ಆ್ಯಪ್ನಗರ

ಸ್ತ್ರೀಯರು ಟೀಕೆಗಳಿಗೆ ಎದೆಗುಂದಬಾರದು

ಸ್ತ್ರೀ ಸ್ವಾತಂತ್ರ್ಯಕ್ಕೆ ಭಾರತದಲ್ಲಿ ಸುದೀರ್ಘ ಇತಿಹಾಸವಿದ್ದು, ಋಷಿ ಪತ್ನಿಯರಾಗಿದ್ದ ಗಾರ್ಗಿ ಮತ್ತು ಮೈತ್ರೇಯಿ, ವಚನಕಾರ್ತಿಯ ರಾದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ ಸ್ತ್ರೀ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದ್ದಾರೆ ಎಂದು ಲೇಖಕಿ ಎಚ್.ಎಲ್.ರಾಜೇಶ್ವರಿ ತಿಳಿಸಿದರು.

ವಿಕ ಸುದ್ದಿಲೋಕ 30 Mar 2016, 3:43 am
ಹಾಸನ: ಸ್ತ್ರೀ ಸ್ವಾತಂತ್ರ್ಯಕ್ಕೆ ಭಾರತದಲ್ಲಿ ಸುದೀರ್ಘ ಇತಿಹಾಸವಿದ್ದು, ಋಷಿ ಪತ್ನಿಯರಾಗಿದ್ದ ಗಾರ್ಗಿ ಮತ್ತು ಮೈತ್ರೇಯಿ, ವಚನಕಾರ್ತಿಯ ರಾದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ ಸ್ತ್ರೀ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದ್ದಾರೆ ಎಂದು ಲೇಖಕಿ ಎಚ್.ಎಲ್.ರಾಜೇಶ್ವರಿ ತಿಳಿಸಿದರು.
Vijaya Karnataka Web first grade college womens day and the traditional dress of the day biiji
ಸ್ತ್ರೀಯರು ಟೀಕೆಗಳಿಗೆ ಎದೆಗುಂದಬಾರದು


ನಗರದ ಬಿಈಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಮಹಿಳಾ ದಿನಾಚರಣೆ ಮತ್ತು ಸಾಂಪ್ರದಾಯಿಕ ಉಡುಗೆ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಹೆಣ್ಣು ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯಲು ಹಿಂಜರಿಯ ಬಾರದು ಮತ್ತು ಇದರಿಂದ ಸಮಾಜದಲ್ಲಿ ವ್ಯಕ್ತವಾಗುವ ಟೀಕೆಗಳಿಗೆ ಎದೆಗುಂದಬಾರದು ಎಂದು ಹೇಳಿದರು.

ಹೆಣ್ಣನ್ನು ಆದಿಶಕ್ತಿ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ, ಅಂತಹ ಹೆಣ್ಣಿನ ಮೇಲೆ ಸಂಸ್ಕೃತಿಯ ಹೆಸರಿನಲ್ಲಿ ದೌರ್ಜನ್ಯ ನಡೆಯುತ್ತಿರುವುದು ದುರಂತದ ಸಂಗತಿ. ಪತ್ನಿ ಮರಣ ಹೊಂದಿದ ತಿಂಗಳಿಗೇ ಮತ್ತೊಂದು ಮದುವೆಯಾಗುವ ಪತಿಯನ್ನು ಪ್ರಶ್ನಿಸದ ಸಮಾಜ, ವಿಧವಾ ವಿವಾಹವನ್ನು ಇಂದಿಗೂ ಸಹಜವಾಗಿ ಸ್ವೀಕರಿಸುತ್ತಿಲ್ಲ ಎಂದು ವಿಷಾದಿಸಿದರು.

ಇಂದು ಹೆಚ್ಚಾಗಿ ಹೆಣ್ಣು ಮಕ್ಕಳು ವಿದ್ಯಾವಂತರಾಗುತ್ತಿರು ವುದರಿಂದ ಶೋಷಣೆಗಳ ಪ್ರಮಾಣ ಕಡಿಮೆಯಾಗಿದೆ. ಹೆಣ್ಣು ಬೌದ್ಧಿಕ ಮತ್ತು ಆರ್ಥಿಕ ಸ್ವಾವಲಂಬನೆ ಪಡೆದರೆ ಹಲವಾರು ಶೋಷಣೆ ಮತ್ತು ಸಮಸ್ಯೆಗಳಿಂದ ಮುಕ್ತರಾಗಬಹುದು. ಮಹಿಳಾ ಸ್ವಾತಂತ್ರ್ಯಕ್ಕೆ ಬೆಂಬಲವಾಗಿ ನಿಂತ ಮಹಾ ಪುರುಷರ ಸಂಖ್ಯೆಯೂ ಭಾರತದಲ್ಲಿ ದೊಡ್ಡದಿದೆ. ಸ್ವಸ್ಥ ಸಮಾಜದ ನಿರ್ಮಾಣದ ಹೊಣೆಯನ್ನು ಸ್ತ್ರೀ, ಪುರುಷರಿಬ್ಬರೂ ಹೊರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮನಶಾಸ್ತ್ರಜ್ಞ ಡಾ.ಎ.ಎಂ. ನಾಗೇಶ್ ಮಾತನಾಡಿ, ಜಗತ್ತಿನ ಸಂಸ್ಕೃತಿ, ಕಷಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಹೆಣ್ಣಿನ ಪಾಲು ದೊಡ್ಡದು. ತಾಳ್ಮೆಗೆ ಮತ್ತೊಂದು ಹೆಸರು ಹೆಣ್ಣು ಎನ್ನುತ್ತೇವೆ. ಆಕೆಗೆ ತಾಳ್ಮೆ ಇರುವುದರಿಂದಲೇ ಈ ಜಗತ್ತು ಉಳಿದಿದೆ ಎಂದು ಅಭಿಪ್ರಾಯಪಟ್ಟರು.

ಭ್ರೂಣ ಹತ್ಯೆಯ ದುಷ್ಪರಿಣಾಮವನ್ನು ಸಮಾಜ ಇಂದು ಅನುಭವಿಸುತ್ತಿದೆ. ಹೆಣ್ಣು-ಗಂಡು ಅನುಪಾತದಲ್ಲಿ ಸಮತೋಲನ ತಪ್ಪಿದೆ. ಭ್ರೂಣ ಹತ್ಯೆಯನ್ನು ವಿರೋಧಿಸುವ ಧೈರ್ಯವನ್ನು ಗರ್ಭಿಣಿಯರು ಪ್ರದರ್ಶಿಸಬೇಕಿದೆ. ಹೆಣ್ಣು ಹೆಣ್ತನದ ಶಕ್ತಿಯನ್ನು ಬಿಟ್ಟುಕೊಡಬಾರದು. ನಾವು ನಮ್ಮ ನಮ್ಮತನವನ್ನು ಮತ್ತೊಬ್ಬರ ದುರಾಸೆಗೆ ಬಲಿಕೊಡುತ್ತಿರುವುದ ರಿಂದಲೇ ಸಮಾಜದಲ್ಲಿ ಅನೈತಿಕತೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಈಜಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾಂಶುಪಾಲರಾದ ಎಚ್.ಎ.ರೇಖಾ ಮಾತನಾಡಿ, ದೈನಂದಿನ ವ್ಯವಹಾರದಲ್ಲಿ ಮಹಿಳೆಯರನ್ನು ಸಮಾನ ನಾಗರಿಕರು ಎಂಬುದಾಗಿ ನಡೆಸಿ ಕೊಂಡರೆ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ವಿದ್ಯಾರ್ಥಿನಿ ನಂದಿನಿ ಮಹಿಳಾ ದಿನಾಚರಣೆ ಮಹತ್ವ ಕುರಿತು ಮತ್ತು ದಿವ್ಯಾ ಸಾಂಪ್ರದಾಯಿಕ ಉಡುಗೆ ಮಹತ್ವ ಕುರಿತು ಮಾತನಾಡಿದರು. ಬಿಈಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಇ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಗೀತಾ ಬಿ. ಕುಲಕರ್ಣಿ ಮತ್ತು ಡಾ. ಎ.ಎನ್.ಮನು ಉಪನ್ಯಾಸಕ ಎಚ್.ಬಿ.ಅಜಿತ್ ಪ್ರಸಾದ್, ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ