ಆ್ಯಪ್ನಗರ

ಅರಕಲಗೂಡು: ಸಾಲಮನ್ನಾ: ತಂಬಾಕು ಬೆಳೆಗಾರರಿಗೆ ಅನ್ಯಾಯ

ತಂಬಾಕು ಬೆಳೆಗಾರರಿಗೆ ಅನ್ಯಾಯ *ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌...

Vijaya Karnataka 22 Jul 2018, 5:00 am
ಅರಕಲಗೂಡು: ರಾಜ್ಯ ಸರಕಾರ ಮಾಡಿರುವ ಬೆಳೆ ಸಾಲಮನ್ನಾ ಅವೈಜ್ಞಾನಿಕವಾಗಿದ್ದು ತಾಲೂಕಿನ ತಂಬಾಕು ಬೆಳೆಗಾರರು ಸಾಲಮನ್ನಾದಿಂದ ವಂಚಿತಗೊಂಡಿದ್ದಾರೆ. ಕೂಡಲೇ ವಿಶೇಷ ನಿಯಮಾವಳಿ ರೂಪಿಸಿ ತಂಬಾಕು ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಯೋಗಾ ರಮೇಶ್‌ ಸರಕಾರವನ್ನು ಆಗ್ರಹಿಸಿದರು.
Vijaya Karnataka Web hassan arakalagudu bjp meeting formers loan waevier loss to tobacco cropers yoga ramesh alligation
ಅರಕಲಗೂಡು: ಸಾಲಮನ್ನಾ: ತಂಬಾಕು ಬೆಳೆಗಾರರಿಗೆ ಅನ್ಯಾಯ


ಪಟ್ಟಣದ ಶಿಕ್ಷ ಕರ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಕಾರ್ಯಾಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ,ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲ ಬೆಳೆಗಾರರ ವೈಜ್ಞಾನಿಕ ಬೆಳೆಯನ್ನು ಅವಲೋಕಿಸಿ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಳ್ಳುವ ಬದಲು, ಕೇವಲ ಕಾಕತಾಳಿಯವಾಗಿ ಸುಸ್ತಿ, ಚಾಲ್ತಿ ಸಾಲವನ್ನು ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಇದರಿಂದ ಎಲ್ಲ ರೈತರಿಗೂ ನೆರವಾಗುವುದಿಲ್ಲ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ವಾರ್ಷಿಕ 250 ಕೋಟಿ ರೂ.ವಹಿವಾಟು ನಡೆಯುತ್ತದೆ. 30 ಸಾವಿರ ಮಂದಿ ರೈತರು ಕೃಷಿಯನ್ನು ನಂಬಿದ್ದಾರೆ. ಈ ಬಾರಿಯ ಅಧಿಕ ಮಳೆಯಿಂದ ಶೇ.50ರಷ್ಟು ತಂಬಾಕು ಬೆಳೆ ಹಾನಿಯಾಗಿದೆ. ಈ ಕುರಿತು ಸಮಗ್ರ ಮಾಹಿತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಕ್ಷ ದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಸಲ್ಲಿಸಿ ತಂಬಾಕು ಬೆಳೆಗಾರರ ಸಾಲ ಮನ್ನಾ ಮಾಡುವ ಕುರಿತು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಮತದಾರರ ನಂಬಿಕೆಗೆ ವಿರುದ್ಧವಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಗೊಂಡಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಮೇಲೆ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುವ ಬದಲು ಸಾರ್ವಜನಿಕರವಾಗಿ ಕಣ್ಣೀರು ಹಾಕುತ್ತಿರುವುದು ಅವರ ವೈಫಲ್ಯವನ್ನು ಪ್ರದರ್ಶಿಸುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು ನಂಬಿಕೆ ಕಳೆದುಕೊಂಡಿದ್ದಾರೆ. ಇದಕ್ಕೆ ಮೊದಲ ಹೆಜ್ಜೆಯಾಗಿ ತೆಗೆದುಕೊಂಡಿರುವ ಅವೈಜ್ಞಾನಿಕ ಸಾಲಮನ್ನಾ ಯೋಜನೆ ಕಾರಣ ಎಂದು ಟೀಕಿಸಿದರು.

ಕ್ಷೇತ್ರದ ಶಾಸಕರಾದ ರಾಮಸ್ವಾಮಿ ಅವರು, ರಾಜ್ಯದ ಸಮಸ್ಯೆ ಬಗ್ಗೆ ಹೆಚ್ಚು ಗಮನಹರಿಸಿದ್ದನ್ನು ಹಿಂದೆ ಕಂಡಿದ್ದೇವೆ. ಇದರ ಮುಂದುವರಿದ ಭಾಗವಾಗಿ ಸದನದಲ್ಲಿ ಜೆಡಿಎಸ್‌ ವಿರುದ್ಧ ಭಾಷಣ ಸಹ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕ್ಷೇತ್ರ ಹೊಸ ಯೋಜನೆಗೆ ಯಾವುದೇ ಅನುದಾನ ನೀಡಿಲ್ಲದಿರುವುದು. ಸಚಿವ ರೇವಣ್ಣ ಅವರು ಇರುವಾಗ ಇವರ ಯಾವುದೇ ಆಟ ನಡೆಯುವುದಿಲ್ಲ. ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕುಗಳಲ್ಲಿ ಹೆಚ್ಚು ಮಂದಿ ಜೆಡಿಎಸ್‌ ಕಾರ್ಯಕರ್ತರೇ ಸಾಲ ಸೌಲಭ್ಯ ಸೇರಿದಂತೆ ಎಲ್ಲ ಪ್ರಯೋಜ ಪಡೆದುಕೊಂಡಿದ್ದಾರೆ. ಇದರಿಂದ ಯಾವುದೇ ಯೋಜನೆ ಅನುಷ್ಠಾನಕ್ಕೆ ಬಂದರೂ ಆ ಎರಡು ತಾಲೂಕುಗಳಿಗೆ ಮಾತ್ರ ಸೀಮಿತವಾಗುತ್ತದೆ. ಇದರಿಂದ ಕ್ಷೇತ್ರದ ಶಾಸಕ ರಾಮಸ್ವಾಮಿ ಪ್ರತಿ ಪಕ್ಷ ದ ಶಾಸಕರಂತೆ ಎಂದರು.

ಇದುವರೆಗೂ ತಾಲೂಕಿನಲ್ಲಿ ಆಗಿರುವ ಅತಿವೃಷ್ಟಿ ಹಾನಿ ಕುರಿತು ಅಧಿಕಾರಿಗಳಿಂದ ಶಾಸಕ ರಾಮಸ್ವಾಮಿ ಸಮೀಕ್ಷೆ ಕೈಗೊಂಡಿಲ್ಲ. ಮುಂಗಾರು ಹಂಗಾಮಿನಲ್ಲಿ ಕೈಗೊಂಡಿರುವ ಎಲ್ಲ ಬೆಳೆಗಳು ಹಾನಿಗೊಳಗಾಗಿವೆ. ಕೇವಲ ಮನೆ ಹಾನಿ, ಜಾನುವಾರು ಸಾವುಗಳ ಬಗ್ಗೆ ಮಾಧ್ಯಮಗಳಿಂದ ವರದಿ ಆಲಿಸುತ್ತಿದ್ದಾರೆ ಹೊರತು ಸ್ಥಳಕ್ಕೆ ಅಧಿಕಾರಿಗಳು ತೆರಳಿ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿ ಈ ಬಗ್ಗೆ ವೈಜ್ಞಾನಿಕ ವರದಿ ಪಡೆದು ರೈತರಿಗೆ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಬೊಮ್ಮೆಗೌಡ, ರಾಜಯ್ಯ, ಭುಜಂಗಯ್ಯ ಮಾತನಾಡಿದರು. ಮಂಡಲ ಅಧ್ಯಕ್ಷ ವಿಶ್ವನಾಥ್‌, ತಾಪಂ ಸದಸ್ಯ ಮರೀಗೌಡ, ಶ್ರೀನಿಧಿ, ಲೋಕೇಶ್‌, ರಾಜಣ್ಣ, ಪ್ರಸನ್ನ, ನಳಿನಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ