ಆ್ಯಪ್ನಗರ

ಹಾಸನ ಸುತ್ತಮುತ್ತ ತಲೆ ಎತ್ತಿವೆ ಲೇಔಟ್‌: ತಾಕತ್ತಿದ್ದರೆ ಸರಕಾರ ಇದನ್ನು ನಿಲ್ಲಿಸಲಿ ಎಂದ ರೇವಣ್ಣ

ಸಕಲೇಶಪುರ, ಆಲೂರು, ಬೇಲೂರು, ಹೊಳೆನರಸೀಪುರ, ಅರಕಲಗೂಡು ಸೇರಿದಂತೆ ನಾನಾ ತಾಲೂಕಿನಲ್ಲಿ ಮಳೆಹಾನಿಯಂದ ಮನೆಗಳು, ರಸ್ತೆಗಳು ಹಾಗೂ ಕೆರೆಕಟ್ಟೆಗಳಿಗೆ ಹಾನಿಯಾಗಿದೆ

Vijaya Karnataka Web 2 Aug 2021, 8:52 pm
ಹಾಸನ: ಜಿಲ್ಲೆಯ ರೈಲ್ವೆಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತುರ್ತಾಗಿ ಪ್ರಾರಂಭಿಸುವಂತೆ ಕೇಂದ್ರದ ರೈಲ್ವೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಅವರನ್ನು ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿ ಮಾಡಲಿದ್ದಾರೆ ಎಂದು ಶಾಸಕ ಎಚ್ ಡಿ ರೇವಣ್ಣ ತಿಳಿಸಿದರು.
Vijaya Karnataka Web ಎಚ್‌ಡಿ ರೇವಣ್ಣ
ಎಚ್‌ಡಿ ರೇವಣ್ಣ


ಪ್ರವಾಸಿ ತಾಣ ಬೇಲೂರು ಮೂಲಕ ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸಲು ರೈಲ್ವೆ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸಿದ್ಧವಿದ್ದು, ಅಗತ್ಯ ಭೂ ಸ್ವಾಧೀನ ಮಾಡಿಕೊಡುವಂತೆ ರಾಜ್ಯಕ್ಕೆ ಸೂಚಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚನ್ನರಾಯಪಟ್ಟಣ, ಅರಕಲಗೂಡು, ಶನಿವಾರಸಂತೆ, ಮಾಕುಟ ಅಂತರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಗೆ ಡಿಪಿಆರ್ ಆಗಿದ್ದು, ಆ ಕಾಮಗಾರಿಗೂ ಚಾಲನೆ ನೀಡುವಂತೆ ಮಂಗಳವಾರ ಕೇಂದ್ರ ಸಚಿವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ತಾವು ಮನವಿ ಮಾಡುತ್ತೇವೆ ಎಂದರು.

ಪರಿಹಾರಕ್ಕೆ ಒತ್ತಾಯ


ಮಳೆಹಾನಿಯಾದ ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕು ಎಂದು ಘೋಷಿಸಿ ಕೂಡಲೇ ಪರಿಹಾರ ಕಾರ್ಯಕ್ಕೆ 20 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಸಕಲೇಶಪುರ, ಆಲೂರು, ಬೇಲೂರು, ಹೊಳೆನರಸೀಪುರ, ಅರಕಲಗೂಡು ಸೇರಿದಂತೆ ನಾನಾ ತಾಲೂಕಿನಲ್ಲಿ ಮಳೆಹಾನಿಯಂದ ಮನೆಗಳು, ರಸ್ತೆಗಳು ಹಾಗೂ ಕೆರೆಕಟ್ಟೆಗಳಿಗೆ ಹಾನಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಮೂರನೇ ಅಲೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ವ್ಯಾಪಕವಾಗುತ್ತಿದೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣ ಹೆಚ್ಚುತ್ತಿದೆ ಈ ಹಿನ್ನೆಲೆಯಲ್ಲಿ ಜಿಲ್ಲಾಕಾರಿಗಳು ಕೂಡಲೇ ಸಭೆ ಕರೆದು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಅಗತ್ಯ ಸೌಲಭ್ಯ ಕಲ್ಪಿಸಬೇಕು, ಎರಡನೇ ಅಲೆಯಲ್ಲಿ ಆದ ಸಮಸ್ಯೆಗಳು ಪುನರಾವರ್ತನೆ ಆಗಬಾರದು ಎಂದು ಹೇಳಿದರು.

ಹಾಸನ ಸುತ್ತ ಲೇ ಔಟ್‌ಗಳು ತಲೆ ಎತ್ತುತ್ತಿವೆ. ಜಿಲ್ಲಾಕಾರಿ ಹಾಗೂ ಸರಕಾರಕ್ಕೆ ತಾಕತ್ತಿದ್ದರೆ ನಿಲ್ಲಿಸಲಿ ಇಲ್ಲದೇ ಹೋದಲ್ಲಿ ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ ಎಂದು ಎಚ್‌ ಡಿ ರೇವಣ್ಣ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ