ಆ್ಯಪ್ನಗರ

ಅಂಗಡಿ ಮಳಿಗೆ ತೆರವಿಗೆ ವಿರೋಧಿಸಿ ಪ್ರತಿಭಟನೆ

ಅಂಗಡಿ ಮಳಿಗೆ ತೆರವಿಗೆ ವಿರೋಧಿಸಿ ಪ್ರತಿಭಟನೆ ವಿಕ ಸುದ್ದಿಲೋಕ ಅರಕಲಗೂಡು ಗ್ರಾಮ ಪಂಚಾಯಿತಿಗೆ ಆದಾಯಗಳಿಸಿಕೊಳ್ಳುವ ಸಲುವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು ...

Vijaya Karnataka 29 Jun 2018, 5:00 am
ಅರಕಲಗೂಡು : ಗ್ರಾಮ ಪಂಚಾಯಿತಿಗೆ ಆದಾಯಗಳಿಸಿಕೊಳ್ಳುವ ಸಲುವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು ಅವುಗಳನ್ನು ತೆರವುಗೊಳಿಸದೆ ಯಥಾಸ್ಥಿತಿ ಕಾಪಾಡಬೇಕು ಎಂದು ತಾಲೂಕಿನ ದೊಡ್ಡಮಗ್ಗೆ ಗ್ರಾಮಸ್ಥರು, ಚುನಾಯಿತ ಸದಸ್ಯರು ಗುರುವಾರ ವಾಣಿಜ್ಯ ಮಳಿಗೆಗಳ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web hassan arakalagudu gramapanchayat complex shifting protest
ಅಂಗಡಿ ಮಳಿಗೆ ತೆರವಿಗೆ ವಿರೋಧಿಸಿ ಪ್ರತಿಭಟನೆ


ಹಲವು ಸದಸ್ಯರು,ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರು ಗ್ರಾಪಂ ಎದುರು ನೂತನವಾಗಿ ನಿರ್ಮಿಸಿರುವ ವಾಣಿಜ್ಯಮಳಿಗೆಗಳ ಮುಂದೆ ಜಮಾಯಿಸಿ ತಾಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿದರು. ರಾಜಕೀಯ ದುರುದ್ದೇಶದಿಂದ ಪಂಚಾಯಿತಿಗೆ ಆದಾಯ ತಂದುಕೊಂಡುವ ವಾಣಿಜ್ಯ ಮಳಿಗೆಗಳನ್ನು ನೆಲಸಮಗೊಳಿಸುವ ಕೆಲಸ ಅಧಿಕಾರಿಗಳ ಮೂಲಕ ನಡೆಯುತ್ತಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರತಿಭಟನಾನಿರತರು ಹೇಳಿದರು.

ಗ್ರಾಪಂ ಅಧ್ಯಕ್ಷ ರಂಗನಾಥ್‌ ಮಾತನಾಡಿ, ಸಾಮಾನ್ಯ ಸಭೆಯ ನಿರ್ಣಯದಂತೆ ಹೊಸದಾಗಿ 10ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಹಿಂದೆಯೂ ಇದೇ ಪಂಚಾಯಿತಿಯಿಂದ 20ಕ್ಕೂ ಅಧಿಕ ಮಳಿಗೆಗಳನ್ನು ರಸ್ತೆಯ ಪಕ್ಕದಲ್ಲಿ ನಿರ್ಮಿಸಿ ಬರುವ ಆದಾಯದಿಂದ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಇತ್ತೀಚೆಗೆ ಸರಕಾರದ ಅನುದಾನ ಕಡಿಮೆಯಾಗುತ್ತಿರುವ ಹಿನ್ನೆಲೆ ಆದಾಯ ಮೂಲಗಳನ್ನು ಕ್ರೋಢೀಕರಿಸುವ ಸಲುವಾಗಿ ಹೊಸದಾಗಿ ಮಳಿಗೆಗಳನ್ನು ಕಟ್ಟಲಾಗಿದೆ .ಬೇಸಿಗೆ ಕಾಲದಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕಾರಣ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆ ನಿವಾರಣೆಗೆಂದು ಜನರೇಟರ್‌ ಖರೀದಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಇಂತಹ ಹಲವು ಕಾರ್ಯಕ್ರಮ ಕೈಗೊಳ್ಳಬೇಕಾದರೇ ಆದಾಯ ಬೇಕಿದೆ. ಇದನ್ನು ಸರಿದೂಗಿಸುವ ಸಲುವಾಗಿ ವಾಣಿಜ್ಯ ಮಳೆಗಗಳನ್ನು ಕಟ್ಟಲಾಗಿದೆ. ಇವುಗಳನ್ನು ರಕ್ಷ ಣೆ ಮಾಡಿ ಆದಾ¿ ುಮೂಲ ಹೆಚ್ಚಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ತಾಪಂ ಮಾಜಿ ಸದಸ್ಯ ರಾಜೇಗೌಡ ಮಾತನಾಡಿ, ಗ್ರಾಪಂ ಸೇರಿದಂತೆ ಇತರೆ ಸರಕಾರ ಕಚೇರಿ ನಿರ್ಮಿಸಲು ದಾನಿಗಳು ನೀಡಿರುವ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಪಂಚಾಯಿತಿಗೆ ಆದಾಯ ಬರುವ ಸಲುವಾಗಿ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ ಹೊರತು ಅದು ಅಕ್ರಮವಲ್ಲ. ಪಂಚಾಯಿತಿ ಸಹ ಸ್ಥಳೀಯ ಸರಕಾರವಿದ್ದಂತೆ. ಇದನ್ನು ಮನಗಾಣದೆ ರಾಜಕೀಯ ಒತ್ತಡದಿಂದ ತಹಸೀಲ್ದಾರ್‌,ಇಒ ಪಂಚಾಯಿತಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿ ವಾಣಿಜ್ಯ ಮಳಿಗೆ ನೆಲಸಮಕ್ಕೆ ಮುಂದಾಗಿರುವುದು ಸರಿಯಲ್ಲ. ವಾಣಿಜ್ಯ ಮಳಿಗೆ ಕಟ್ಟಿದ್ದರೆ, ಪಿರಿಯಾಪಟ್ಟಣ ಹಾಸನ ನಡುವಿನ ರಸ್ತೆ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಎಲ್ಲ ವಾಣಿಜ್ಯಮಳಿಗೆಗಳನ್ನು ನೆಲಸಮಕ್ಕೆ ಲೋಕೋಪಯೋಗಿ ಮುಂದಾಗಲಿ. ಆಗ ನಾವೂ ಸಹ ಕಾನೂನಿಗೆ ತಲೆಬಾಗುತ್ತೇವೆ. ರಾಜಕೀಯ ಪ್ರೇರಿತವಾಗಿ ಮಳಿಗೆ ನೆಲಸಮಕ್ಕೆ ಮುಂದಾದರೆ ಇಡೀ ಗ್ರಾಮಸ್ಥರು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕಾರ : ತಹಸೀಲ್ದಾರ್‌ ನಂದೀಶ್‌, ಪಿಡಬ್ಲೂಡಿ ಎಂಜಿನಿಯರ್‌ ಅವರೊಂದಿಗೆ ಗ್ರಾಪಂಗೆ ಭೇಟಿ ನೀಡಿದ ಇಒ ಡಾ.ಯಶ್ವಂತ್‌ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. ಪಂಚಾಯಿತಿಯಿಂದ ವಾಣಿಜ್ಯಮಳಿಗೆ ನಿರ್ಮಿಸಿರುವ ಬಗ್ಗೆ ಸಮಗ್ರ ದಾಖಲಾತಿ ಕಲ್ಪಿಸಬೇಕಿದೆ. ಬಳಿಕೆ ರಾಜ್ಯ ರಸ್ತೆ ಹೆದ್ದಾರಿ ನಿಯಮ ಹಾಗೂ ಇತರೆ ವಿಚಾರಗಳ ಬಗ್ಗೆ ಚರ್ಚಿಸಲು ಅನುಕೂಲವಾಗಲಿದೆ .ಕೂಡಲೇ ಈ ಸಂಬಂಧ ಸಮಗ್ರ ದಾಖಲಾತಿಯನ್ನು ಸಲ್ಲಿಸುವಂತೆ ಪಿಡಿಒ ಮಂಜುನಾಥ್‌ಗೆ ಸೂಚನೆ ನೀಡಿದರು.

ಜಿಪಂ ಸದಸ್ಯ ರವಿ,ಗ್ರಾಪಂ ಸದಸ್ಯರಾದ ನಾಗರಾಜು, ಸಣ್ಣಸ್ವಾಮಿ, ಶಾರದಮ್ಮ, ಶೇಷಾದ್ರಿ, ಹರೀಶ್‌, ಕರವೇ ಅಧ್ಯಕ್ಷ ಅಶೋಕ್‌, ಮುಖಂಡರಾದ ಮಂಜುನಾಥ್‌,ರಮೇಶ್‌, ರಂಗಸ್ವಾಮಿ, ರಂಗೇಗೌಡ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ