ಆ್ಯಪ್ನಗರ

ಬರವಣಿಗೆಯಿಂದ ವ್ಯಕ್ತಿತ್ವ ಪರಿಚಯ

ಅಂದವಾದ ಬರವಣಿಗೆಯು ವ್ಯಕ್ತಿಯ ಸ್ವಭಾವ ವ್ಯಕಿತ್ವವನ್ನು ತಿಳಿಸುತ್ತದೆ ಎಂದು ಜಾವಗಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‌ಮೆಂಟ್‌ ಸೆಲ್‌ನ ಸಂಚಾಲಕ ವೆಂಕಟೇಶ್‌ ಅಭಿಪ್ರಾಯಪಟ್ಟರು.

Vijaya Karnataka 28 Aug 2018, 5:00 am
ಜಾವಗಲ್‌ : ಅಂದವಾದ ಬರವಣಿಗೆಯು ವ್ಯಕ್ತಿಯ ಸ್ವಭಾವ ವ್ಯಕಿತ್ವವನ್ನು ತಿಳಿಸುತ್ತದೆ ಎಂದು ಜಾವಗಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‌ಮೆಂಟ್‌ ಸೆಲ್‌ನ ಸಂಚಾಲಕ ವೆಂಕಟೇಶ್‌ ಅಭಿಪ್ರಾಯಪಟ್ಟರು.
Vijaya Karnataka Web handwriting explains mans nature
ಬರವಣಿಗೆಯಿಂದ ವ್ಯಕ್ತಿತ್ವ ಪರಿಚಯ


ಕಾಲೇಜಿನ ಪ್ಲೇಸ್‌ಮೆಂಟ್‌ ಸೆಲ್‌ ಹಾಗೂ ಹಾಸನದ ಅ ಕರಿಯರ್‌ ಸಕ್ಸಸ್‌ ವೇ ಟು ಜಾಬ್‌ ಸಂಸ್ಥೆಯ ಸಹಯೋಗದೊಂದಿಗೆ ಕಾಲೇಜಿನಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಕೌಶಲ್ಯಗಳ ಕುರಿತ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಸ್ಫರ್ಧಾತ್ಮಕ ಯುಗದಲ್ಲಿ ಉದ್ಯೋಗವನ್ನು ಪಡೆಯಲು ಹಲವು ಕೌಶಲ್ಯಗಳ ಅವಶ್ಯಕತೆ ಇದೆ. ಕೇವಲ ಅಂಕಗಳು ವಿದ್ಯಾರ್ಥಿಯು ಉದ್ಯೋಗಪಡೆಯಲು ಸಾಧ್ಯವಾಗುವುದಿಲ್ಲ. ಅದರೊಂದಿಗೆ ಉತ್ತಮವಾದ ಬರವಣಿಗೆ, ರೆಸ್ಯೂಮೆ, ಸಂದರ್ಶನ, ಮುಂತಾದ ಕೌಶಲ್ಯಗಳು ಅನಿವಾರ್ಯವಾಗಿವೆ. ಸ್ಫರ್ಧಾತ್ಮಕ ಯುಗದಲ್ಲಿ ಪೈಪೋಟಿ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಹಲವಾರು ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಜಯರಾಂ, ವರ್ಷಿಣಿ, ವರುಣ, ಜೀವನ್‌ ಮತ್ತಿತರರು ವಿದ್ಯಾರ್ಥಿಗಳಿಗೆ ಬರವಣಿಗೆ, ರೆಸ್ಯೂಮೆ, ಸಂದರ್ಶನ, ವ್ಯಕ್ತಿತ್ವ ವಿಕಾಸ ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ವರ್ಷಿಣಿ ಮಾತನಾಡಿ ರೆಸ್ಯೂಮೆ ಉದ್ಯೋಗಾಕಾಂಕ್ಷಿಯ ಶೇ 50 ಭಾಗದಷ್ಟು ಸಾಮರ್ಥ್ಯ‌ವನ್ನು ಗುರುತಿಸುತ್ತದೆ ಎಂದರು.

ಉದ್ಯೋಗಾವಕಾಶ ಪಡೆದುಕೊಳ್ಳುಲು ಸಂಪರ್ಕ ಭಾಷೆæಯಾದ ಇಂಗ್ಲಿಷ್‌ ಜ್ಞಾನ ಅಗತ್ಯವಿದೆ, ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳಿರಿಮೆ ಬಿಟ್ಟು ಇಂಗ್ಲೀಷ್‌ ಭಾಷೆಯನ್ನು ಚೆನ್ನಾಗಿ ಅಭ್ಯಾಸ ಮಾಡಿ ಸ್ಪರ್ಧಾತ್ಮÜಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗುವಂತೆ ಸಲಹೆ ನೀಡಿದರು.

ಪ್ರಾಂಶುಪಾಲ ಎಸ್‌.ಎಂ ಶಿವಶಂಕರ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯಗಳ ಕಲಿಕೆ ಅನಿವಾರ್ಯವಾಗಿದೆ ಎಂದರು.

ಸಹಾಯಕ ಪ್ರಾಧ್ಯಾಪಕರುಗಳಾದ ನರಸಿಂಹಮೂರ್ತಿ, ಮಹೇಶ, ಪುಟ್ಟಸ್ವಾಮಿ, ವಿರೂಪಾಕ್ಷ , ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ