ಆ್ಯಪ್ನಗರ

ಮಹಾಘಟಬಂಧನ್‌ ಎಂದು ನಮ್ಮನ್ನು ಅಣಕಿಸಬೇಡಿ: ಮೋದಿಗೆ ದೇವೇಗೌಡ ಟಾಂಗ್‌

ಪ್ರಾದೇಶಿಕ ಪಕ್ಷಗಳು ಸೇರಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದನ್ನು ಸಹಿಸದೆ ಅದನ್ನೇ ಮಹಾಘಟಬಂಧನ್‌ ಎಂದು ಅಣಕಿಸುವಿರಲ್ಲ. ನೀವು ಮಾಡುತ್ತಿರುವುದು ಏನು? ಸಣ್ಣ, ಪುಟ್ಟ ಪಕ್ಷಗಳ ಮುಖಂಡರ ಮನೆಬಾಗಿಲಿಗೆ ಹೋಗುತ್ತಿಲ್ಲವೇ? ನಮಗೇನು ಟೀಕೆ ಮಾಡೋಕೆ ಬರೋದಿಲ್ಲವೇ? ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ ಮೋದಿ ಅವರಿಗೆ ಟಾಂಗ್‌ ನೀಡಿದರು.

Vijaya Karnataka 28 Feb 2019, 8:14 am
ಹಾಸನ/ಅರಸೀಕೆರೆ: ಪ್ರಾದೇಶಿಕ ಪಕ್ಷಗಳು ಸೇರಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದನ್ನು ಸಹಿಸದೆ ಅದನ್ನೇ ಮಹಾಘಟಬಂಧನ್‌ ಎಂದು ಅಣಕಿಸುವಿರಲ್ಲ. ನೀವು ಮಾಡುತ್ತಿರುವುದು ಏನು? ಸಣ್ಣ, ಪುಟ್ಟ ಪಕ್ಷಗಳ ಮುಖಂಡರ ಮನೆಬಾಗಿಲಿಗೆ ಹೋಗುತ್ತಿಲ್ಲವೇ? ನಮಗೇನು ಟೀಕೆ ಮಾಡೋಕೆ ಬರೋದಿಲ್ಲವೇ? ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ ಮೋದಿ ಅವರಿಗೆ ಟಾಂಗ್‌ ನೀಡಿದರು.
Vijaya Karnataka Web do not mock us gowdas tong to modi
ಮಹಾಘಟಬಂಧನ್‌ ಎಂದು ನಮ್ಮನ್ನು ಅಣಕಿಸಬೇಡಿ: ಮೋದಿಗೆ ದೇವೇಗೌಡ ಟಾಂಗ್‌


ಅರಸೀಕೆರೆಯ ಜೇನುಕಲ್ಲು ಕ್ರೀಡಾಂಗಣದಲ್ಲಿ ಬುಧವಾರ ನಾನಾ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ''ನಾನು ಕಳೆದ 50 ವರ್ಷಗಳಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇನೆ. ನನಗೆ ಯೋಚನೆಯಾಗಿತ್ತು, ರೈತರ ಇಷ್ಟೊಂದು ಸಾಲವನ್ನು ಸಿಎಂ ಕುಮಾರಸ್ವಾಮಿ ಹೇಗೆ ಮನ್ನಾ ಮಾಡ್ತಾರೆ ಅಂತ. ನೀವು ಬೆಳೆಸಿದ ಮಗ ನಿಮ್ಮ ಋುಣ ತೀರಿಸಿದ್ದಾರೆ. ಆದರೆ, ರೈತರ ಪರವಾಗಿ ನಾಲ್ಕು ವರ್ಷ ಮಾತನಾಡದ ಪ್ರಧಾನಿ, ಈಗ ಪ್ರತಿ ಕುಟುಂಬಕ್ಕೆ 6000 ನೀಡುತ್ತೇನೆ ಎಂದು ಹೇಳುತ್ತಿರುವುದು ಯಾವ ಉದ್ದೇಶ ? ಚುನಾವಣೆ ಸಂದರ್ಭದಲ್ಲಿ ಇಂತಹ ಘೋಷಣೆ ಅವಶ್ಯಕತೆ ಇತ್ತು,''ಎಂದು ಕುಟುಕಿದರು.

''ರಾಜ್ಯದಲ್ಲಿ ತೆಂಗಿನ ಬೆಳೆ ರೈತರು ಸಂಕಷ್ಟದಲ್ಲಿ ಇದ್ದಾರೆ. ಕುಮಾರಸ್ವಾಮಿ 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ರೈತರ ಸಮಸ್ಯೆಗಳನ್ನು ನಾನು ಹೊತ್ತು ಪ್ರಧಾನಿ ಬಳಿ ಹೋದರೆ ಅವರು ರೈತರು ಮತ್ತವರ ಸಮಸ್ಯೆ ಬಗ್ಗೆ ಒಂದು ಚಕಾರವೆತ್ತಲಿಲ್ಲ,'' ಎಂದು ಆರೋಪಿಸಿದರು.

''ಮೋದಿ ಅವರು ನನ್ನನ್ನು ಮಣ್ಣಿನ ಮಗ ಅಂತ ವ್ಯಾಖ್ಯಾನಿಸಿದರು. ಆದರೆ ಮಣ್ಣಿನ ಮಕ್ಕಳ ಬಗ್ಗೆ ಮೋದಿಗೆ ಎಳ್ಳಷ್ಟು ಕೂಡ ಕಾಳಜಿ ಇಲ್ಲ ಎಂಬುದನ್ನು ರೈತರ ಸಮಸ್ಯೆಗಳಿಗೆ ಸ್ಪಂದಿಸದ ತಮ್ಮ ನಿಲುವಿನ ಮೂಲಕ ಸಾಬೀತು ಮಾಡಿದ್ದಾರೆ,''ಎಂದು ಟೀಕಿಸಿದರು.

ಉಗ್ರರ ನಾಶಕ್ಕೆ ಬೆಂಬಲ: ''ದೇಶದ ಮೇಲೆ ಉಗ್ರರ ದಾಳಿ ನಡೆದಾಗ ನಾವೆಲ್ಲರೂ ಒಂದು ಎಂಬಂತೆ ಹೋರಾಟ ಮಾಡಬೇಕು. ಉಗ್ರರನ್ನು ಮುಗಿಸುವುದೇ ಆದರೆ ಖಂಡಿತ ಮುಗಿಸಿ, ಅದಕ್ಕೆ ನಮ್ಮ ಬೆಂಬಲವಿದೆ. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜೈ ಜವಾನ್‌ ಜೈ ಕಿಸಾನ್‌ ಎಂಬ ಮಾತಿನಂತೆ ನಾವೆಲ್ಲರೂ ದೇಶಕ್ಕಾಗಿ ಒಗ್ಗಟ್ಟಾಗಬೇಕು,''ಎಂದು ಇಂದಿನ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ