ಆ್ಯಪ್ನಗರ

ಹೈನುಗಾರಿಕೆಯಿಂದ ಆರ್ಥಿಕ ಚೇತರಿಕೆ

ಸೀ ಶಕ್ತಿ ಸಂಘಗಳಿಗೆ ಬಂಡವಾಳ ನೀಡಿ ಗುಡಿ ಕೈಗಾರಿಕೆ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಿದರೆ ಕುಟುಂಬಗಳ ಜತೆಗೆ ದೇಶದ ಆರ್ಥಿಕತೆಯು ಚೇತರಿಕೆ ಕಾಣಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.

Vijaya Karnataka 4 Sep 2019, 9:27 pm
ಅರಸೀಕೆರೆ: ಸೀ ಶಕ್ತಿ ಸಂಘಗಳಿಗೆ ಬಂಡವಾಳ ನೀಡಿ ಗುಡಿ ಕೈಗಾರಿಕೆ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಿದರೆ ಕುಟುಂಬಗಳ ಜತೆಗೆ ದೇಶದ ಆರ್ಥಿಕತೆಯು ಚೇತರಿಕೆ ಕಾಣಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
Vijaya Karnataka Web HSN04ASK-P2_16


ತಾಪಂ ಸಭಾಂಗಣದಲ್ಲಿ ಜಿಪಂ, ತಾಪಂ ಹಾಗೂ ತಾಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಎನ್‌ಆರ್‌ಎಲ್‌ಎಂ (ಸಂಜೀವಿನಿ) ಯೋಜನೆ ಅಡಿ ಸ್ವ-ಸಹಾಯ ಸಂಘಗಳಿಗೆ ದುಡಿಮೆ ಕಿರು ಬಂಡವಾಳ ನೀಡಿ ಚೆಕ್‌ಅನ್ನು ವಿತರಿಸಿ ಅವರು ಮಾತನಾಡಿದರು.

ಮಹಿಳೆಯರನ್ನು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತಗೊಳಿಸದೇ, ವ್ಯವಹಾರಿಕ ಜ್ಞಾನ ಪರಿಚಯಿಸಿಕೊಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸ್ಥಾಪಿತಗೊಂಡ ಸರಕಾರದ ಮೂಲ ಆಶಯದಂತೆ ಸೀ ಶಕ್ತಿ ಸಂಘಗಳಿಗೆ ಸಮರ್ಪಕ ಪ್ರಮಾಣದಲ್ಲಿ ಮೂಲ ಬಂಡವಾಳವನ್ನ ನೀಡಿ ಗುಡಿ ಕೈಗಾರಿಕೆ, ಹೈನುಗಾರಿಕೆ ಅಥವಾ ಹಿನ್ನಿತರೆ ವ್ಯಾಪಾರಗಳಿಗೆ ಉತ್ತೇಜನ ನೀಡಿ, ಮಾರುಕಟ್ಟೆ ಕೊಡದಿದ್ದರಿಂದ ಸೀ ಶಕ್ತಿ ಸಂಘಗಳ ಮಹಿಳೆಯರು ಸಾಲ ಮಾಡಿ, ಆದಾಯ ಕಾಣದೇ ಒದ್ದಾಡುತ್ತಿರುವುದು ವಿಷಾಧನೀಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಸೇರಿದಂತೆ ಕೆಲವು ಖಾಸಗಿಯವರು ಪ್ರತ್ಯೇಕ ಹೆಸರುಗಳಲ್ಲಿ ಸೀ ಶಕ್ತಿ ಸಂಘ ಸ್ಥಾಪಿಸಿ ನೂರಾರು ಕೋಟಿ ಸಾಲ ನೀಡುತ್ತಿದ್ದಾರೆ. ಆದರೆ ಈ ಸಾಲ ಬಂಡವಾಳವಾಗಿ ಮಾರ್ಪಡುತ್ತಿಲ್ಲಾ ಈ ನಿಟ್ಟಿನಲ್ಲಿ ಸರಕಾರ ಹಾಗೂ ಸ್ವ-ಸಹಾಯ ಸಂಘ ನಡೆಸುತ್ತಿರುವ ಸಂಸ್ಥೆಗಳು ಗಂಭೀರ ಚಿಂತನೆ ನಡೆಸಬೇಕು. ವ್ಯಾಪಾರ ವಹಿವಾಟಿಗೆ ಮಾರುಕಟ್ಟೆ ಒದಗಿಸಿಕೊಡುವ ಜತೆಗೆ ಲಾಭಾಂಶವನ್ನ ತೊರಿಸಿಕೊಡುವ ಮನಸ್ಥಿತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ತಾಪಂ ಕಾರ್ಯನಿರ್ವಹಣಾಕಾರಿ ನಟರಾಜ್ ಮಾತನಾಡಿ, ಸಂಜೀವಿನಿ ಯೋಜನೆಯಡಿ ತಾಲೂಕಿನ ಐದು ಗ್ರಾಪಂ ವ್ಯಾಪ್ತಿಯ ಸ್ವ-ಸಹಾಯ ಸಂಘಗಳಿಗೆ 37 ಲಕ್ಷ ರೂ. ದುಡಿಮೆ ಕಿರು ಬಂಡವಾಳ ನೀಡುತ್ತಿದ್ದು, ಇದನ್ನು ಸೀ ಶಕ್ತಿ ಸಂಘದ ಮಹಿಳೆಯರು ಸದ್ಬಳಕೆ ಮಾಡಿಕೊಂಡು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನ ಉತ್ತಮಗೊಳಿಸಿ ಕೊಳ್ಳುವಂತೆ ಕಿವಿಮಾತು ಹೇಳಿದರು. ದುಡಿಮೆಗೆ ಕಿರು ಬಂಡವಾಳ ಯೋಜನೆ ಇನ್ನೂ ವಿಸ್ತರಣೆ ಯಾಗಲಿದ್ದು ತಾಲೂಕಿನ ಎಲ್ಲಾ ಸ್ವ-ಸಹಾಯ ಸಂಘಗಳಿಗೆ ದೊರಕಲಿದೆ ಎಂದು ಹೇಳಿದರು.

ಎನ್‌ಆರ್‌ಎಲ್‌ಎಂ (ಸಂಜೀವಿನಿ) ಜಿಲ್ಲಾ ಅಭಿವೃದ್ದಿ ಅಧಿಕಾರಿ ವೀಣಾ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷೆ ಪ್ರೇಮ ಧರ್ಮೇಶ್, ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕರಾದ ಕುಸುಮ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ