ಆ್ಯಪ್ನಗರ

ಹಾಸನ ಜಿಲ್ಲೆಯಲ್ಲಿ ಪ್ರತ್ಯೇಕ ಮೂರು ಅಪಘಾತ: ನಾಲ್ಕು ಜನರ ಸಾವು..!

ಹಾಸನ ಜಿಲ್ಲೆಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು, ಒಂದೇ ದಿನ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಣಿ ಅಪಘಾತ ಸಂಭವಿಸಿ ನಾಲ್ಕು ಜನ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

Vijaya Karnataka Web 18 Sep 2020, 5:57 pm
ಹಾಸನ: ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಹಾಸನದ ವಿವಿದೆಡೆ ವರದಿಯಾಗಿದೆ.
Vijaya Karnataka Web Accident


ಟಿವಿಎಸ್ ಬೈಕ್‌ಗೆ ಟ್ರೈಲರ್ ಡಿಕ್ಕಿ ಹಾಗೂ ಸ್ಲ್ಪೆಂಡರ್ ಬೈಕ್‌ಗೆ ಕಾರುಡಿಕ್ಕಿ ಮತ್ತು ಪರಸ್ಪರ ಬೈಕ್ ಡಿಕ್ಕಿ ಹೊಡೆದ ಮೂರು ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಮೃತರನ್ನು ಲೋಕೇಶ(40), ಬಸವರಾಜು(45), ಈಶ್ವರೇಗೌಡ(50) ಮತ್ತು ಗಿರೀಶ(27) ಎಂದು ಗುರುತಿಸಲಾಗಿದೆ.

ಎಪಿಎಂಸಿ ಕಾಯ್ದೆ ವಿರುದ್ಧ ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ ಪ್ರಜ್ವಲ್ ರೇವಣ್ಣ

ಅರಸೀಕೆರೆ ತಾಲೂಕು, ದೊಡ್ಡಯರಗನಾಳು ಗ್ರಾಮದ ಬಸವರಾಜು ಕೆಲಸ ನಿಮಿತ್ತ ಲೋಕೇಶ್‌ ಜೊತೆ ಟಿವಿಎಸ್ ವಿಕ್ಟರ್ ಮೋಟಾರ್‌ ಬೈಕ್‌ನಲ್ಲಿ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ಎಂ. ಶಿವರ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಮಾದಗುಡ್ಡನಹಳ್ಳಿ-ಎಂ.ಶಿವರ ರಸ್ತೆಯಲ್ಲಿ ಶಿವರದಮ್ಮ ದೇವಸ್ಥಾನದ ಬಳಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಟ್ರಾಕ್ಟರ್ ಟ್ರೈಲರ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್‌ನಲ್ಲಿದ್ದ ಲೋಕೇಶ್‌ನ ತಲೆಯ ಮೇಲೆ ಮತ್ತು ಬಸವರಾಜ್‌ ಅವರ ಎದೆಯ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದ ಪರಿಣಾಮ ಇಬ್ಬರಿಗೂ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಾಸನದಲ್ಲಿ ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣ: ಆರು ಜನರ ಬಂಧನ

ಕಾರು ಡಿಕ್ಕಿ: ಶಿಕ್ಷಕನ ಸಾವು
ಇತ್ತ ಚನ್ನರಾಯಪಟ್ಟಣದ ಬಿಎಂ ರಸ್ತೆಯಲ್ಲಿ ಬೈಕ್‌ನ್ನು ಯು-ಟರ್ನ್ ಮಾಡಿಕೊಂಡು ಹೊಸ ಬಸ್ ನಿಲ್ದಾಣದ ಕಡೆಗೆ ಹೋಗಲು ಬೈಕ್ ಇಂಡಿಕೇಟರ್ ಹಾಕಿಕೊಂಡು ನಿಧಾನವಾಗಿ ಬಲಕ್ಕೆ ತಿರುಗಿಸುತ್ತಿದ್ದ ವೇಳೆ ಹಿರೀಸಾವೆ ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಬಂದ ಇನೋವಾ ಕಾರು ಏಕಾಏಕಿ ಡಿ.ಕಾಳೇನಹಳ್ಳಿ ಶಿಕ್ಷಕ ಈಶ್ವರೇಗೌಡ ( ೫೦) ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಶಿಕ್ಷಕ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಎಂಟರ ಸುಮಾರಿಗೆ ಮೃತಪಟ್ಟಿದ್ದಾರೆ.

ಹಾಸನದ ಖ್ಯಾತ ಮಕ್ಕಳ ತಜ್ಞ ಡಾ.ರಾಜೀವ್ ಇನ್ನಿಲ್ಲ
ಇನ್ನೊಂದೆಡೆ ಚನ್ನರಾಯಪಟ್ಟಣ ತಾಲೂಕು ಗುಲಸಿಂದ ಗ್ರಾಮದಿಂದ ಹೊಳೇನರಸೀಪುರ ತಾಲೂಕು ಚಿಟ್ಟನಹಳ್ಳಿ ಗ್ರಾಮದ ಹೌಸಿಂಗ್ ಬೋರ್ಡ್‌ನ ಸಂಬಂಕರ ಮನೆಗೆ ಬಂದಿದ್ದ ವ್ಯಕ್ತಿ ಹೊಳೇನರಸೀಪುರ ಟೌನ್ ಬಯಲು ರಂಗಮದಿರದ ಬಳಿ ರಸ್ತೆಯ ಎಡಬದಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಗಿರೀಶ್ ಸ್ಥಳದಲ್ಲೇ ಮೃತಟ್ಟಿದ್ದಾರೆ. ಘಟನೆ ಸಂಬಂಧ ಆಯಾಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ