ಆ್ಯಪ್ನಗರ

ವೇಮನ ವಚನಗಳು ಸಮಾಜಕ್ಕೆ ದಾರಿದೀಪ

ಹದಿನೈದನೇ ಶತಮಾನದಲ್ಲಿ ತನ್ನ ತ್ರಿಪದಿಯ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದ ಮಹಾ ಯೋಗಿ ವೇಮನ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಬಣ್ಣಿಸಿದರು.

Vijaya Karnataka 14 Dec 2022, 12:12 pm
ಅರಸೀಕೆರೆ: ಹದಿನೈದನೇ ಶತಮಾನದಲ್ಲಿ ತನ್ನ ತ್ರಿಪದಿಯ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದ ಮಹಾ ಯೋಗಿ ವೇಮನ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಬಣ್ಣಿಸಿದರು.
Vijaya Karnataka Web HSN-HSN20ASK1


ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿ ಅವರು, ಕರ್ನಾಟಕದ ಸರ್ವಜ್ಞ , ತಮಿಳಿನ ತಿರುವಳ್ಳವರ್‌ ರೀತಿಯಲ್ಲಿ ತೆಲುಗು ಭಾಷೆಯಲ್ಲಿ ಲೋಕಾನುಭವವನ್ನು ಸೇರಿಸಿ ತಕ್ಷ ಣದಲ್ಲೆ ಕಂಡಿದ್ದನ್ನು ಕಂಡ ಹಾಗೆ ಪದ ಕಟ್ಟುವ ಮೂಲಕ ಜನರ ತಪ್ಪು ಒಪ್ಪುಗಳನ್ನು ತಿಳಿಸಿ ಸರಿದಾರಿಗೆ ತರಲು ಪ್ರಯತ್ನಿಸಿದರು ವೇಮನ. ತೆಲುಗಿನಲ್ಲಿ ಕೊಟ್ಟ ಶ್ರೇಷ್ಠ ಸಾಹಿತ್ಯ ಜನ ಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕ್ಕಾಗಿದೆ ಎಂದು ಸ್ಮರಿಸಿದರು.

ವೇಮನ ಬಾಲ್ಯದಿಂದಲೂ ಎಲ್ಲರಂತೆ ಬೋಗ ಜೀವನವನ್ನು ಮಾಡಿಕೊಂಡು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡಿ ಜೀವನ ನಡೆಸುತ್ತಿದ್ದರು. ಅವರ ತಪ್ಪುಗಳನ್ನು ತಿಳಿಯುವಂತೆ ಮಾಡಿದ ಇವನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಇವನನ್ನು ತಿದ್ದಿ ಸಾತ್ವಿಕಾ ಜೀವನದತ್ತ ಕೊಂಡೊಯ್ದರು. ಅಂದಿನಿಂದ ಜೀವನದ ಬಗ್ಗೆ ಜುಗುಪ್ಸೆ ಹೊಂದಿ ತತ್ತ್ವಜ್ಞಾನ ಹೇಳುತ್ತಾ ತಾನು ನಗ್ನನಾಗಿ ವೈರಾಗಿಯಂತೆ ಹೊರಟ ವೇಮನ ತನ್ನ ಸಾಧನೆಯ ಮೂಲಕ ಮಹಾ ಯೋಗಿಯಾಗಿ ದೈವತ್ವದ ಕಡೆಗೆ ಮುಖ ಮಾಡಿದ ಮತ್ತು ಈತ ಜನರನ್ನು ತಮ್ಮ ವಚನಗಳ ಮೂಲಕ ಧಾರ್ಮಿಕತೆಯ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.

ತಹಸೀಲ್ದಾರ್‌ ಎನ್‌.ವಿ.ನಟೇಶ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್‌, ತಾಪಂ ಉಪಾಧ್ಯಕ್ಷ ಬಸವಲಿಂಗಯ್ಯ, ತಾಲೂಕು ಕಸಾಪ ಅಧ್ಯಕ್ಷ ಶಿವಮೂರ್ತಿ , ಹಿರಿಯ ರಾಷ್ಟ್ರೀಯ ಕ್ರೀಡಾಪಟು ಎಚ್‌.ಟಿ.ಮಹಾದೇವ್‌, ಗ್ರೇಡ್‌ 2 ತಹಸೀಲ್ದಾರ್‌ ಪಾಲಾಕ್ಷ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ