ಆ್ಯಪ್ನಗರ

ನೆರೆ ಪರಿಹಾರ: 60 ಕೋಟಿ ರೂ. ನೆರವಿಗೆ ಆಗ್ರಹ

ಸರಕಾರವು ಕೂಡಲೇ ಕನಿಷ್ಠ 60 ಕೋಟಿ ರೂ. ನೆರವು ನೀಡಿ ಪ್ರವಾಹ ಪರಿಸ್ಥಿತಿ ನಿಭಾಯಿಸಬೇಕು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ತಿಳಿಸಿದರು.

Vijaya Karnataka 11 Aug 2019, 5:00 am
ಕೊಣನೂರು: ಸರಕಾರವು ಕೂಡಲೇ ಕನಿಷ್ಠ 60 ಕೋಟಿ ರೂ. ನೆರವು ನೀಡಿ ಪ್ರವಾಹ ಪರಿಸ್ಥಿತಿ ನಿಭಾಯಿಸಬೇಕು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ತಿಳಿಸಿದರು.
Vijaya Karnataka Web HSN-HSN10N3


ರಾಮನಾಥಪುರದ ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರ ಮತ್ತು ಮನೆಗಳಿಗೆ ನೀರು ನುಗ್ಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ 522 ಶಾಲಾಕಟ್ಟಡಗಳಿಗೆ ಹಾನಿಯಾಗಿದೆ. 1,800 ಕಿ.ಮೀ ಜಿ.ಪಂ ರಸ್ತೆಗಳು, 150 ಕೋಟಿ ರೂ. ಅಂದಾಜಿನ ಪಿಡಬ್ಲ್ಯುಡಿ ರಸ್ತೆಗಳು ಹಾನಿಯಾಗಿವೆ, 20 ಕೋಟಿ ವೆಚ್ಚದ ತೋಟಗಾರಿಕಾ ಬೆಳೆಗಳು ನಾಶವಾಗಿದೆ. ಸುಮಾರು 10 ಸಾವಿರ ಎಕರೆ ವ್ಯಾಪ್ತಿಯ ಬೆಳೆಗಳು ನಷ್ಟವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾವೇರಿ ನದಿ ತೀರಗಳಾದ ಕಡುವಿನಹೊಸಹಳ್ಳಿ, ಕೊಣನೂರು, ರಾಮನಾಥಪುರ, ಬಸವಾಪಟ್ಟಣ, ಕೇರಳಾಪುರ ಮುಂತಾದ ಕಡೆಗಳ ಬೆಳೆ ಹಾಗೂ ರಸ್ತೆಗಳ ಹಾನಿಯ ಬಗ್ಗೆ ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಾಸಕ ಎ.ಟಿ.ರಾಮಸ್ವಾಮಿ, ತಹಸೀಲ್ದಾರ್‌ ಶಿವರಾಜು, ತಾಲೂಕು ಆರೋಗ್ಯಾಧಿಕಾರಿ ಸ್ವಾಮಿಗೌಡ, ಇ.ಒ. ರವಿಕುಮಾರ್‌, ಬಿ.ಸಿ.ಎಂ ಜಿಲ್ಲಾಧಿಕಾರಿ ಹರ್ಷ, ಆರ್‌.ಐ ಸ್ವಾಮಿ, ನಟರಾಜು, ಟಿ.ಟಿ.ಒ ನಂಜೇಗೌಡ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ