇಕಿದ್ದ ನಿವೇಶನಗಳನ್ನು ಕೊಡಲಾಗಿದೆ ಇನ್ನುಳಿದ ನಿವೇಶನಗಳನ್ನು ರಾಜೀವ್‌ ಗಾಂಧಿ ಹೌಸಿಂಗ್‌ ಕಾಪೋರ್‍ರೇಶನ್‌ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 50 ರಷ್ಟು ರಿಯಾಯಿತಿಯಲ್ಲಿ ನಿವೇಶನ ಗಳನ್ನು ನೀಡಲಾಗುವುದು ಎಂದರು.

ಹುತಾತ್ಮ ಯೋಧರ ಕುಟುಂಬಕ್ಕೆ ನಿವೇಶನ

ಮುಂದಿನ ಆ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚಾರಣೆಯಂದು ದೇಶಕ್ಕಾಗಿ ತಮ್ಮ ಜೀವ ತೆತ್ತ ಜಿಲ್ಲೆಯ ಐದು ಮಾಜಿ ಸೈನಿಕರ ಕುಟುಂಬಗಳಿಗೆ ಒಂದೊಂದು ನಿವೇಶನ ಗಳನ್ನು ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಹೊಸ ಬಡಾವಣೆ ನಿರ್ಮಾಣದ ವಿಸ್ತೀರ್ಣ
ಒಟ್ಟು 1218 ಎಕರೆ ಜಾಗವನ್ನು 2872 ಜನರು ಹೊಸ ಬಡಾವಣೆಗಾಗಿ ನೀಡುತ್ತಿದ್ದಾರೆ.

ಇನ್ನೂ ಈಗಾಗಲೇ ಇರುವ ಓವರ್‌ ಟ್ಯಾಂಕ್‌ಗಳಿಗೆ ಬಡಾವಣೆಯಲ್ಲಿರುವ ಕೊಳವೆ ಬಾವಿಗಳ ಮೂಲಕ ನೀರು ತುಂಬಿಸಲಾಗಿದೆ ಎಂದರಲ್ಲದೇ ಕೃಷ್ಣ ನಗರ ಬಡಾವಣೆಗಳಲ್ಲಿ 500 ಕ್ಕೂ ಹೆಚ್ಚು ಜನರು ಮನೆ ನಿರ್ಮಿಸಿಕೊಳ್ಳಲು ಕಚೇರಿಗೆ ನುಮತಿ ಕೇಳುತ್ತಿದ್ದಾರೆ. ಆದರೆ ಬಡಾವಣೆಯಲ್ಲಿ ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ಇಲ್ಲದಿರುವ ಕಾರಣ ಮನೆ ನಿರ್ಮಿಸಲು ಬೀಡುತ್ತಿಲ್ಲ, ಅಮೃತ್‌ ಯೋಜನೆಯಡಿ ಬಡಾವಣೆಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ, ಆಯೋಜನೆ ಪೂರ್ಣಗೊಂಡ ಬಳಿಕ ಮನೆ ನಿರ್ಮಿಸಲು ಹಕ್ಕುಪತ್ರ ನೀಡಲಾಗುವುದು ಎಂದರು.

ನಗರದಲ್ಲಿ 90 ಪಾರ್ಕ್‌ಗಳಿದ್ದು, ಈಗಾಗಲೇ 50 ಪಾರ್ಕ್‌ಗಳನ್ನು ಪರಿಶೀಲಿಸಿದ್ದೇವೆ ಮುಂದಿನ ದಿನಗಳಲ್ಲಿ ಉಳಿದವುಗಳನ್ನು ಪರಿಶೀಲಿಸಿ ಆ ಜಾಗದಲ್ಲಿ ಮಕ್ಕಳಿಗೆ ಆಟದ ಮೈದಾನ, ವಾಕಿಂಗ್‌ ಪಾತ್‌ ನಿರ್ಮಿಸಲಾಗುವುದು ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಕೆ.ಎಂ ರಮೇಶ್‌ ರವರು ಮಾತನಾಡಿ ಜಿಲ್ಲೆಯಲ್ಲಿ ಪಾರ್ಕ್‌ಗಳ ಅಭಿವೃದ್ದಿಗೆ ಕ್ರಮವಹಿಸಲಾಗುತ್ತಿದ್ದು ನಗರದ ಪಾರ್ಕ್‌ಗಳ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳ ಅಭಿವೃದ್ದಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ