ಆ್ಯಪ್ನಗರ

ಅರಕಲಗೂಡು: ಸಮಗ್ರ ಅಭಿವೃದ್ಧಿಗೆ 150ಕೋಟಿ

ಪಟ್ಟಣದ ಸಮಗ್ರ ಅಭಿವೃದ್ಧಿಗೆ 150ಕೋಟಿರುಗೂ ಅಧಿಕ ವೆಚ್ಚಮಾಡಲಾಗಿದೆ ಎಂದು ಸಚಿವ ಎ.ಮಂಜು ತಿಳಿಸಿದರು.

Vijaya Karnataka 4 May 2018, 5:25 am

ಅರಕಲಗೂಡು: ಪಟ್ಟಣದ ಸಮಗ್ರ ಅಭಿವೃದ್ಧಿಗೆ 150ಕೋಟಿರುಗೂ ಅಧಿಕ ವೆಚ್ಚಮಾಡಲಾಗಿದೆ ಎಂದು ಸಚಿವ ಎ.ಮಂಜು ತಿಳಿಸಿದರು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ,ಪಟ್ಟಣ ಜನತೆಯ ಬಹುದಿನಗಳ ಕನಸಾಗಿದ್ದ ಒಳಚರಂಡಿ ಯೋಜನೆಯ ಪೈಪ್‌ಲೈನ್‌ ಅವಳಡಿಕೆ ಕೆಲಸ ಮುಗಿದಿದ್ದು,ಎರಡನೇಹಂತದ ಕೆಲಸ ಆರಂಭಗೊಳ್ಳಲಿದೆ.ಎಲ್ಲಾ ವಾರ್ಡ್‌ಗಳಲ್ಲಿಯೂ ನೂತನ ಟ್ಯಾಂಕ್‌ ನಿರ್ಮಾಣ ಮಾಡಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.ಅಲ್ಲದೆ ಪಟ್ಟಣ ಸುತ್ತಾಮುತ್ತಲ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ತಲುಪಿಸುವ ಸಲುವಾಗಿ ಎರಡು ಕಡೆ ಘಟಕಗಳನ್ನು ಸ್ಥಾಪಿಸಿ ಕೇವಲ 5ರೂನಲ್ಲಿ 25ಲೀಟರ್‌ ನೀರು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.ಪಟ್ಟಣದ ರಸ್ತೆಗಳ ಅಭಿವೃದ್ಧಿ,ಉದ್ಯಾಯನವನ,ಬಸ್‌ ನಿಲ್ದಾಣ,ಬಸ್‌ ಡಿಪೋ,ಕ್ರೀಡಾಂಗಣ,ಅಗ್ನಿಶಾಮಕ ಠಾಣೆ,ಉಗ್ರಾಣ ಘಟಕ,ಐಟಿಐ ಕಟ್ಟಡ,ಸಮಾಜ ಕಲ್ಯಾಣ ಇಲಾಖೆ ಕಟ್ಟಡ,ಬಾಲಕಿಯರ ಕಾಲೇಜು ವಿದ್ಯಾರ್ಥಿನಿಲಯ ಕಟ್ಟಡ,ಪದವಿ,ಪದವಿಪೂರ್ವ ಕಾಲೇಜಿಗೆ ನೂತನ ಕಟ್ಟಡಗಳು ಸೇರಿದಂತ್ತೆ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಸಚಿವನಾದ ಬಳಿಕ ಹೆಚ್ಚಿನ ಅನುಧಾನವನ್ನು ತಂದು ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ನಿರ್ವಹಿಸಲಾಗಿದೆ.ಮುಂದಿನ ಬಾರಿಗೆ ನನ್ನನ್ನು ಮತ್ತೆ ಶಾಸಕನಾಗಿ ಆಯ್ಕೆಗೊಳಿಸಿ ಬಾಕಿ ಉಳಿದಿರುವ ಕಾಮಗಾರಿ,ಮುಂದೆ ಆಗಬೇಕಿರುವ ಮತ್ತೊಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಅವಕಾಶ ಮಾಡಿಕೊಡಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಲೋಕೇಶ್‌.ಮುಖಂಡ ಅಹಮದ್‌,ರಂಗೇಗೌಡ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ