ಆ್ಯಪ್ನಗರ

ಹಾಲಿನ ಹಣ ಬಾಕಿ ಪಾವತಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಹಾಲಿನ ಹಣ ಬಾಕಿ ಪಾವತಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ * ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಅಮ್ಮನಗುಡಿಕೊಪ್ಪಲು ನಿವಾಸಿಗಳ ಆರೋಪ ------------- ವಿಕ ಸುದ್ದಿಲೋಕ ...

Vijaya Karnataka 22 Jul 2018, 5:00 am
ಹಾಸನ: ಹಾಲಿನ ಬಾಕಿ ಹಣ ನೀಡುತ್ತಿಲ್ಲ ಹಾಗೂ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಅಮ್ಮನಗುಡಿಕೊಪ್ಪಲು ಗ್ರಾಮದ ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web hassan ammanagudikoppalu mpcs pay milk amount ariyars womans protest
ಹಾಲಿನ ಹಣ ಬಾಕಿ ಪಾವತಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ


ತಾಲೂಕಿನ ಅಮ್ಮನಗುಡಿಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾಕರ ಮಹಿಳಾ ಸಹಕಾರಿ ಸಂಘದ ಎದುರು ಹಾಲಿನ ಕ್ಯಾನ್‌ಗಳನ್ನು ಇಟ್ಟು ಅಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆಯನ್ನು ಬಗೆಹರಿಸುವವರೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅಮ್ಮನಗುಡಿಕೊಪ್ಪಲು ಹಾಲು ಉತ್ಪಾಕರ ಮಹಿಳಾ ಸಹಕಾರಿ ಸಂಘವನ್ನು ಹಲವು ವರ್ಷಗಳಿಂದ ಒಬ್ಬರೇ ಕಾರ್ಯದರ್ಶಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಸರಿಯಾಗಿ ಹಾಲಿನ ಸಂದಾಯ ಹಣವನ್ನು ನೀಡದೆ ವಿಳಂಬ ಮಾಡುತ್ತಿದ್ದಾರೆ. ಉತ್ಪಾದಕರಿಗೆ ಎರಡೂವರೆ ತಿಂಗಳಿನಿಂದ ಹಾಲಿನ ಬಾಕಿ ಹಣವನ್ನು ನೀಡಿಲ್ಲ. ಸಂಘವನ್ನು ಸರಿಯಾಗಿ ನಿರ್ವಹಣೆಯನ್ನು ಮಾಡುತ್ತಿಲ್ಲ. ಲೆಕ್ಕಾಚಾರಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಲೆಕ್ಕ ನೀಡುವಂತೆ ಗ್ರಾಮಸ್ಥರು ಪ್ರಶ್ನೆ ಮಾಡಲು ಮುಂದಾದರೇ ಅಂತಹವರಿಗೆ ಹಾಲಿನ ಗುಣಮಟ್ಟ ಸರಿ ಇಲ್ಲ ಎಂದು ಹೇಳಿ ವಾಪಸ್‌ ಕಳಿಸುವ ಮೂಲಕ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಹಾಲು ಉತ್ಪಾಕರ ಮಹಿಳಾ ಸಹಕಾರ ಸಂಘದಲ್ಲಿ ಹಾಲವನ್ನು ಕಂಪ್ಯೂಟರ್‌ ಮೂಲಕ ಅಳತೆ ಮಾಡುವ ಬದಲು ಇನ್ನು ಹಳೆಯ ಪದ್ಧತಿ ಅನುಸರಿಸಲಾಗುತ್ತಿದೆ. ಇಲ್ಲಿ ಎಲ್ಲರಿಗೂ ಮೋಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ರೈತರ ಹಾಲಿನ ಗುಣಮಟ್ಟ ಉತ್ತಮವಾಗಿದ್ದರೂ ಸಹ ಗುಣಮಟ್ಟ ಸರಿ ಇಲ್ಲ ಎಂದು ಇಲ್ಲಸಲ್ಲದ ನೆಪ ಹೇಳಿ ವಾಪಸ್‌ ಕಳುಹಿಸುತ್ತಾರೆ. ಸಂಘದ ಕಾರ್ಯದರ್ಶಿ ತಮ್ಮ ಮನೆಯ ವಸ್ತುಗಳನ್ನೆಲ್ಲಾ ಸಂಘದಲ್ಲಿ ಇಟ್ಟುಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆ ನಡೆದು ಹಲವು ವರ್ಷಗಳು ಕಳೆದಿದೆ. ಹಾಲಿ ಇರುವವರೇ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಕೂಡಲೇ ಸ್ಥಳಕ್ಕೆ ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಸಚಿವ ರೇವಣ್ಣ ಅವರು ಸ್ಥಳಕ್ಕೆ ಭೇಟಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ರಾಧ, ಸೌಮ್ಯ, ಶಾರದಮ್ಮ, ಲಕ್ಷ್ಮಮ್ಮ, ವೇಣುಗೋಪಾಲ್‌, ಶಶಿಕುಮಾರ್‌, ರವಿಕುಮಾರ್‌, ಪ್ರದೀಪ್‌, ದಿಲೀಪ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ