ಆ್ಯಪ್ನಗರ

ಬೇಲೂರು: ಎಪಿಎಂಸಿ ಗೇಟ್‌ಗೆ ಬೀಗ ಹಾಕಿ ರೈತರ ಪ್ರತಿಭಟನೆ

ಎಪಿಎಂಸಿಗೆ ಬೀಗ ಹಾಕಿ ರೈತರ ಪ್ರತಿಭಟನೆ * ಬೆಳಗ್ಗೆ, ಸಂಜೆ ರೈತರು ತರಕಾರಿ ಮಾರಾಟ ಮಾಡಲು ಅವಕಾಶಕ್ಕೆ ಆಗ್ರಹ ---------------- ವಿಕ ಸುದ್ದಿಲೋಕ ಬೇಲೂರು ಕೃಷಿ ಉತ್ಪನ್ನ ...

Vijaya Karnataka 7 Aug 2018, 5:00 am
ಬೇಲೂರು: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಸಂಜೆ ಹಾಗೂ ಬೆಳಗ್ಗೆ ಎರಡು ಅವಧಿಯಲ್ಲೂ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಭಾನುವಾರ ರಾತ್ರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯದ್ವಾರದ ಗೇಟ್‌ಗೆ ಬೀಗ ಹಾಕಿ ರೈತರು ಪ್ರತಿಭಟನೆ ನಡೆಸಿದರು.
Vijaya Karnataka Web hassan beluru apmc formers protest demand give permision sell vegitables two times
ಬೇಲೂರು: ಎಪಿಎಂಸಿ ಗೇಟ್‌ಗೆ ಬೀಗ ಹಾಕಿ ರೈತರ ಪ್ರತಿಭಟನೆ


ರೈತ ಮುಖಂಡ ಪುಟ್ಟಸ್ವಾಮಿ, ರೈತರು ಬೆಳೆದ ತರಕಾರಿ ಬೆಳೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಜೆ ಹಾಗೂ ಬೆಳಗ್ಗೆ ಅವಧಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ಕಳೆದ 15 ದಿನದಿಂದ ನಮ್ಮ ತರಕಾರಿ ಬೆಳೆಯನ್ನು ಖರೀದಿಸುವ ವರ್ತಕರು ಬೆಳಗ್ಗೆ ಮಾತ್ರ ಖರೀದಿಸುತ್ತಿದ್ದಾರೆ. ವರ್ತಕರು ತಮ್ಮದೇ ಗುಂಪು ಮಾಡಿಕೊಂಡಿದ್ದು ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೆ ಗೇಟ್‌ ಬಳಿ ಒಂದುಗೂಡುತ್ತಾರೆ. ವರ್ತಕರಲ್ಲಿ ಒಬ್ಬ ವ್ಯಕ್ತಿಯು ನೀಡುವ ಸೂಚನೆಯಂತೆ ಎಲ್ಲ ವರ್ತಕರು ಒಂದೇ ಸಲ ಎಪಿಎಂಸಿಗೆ ಪ್ರವೇಶಿಸಿಸಿ ಉತ್ಪನ್ನಗಳ ಖರೀದಿಸಿ ತೆರಳುತ್ತಾರೆ. ನಂತರ ರೈತರು ತಂದ ತರಕಾರಿ ಉತ್ಪನ್ನಗಳನ್ನು ಕೊಳ್ಳುವವರು ಇಲ್ಲದೆ ಕೇಳಿದಷ್ಟು ಬೆಲೆಗೆ ನೀಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಆದ್ದರಿಂದ ಸಂಜೆ ವೇಳೆಯೂ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಇದರಿಂದ ರೈತರು ನಷ್ಟ ಅನುಭವಿಸುವುದು ತಪ್ಪುತ್ತದೆ. ಸಂಜೆ ವೇಳೆ ರೈತರಿಂದ ಪದಾರ್ಥಗಳನ್ನು ಖರೀದಿಸಿದರೆ ಖರೀದಿಸುವ ವರ್ತಕರಿಗೆ 2 ಸಾವಿರ ರೂ. ದಂಡ ವಿಧಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಕೆಲ ವರ್ತಕರು ಸಂಜೆ ರೈತರ ಪದಾರ್ಥಗಳನ್ನು ಖರೀದಿಸುವುದಿಲ್ಲ ಎಂದು ಹೇಳಿದರು.

ಎಪಿಎಂಸಿ ಆವರಣದಲ್ಲಿರುವ ವ್ಯಾಪಾರಿ ಕಟ್ಟೆಗಳನ್ನು ವರ್ತಕರೆ ಆಕ್ರಮಿಸಿಕೊಂಡಿದ್ದಾರೆ. ರೈತರಿಗೆ ಇರುವ ಕಟ್ಟೆಗಳಲ್ಲಿ ರೈತರು ವ್ಯಾಪಾರ ಮಾಡಲಾಗದೆ ಕೆಳ ಭಾಗದಲ್ಲಿ, ಇಲ್ಲವೇ ರಸ್ತೆಯಲ್ಲಿ ವ್ಯಾಪಾರ ಮಾಡುವ ಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎರಡು ಅವಧಿಗೆ ವ್ಯಾಪಾರಕ್ಕೆ ಅವಕಾಶ ನೀಡದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿ ಪ್ರತಿಭಟನೆ ಕೈಬಿಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ