ಆ್ಯಪ್ನಗರ

ಹಾಸನ: ಕೆಪಿಸಿಸಿ ಕಾರ್ಯಾಧ್ಯಕ್ಷರ ಮುಂದೆಯೇ ಕಾಂಗ್ರೆಸ್‌ ಕಾರ್ಯಕರ್ತರ ಕಿತ್ತಾಟ

ಸ್ವಾಗತದ ವೇಳೆ ಅಲ್ಪಸಂಖ್ಯಾತ ನಾಯಕರ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ ಹಾಸನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಮುಂದೆಯೇ ಕಾರ್ಯಕರ್ತರ ಗಲಾಟೆ ನಡೆದಿರುವುದು ನಾಯಕರಿಗೆ ಇರಿಸು ಮುರುಸಾಗಿದೆ.

Vijaya Karnataka Web 1 Jun 2020, 4:36 pm
ಹಾಸನ: ನಾಯಕರಿಗೆ ಸ್ವಾಗತ ಕೋರುವ ವಿಚಾರದಲ್ಲಿ ಬಂದ ಭಿನ್ನಾಭಿಪ್ರಾಯದಿಂದ ಹಾಸನ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಮ್ಮುಖದಲ್ಲಿಯೇ ಕಾರ್ಯಕರ್ತರರು ಕಿತ್ತಾಡಿಕೊಂಡಿದ್ದು, ಜಿಲ್ಲಾ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಘಟನೆ ನಡೆದಿದೆ.
Vijaya Karnataka Web HASANA
ಕೈ-ಕೈ ಮಿಲಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು


ಜಿಲ್ಲಾ ಕಾಂಗ್ರೆಸ್‌ ಸಭೆಯ ಸ್ವಾಗತದ ವೇಳೆ ಅಲ್ಪಸಂಖ್ಯಾತ ಮುಖಂಡರ ಹೆಸರು ಹೇಳದಿದ್ದಕ್ಕೆ ಆಕ್ರೋಶಗೊಂಡ ಗುಂಪು, ಓಟು ಹಾಕೋಕೆ ನಾವು ಬೇಕು ನಮ್ಮ ನಾಯಕರ ಹೆಸರು ಹೇಳೋಕೆ ನಿಮಗೆ ಮುಜುಗರ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪು ಏರುಧ್ವನಿಯಲ್ಲಿ ಮಾತನಾಡಿರುವುದು ಗಲಾಟೆಗೆ ಕಾರಣವಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಬಣಗಳ ನಡುವೆ ಪರಸ್ಪರ ತಲ್ಲಾಟವು ನಡೆದಿದ್ದು, ಕಾರ್ಯಕರ್ತರ ಗಲಾಟೆ ನಡುವೆ ಹಿರಿಯ ನಾಯಕರು ಅಸಹಾಯಕರಾಗಿ ಕೂತಿದ್ದರು. ಕೊನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಮಾತನಾಡಿ, ನಮಗೆ ಯಾವುದೇ ಜಾತಿ ಇಲ್ಲ, ನೀವೆಲ್ಲಾ ಹೀಗೆ ಕಿತ್ತಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣದಲ್ಲಿ ರಸ್ತೆಗಳು ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ಮಾತ್ರ ಕೂಲ್!‌

ಸಭೆಯಲ್ಲಿ ಗಲಾಟೆ ಮಾಡಿದವರ ಪಟ್ಟಿ ಕೊಡಿ ನಾಳೆಯೇ ಅವರನ್ನು ಅಮಾನತು ಮಾಡುತ್ತೇನೆ ಎಂದು ಸಲೀಂ ಅಹ್ಮದ್‌ ಎಚ್ಚರಿಕೆ ನೀಡಿದರು. ಗಲಾಟೆ ಒಂದು ಕಡೆಯಾದರೆ, ಮತ್ತೊಂದೆಡೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂರಾರು ಜನ ಸಭೆಯಲ್ಲಿ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪದಗ್ರಹಣ ಹಿನ್ನೆಲೆ ಸಭೆ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ