ಆ್ಯಪ್ನಗರ

ನಿವೇಶನ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಆಗ್ರಹ

ವಿಕ ಸುದ್ದಿಲೋಕ ಹಾಸನ ಹಾಸನ ತಾಲೂಕು ಕಸಬ ಹೋಬಳಿ ಸತ್ಯಮಂಗಲ ಗ್ರಾಮದಲ್ಲಿಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ ನಿವೇಶನಗಳನ್ನು ಸಾಮಾಜಿಕ ನ್ಯಾಯವಾಗಿ ಹಂಚಲು ಒತ್ತಾಯಿಸಿ ಡಾ...

Vijaya Karnataka 4 Dec 2019, 5:00 am
ಹಾಸನ: ಹಾಸನ ತಾಲೂಕು ಕಸಬ ಹೋಬಳಿ ಸತ್ಯಮಂಗಲ ಗ್ರಾಮದಲ್ಲಿಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ ನಿವೇಶನಗಳನ್ನು ಸಾಮಾಜಿಕ ನ್ಯಾಯವಾಗಿ ಹಂಚಲು ಒತ್ತಾಯಿಸಿ ಡಾ.ಬಾಬುಜಗಜೀವನ್‌ರಾಮ್‌ ಮಾದಿಗ ಮಹಾಸಭಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಸಾಂಕೇತಿಕವಾಗಿ ಧರಣಿ ನಡೆಸಿದರು.
Vijaya Karnataka Web demands for social justice in place sharing
ನಿವೇಶನ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಆಗ್ರಹ


ಪರಿಶಿಷ್ಟ ಜಾತಿಯಲ್ಲಿಅತ್ಯಂತ ಹಿಂದುಳಿದ ಮಾದಿಗ ಜನಾಂಗಕ್ಕೆ ಸರಕಾರಿ ಸವಲತ್ತುಗಳ ಹಂಚಿಕೆಯಲ್ಲಿನಿರಂತರವಾಗಿ ಅನ್ಯಾಯವಾಗುತ್ತಿದ್ದು, ಈ ಅನ್ಯಾಯದ ವಿರುದ್ಧ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ, ಸಾಮಾಜಿಕ ನ್ಯಾಯ ದೊರಕುತ್ತಿಲ್ಲಎಂದು ದೂರಿದರು.

ಸತ್ಯಮಂಗಲ ಗ್ರಾಮದ ಹಳೇ ಸರ್ವೆ ನಂ.244, ಹೊಸ ಸರ್ವೆ ನಂ.254ರಲ್ಲಿ2000-2001ರಲ್ಲಿಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ನಿವೇಶನ ಮಂಜೂರಾಗಿರುತ್ತದೆ. ನಿವೇಶನಗಳನ್ನು ಹಂಚುವಾಗ ಪರಿಶಿಷ್ಟ ಜಾತಿಯಲ್ಲಿಅತ್ಯಂತ ಹಿಂದುಳಿದ ಮಾದಿಗ ಜನಾಂಗಕ್ಕೆ ಶೇ.50ರಷ್ಟು ಮೀಸಲಿನಲ್ಲಿನಿವೇಶನ ನೀಡಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ಪಂಗಡದಲ್ಲಿವಾಲ್ಮೀಕಿ, ಬೋವಿ, ಲಂಬಾಣಿ, ಹಕ್ಕಿಪಿಕ್ಕಿ, ಶಿಳ್ಳೆಕ್ಯಾತ, ಕೊರಮ, ಕೊರಚ ಜನಾಗದವರಿಗೆ ಪ್ರಥಮ ಆದ್ಯತೆ ನೀಡಬೇಕು ಮತ್ತು ನಿವೇಶನ ಹಂಚುವಾಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಮತ್ತು ಜಿಲ್ಲಾಸಮಾಜ ಕಲ್ಯಾಣಾಧಿಕಾರಿಗಳು ಒಳಗೊಂಡಂತೆ ನಿವೇಶನ ಆಯ್ಕೆ ಸಮಿತಿ ರಚಿಸಬೇಕೆಂದು ಆಗ್ರಹಿಸಿದರು.

2000-2001ರಲ್ಲಿಸತ್ಯಮಂಗಲ ಗ್ರಾಮದ ಹಳೇ ಸರ್ವೆ ನಂ.244, ಹೊಸ ಸರ್ವೆ ನಂ.254ರಲ್ಲಿಕಳೆದ 19 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಸತ್ಯಮಂಗಲ ಗ್ರಾಮದಲ್ಲಿ4-20 ಎಕರೆ ಮಂಜೂರಾಗಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ವಹಿಸಿ ನಿವೇಶನ ಹಂಚಿಕೆ ಮಾಡಬೇಕೆಂದರು.

ವೇದಿಕೆಯ ಜಿಲ್ಲಾಧ್ಯಕ್ಷ ಎಚ್‌.ಪಿ.ಶಂಕರ್‌ ರಾಜು, ಜಿಲ್ಲಾಪ್ರಧಾನ ಕಾರ್ಯದರ್ಶಿ ಟಿ.ಕುಮಾರಸ್ವಾಮಿ ದೊಡ್ಡಪುರ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ