ಆ್ಯಪ್ನಗರ

ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ತಂಡ ದಾಳಿ

ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಎಸ್‌ಪಿ ನೇತೃತ್ವದ ತಂಡ ಗುರುವಾರ ಜಿಲ್ಲಾ ಕಾರಾಗೃಹಕ್ಕೆ ದಿಢೀರ್‌ ದಾಳಿ ನಡೆಸಿದರೂ ಬರಿಗೈಲಿ ಹಿಂತಿರುಗಿತು.

Vijaya Karnataka 27 Apr 2018, 5:14 am

ಹಾಸನ: ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಎಸ್‌ಪಿ ನೇತೃತ್ವದ ತಂಡ ಗುರುವಾರ ಜಿಲ್ಲಾ ಕಾರಾಗೃಹಕ್ಕೆ ದಿಢೀರ್‌ ದಾಳಿ ನಡೆಸಿದರೂ ಬರಿಗೈಲಿ ಹಿಂತಿರುಗಿತು.

ಎಸ್‌ಪಿ ರಾಹುಲ್‌ಕುಮಾರ್‌ ಶಹಪುರವಾಡ್‌, ಡಿವೈಎಸ್‌ಪಿ ಶಶಿಧರ್‌, ಸಿಪಿಐ ಸತ್ಯನಾರಾಯಣ, ಎಸ್‌ಐ ಸುರೇಶ್‌ ಹಾಗೂ ಪೇದೆಗಳ ತಂಡ ಗುರುವಾರ ಮಧ್ಯಾಹ್ನ ಕಾರಾಗೃಹಕ್ಕೆ ದಾಳಿ ಮಾಡಿತು. ಕೈದಿಗಳನ್ನು ಇರಿಸಿದ್ದ ಬ್ಯಾರಕ್‌ಗಳಲ್ಲಿ ಶೋಧ ನಡೆಸಿದರೂ ಏನು ಸಿಗದೆ ಬರಿಗೈಲಿ ಬಂದರು. ಎಸ್‌ಪಿ ನೇತೃತ್ವದ ತಂಡ ದಾಳಿ ನಡೆಸಿತಾದರೂ, ಏಕಕಾಲದಲ್ಲಿ ಐದು ಬ್ಯಾರಕ್‌ಗಳ ಶೋಧ ನಡೆಸಬೇಕಿತ್ತು ಜತೆಗೆ ಹತ್ತರಿಂದ ಹದಿನೈದು ನಿಮಿಷದಲ್ಲಿ ಪೂರ್ಣ ಪ್ರಮಾಣದ ಶೋಧ ನಡೆಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಗಾಂಜಾ:

ಕಾರಾಗೃಹದ ಹಿಂಭಾಗ ಶ್ರೀನಗರ ಬಡಾವಣೆ, ವರ್ಕ್‌ಶಾಪ್‌ ಪ್ರದೇಶಗಳಿಂದ ಕೆಲ ದುಷ್ಕರ್ಮಿಗಳು ಗಾಂಜಾ, ಮದ್ಯವನ್ನು ಗಾಳಿಯಲ್ಲಿ ತೂರಿ ಬಿಡುವುದು ಈ ಹಿಂದೆ ಸಾಕಷ್ಟು ಬಾರಿ ಬೆಳಕಿಗೆ ಬಂದಿತ್ತು. ಕೆಜಿಗಟ್ಟಲೆ ಗಾಂಜಾವನ್ನು ವಶಪಡಿಸಿಕೊಂಡ ಉದಾಹರಣೆಯೂ ಇದೆ. ಜತೆಗೆ ಮೊಬೈಲ್‌ ಬಳಕೆ,ಮಾದಕವಸ್ತುಗಳು ಇರಬಹುದು ಎಂಬ ಸಂಶಯದ ಹಿನ್ನೆಲೆಯಲ್ಲಿ ದಾಳಿ ನಡೆಯಿತಾದರೂ ಏನು ಸಿಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ