ಆ್ಯಪ್ನಗರ

ಗಂಡಸಿ: ಇಂದು ಹೋಬಳಿ ಮಟ್ಟಟದ ಸಾಹಿತ್ಯ ಸಮ್ಮೇಳನ

ಹಾಸನ: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗಂಡಸಿ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.8ರಂದು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ತಿಳಿಸಿದರು.

Vijaya Karnataka 8 Dec 2018, 5:00 am
ಹಾಸನ: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗಂಡಸಿ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.8ರಂದು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ತಿಳಿಸಿದರು.
Vijaya Karnataka Web hassan arasikere gandasi kannada sahitya sammelana december 8th
ಗಂಡಸಿ: ಇಂದು ಹೋಬಳಿ ಮಟ್ಟಟದ ಸಾಹಿತ್ಯ ಸಮ್ಮೇಳನ


ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನ ಅರಸೀಕೆರೆ ತಾಲೂಕಿನ ಗಂಡಿಸಿ ಹೋಬಳಿಯ ಬಾಗೀವಾಳು ನವ ಭಾರತ ಪ್ರೌಢಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಳಗ್ಗೆ 8.30ಕ್ಕೆ ಬಾಗೀವಾಳುವಿನ ಶಿವಕುಮಾರ್‌ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. 9.30ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಬಿ.ಎನ್‌. ರಾಮಸ್ವಾಮಿ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ತಾಕಸಾಪ ಕಾರ್ಯದರ್ಶಿ ಮಂಜುನಾಥ್‌, ದಿನೇಶ್‌, ನಿವೃತ್ತ ಶಿಕ್ಷಕ ಮಂಜಪ್ಪ, ಜಯಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜು ಭಾಗವಹಿಸಲಿದ್ದಾರೆ.

ಸಮ್ಮೇಳನವನ್ನು ಹಾಸನ ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಉದ್ಘಾಟಿಸಲಿದ್ದು, ಶಾಸಕ ಕೆ.ಎಂ. ಶಿವಲಿಂಗೇಗೌಡ ಉಪಸ್ಥಿತರಿರುವರು. ಕಸಾಪ ಗಂಡಸಿ ಹೋಬಳಿ ಅಧ್ಯಕ್ಷ ಕೆ.ಬಿ.ರಮೇಶ್‌ ಅಧ್ಯಕ್ಷತೆ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಗೆಳೆಯರ ಬಳಗವನ್ನು ಉದ್ಘಾಟಿಸುವರು. ನಂತರ ಸಮ್ಮೇಳನ ಅಧ್ಯಕ್ಷರ ಭಾಷಣವಿದೆ.

ಮಧ್ಯಾಹ್ನ 1ಕ್ಕೆ ಅರಸೀಕೆರೆ ತಾಲೂಕು ಬರ ನಿರ್ಮೂಲನೆಗೆ ಸವಾಲುಗಳು ಹಾಗೂ ಸಾಧ್ಯತೆಗಳು ಕುರಿತು ವಿಚಾರಗೋಷ್ಠಿ ನಡೆಯಲಿದೆ. ಆರ್‌.ಪಿ.ವೆಂಕಟೇಶ್‌ ಮೂರ್ತಿ ಅಧ್ಯಕ್ಷತೆ ವಹಿಸುವರು. ಪರಿಸರ ಪ್ರೇಮಿ ಸಿ.ಎನ್‌.ಅಶೋಕ್‌ ಆಶಯ ನುಡಿಯಲಿದ್ದಾರೆ. ನಂತರ ಸಾಧಕರಿಕೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಎವಿಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್‌.ಎಲ್‌. ಮಲ್ಲೇಶ್‌ ಗೌಡ ಉಪನ್ಯಾಸ ನೀಡುವರು. ರವಿನಾಕಲಗೂಡು, ಜಿ.ಒ.ಮಹಂತಪ್ಪ, ಹರೀಶ್‌ ಕಲ್ಲಹಳ್ಳಿ ಭಾಗವಹಿಸುವರು.

ಗಂಡಸಿ ಹೋಬಳಿ ಅಧ್ಯಕ್ಷ ಕೆ.ಬಿ.ರಮೇಶ್‌, ಗೌರವಾಧ್ಯಕ್ಷ ತಿಮ್ಮೇಶ್‌ ಪ್ರಭು, ಮಹಾಲಿಂಗೇಗೌಡ, ಜಯರಾಂ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ