ಆ್ಯಪ್ನಗರ

ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಬರ ಪೀಡಿತ ತಾಲೂಕು

ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಬರ ಪೀಡಿತ ತಾಲೂಕು ವಿಕ ಸುದ್ದಿಲೋಕ ಹಾಸನ ಜಿಲ್ಲೆಯ ಅರಸೀಕೆರೆ ,ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕನ್ನು ಬರಪೀಡಿತ ತಾಲೂಕುಗಳೆಂದು ...

Vijaya Karnataka 13 Oct 2018, 5:00 am
ಹಾಸನ: ಜಿಲ್ಲೆಯ ಅರಸೀಕೆರೆ ,ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕನ್ನು ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಿಸಿದೆ.
Vijaya Karnataka Web hassan arasikere channarayapattana beluru drought taluks government announce
ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಬರ ಪೀಡಿತ ತಾಲೂಕು


ಹಳೇಬೀಡು, ಹಗರೆ, ಬಿಕ್ಕೋಡು ಹೋಬಳಿಗಳಲ್ಲಿ ಉಂಟಾಗಿರುವ ಮಳೆಯ ಅಭಾವದ ಹಿನ್ನೆಲೆಯಲ್ಲಿ 2018ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯ ಅರಸೀಕೆರೆ, ಬೇಲೂರು ಹಾಗೂ ಚನ್ನರಾಯಪಟ್ಟಣ ತಾಲೂಕುಗÜಳಲ್ಲಿ ಉಂಟಾಗಿರುವ ಬೆಳೆ ನಷ್ಟವನ್ನು ಮೊಬೈಲ್‌ ಆ್ಯಪ್‌ ಮೂಲಕ ಹಾನಿಯಾಗಿರುವ ಬೆಳೆಗಳ ಛಾಯಚಿತ್ರಗಳನ್ನು ತೆಗೆದು ಎ್ಟಟ್ಠ್ಞd T್ಟ್ಠಠಿhಜ್ಞಿಜ ಮೂಲಕ ಬೆಳೆ ನಷ್ಟವನ್ನು ಅಂದಾಜಿಸಲಾಗಿರುತ್ತದೆ. ಕೃಷಿ ಇಲಾಖೆಯ ವರದಿಯಂತೆ ಅರಸೀಕೆರೆ ತಾಲೂಕಿನಲ್ಲಿ 13,938 ಹೆಕ್ಟೇರ್‌, ಬೇಲೂರು ತಾಲೂಕಿನಲ್ಲಿ 6,525 ಹೆಕ್ಟೇರ್‌ ಹಾಗೂ ಚನ್ನರಾಯಪಟ್ಟಣ ತಾಲೂಕಿನಲ್ಲಿ 3,850 ಹೆಕ್ಟೇರ್‌ ಒಟ್ಟು 24,313 ಹೆಕ್ಟೇರ್‌ಗಳಲ್ಲಿ ಕೃಷಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಕುಡಿಯುವ ನೀರು ಸರಬರಾಜು ಸಂಬಂಧ ಅರಸೀಕೆರೆ ತಾಲೂಕಿನ 9 ಹಾಗೂ ಬೇಲೂರು ತಾಲೂಕಿನ 2 ಗ್ರಾಮ ಸೇರಿ ಒಟ್ಟು 11 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅರಸೀಕೆರೆ ತಾಲೂಕಿನ 17 ಹಾಗೂ ಬೇಲೂರು ತಾಲೂಕಿನ ಒಟ್ಟು 21 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಒಟ್ಟು 6,52,921 ಟನ್‌ಗಳಷ್ಟು ಮೇವು ಲಭ್ಯವಿದ್ದು ಮುಂದಿನ 25 ವಾರಗಳವರೆಗೆ ನಿಭಾಯಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ